ADVERTISEMENT

ಇಂದು ದೊಡ್ಡಬಳ್ಳಾಪುರ ಸ್ವಯಂ ಪ್ರೇರಿತ ಬಂದ್‌

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 6:45 IST
Last Updated 5 ಜನವರಿ 2026, 6:45 IST
   

ದೊಡ್ಡಬಳ್ಳಾಪುರ: ನೇಕಾರಿಕೆ ಉದ್ಯಮದ ಉಳಿವಿಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ನೇಕಾರ ಹಿತರಕ್ಷಣಾ ಸಮಿತಿ ಸೇರಿದಂತೆ ವಿವಿಧ ನೇಕಾರ ಸಂಘಟನೆಗಳು ಜ.5 ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ದೊಡ್ಡಬಳ್ಳಾಪುರ ಬಂದ್‌ಗೆ ಕರೆ ನೀಡಿವೆ.

ದೊಡ್ಡಬಳ್ಳಾಪುರದ ಜನರ ಬದುಕಿನ ಜೀವನಾಡಿಯಾಗಿರುವ ನೇಕಾರಿಕೆ ಹಲವಾರು ಬಿಕ್ಕಟ್ಟುಗಳನ್ನು ಎದರುರಿಸುತ್ತಿದೆ.ಇವುಗಳ ಪರಿಹಾರಕ್ಕಾಗಿ ನೇಕಾರರ ಸಂಘಟನೆಗಳು ಶಾಸಕರಿಂದ ಮೊದಲುಗೊಂಡು ಮುಖ್ಯಮಂತ್ರಿಗಳವರೆಗೂ ಹಲವಾರು ಬಾರಿ ಮನವಿಗಳನ್ನು ನೀಡಿದ್ದರೂ ಸಹ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಯಾವುದೇ ಕ್ರಮ ಕೂಗೊಂಡಿಲ್ಲ. ಇದರ ವಿರುದ್ಧ ನೇಕಾರರ ಸಂಘಟನೆಗಳು ಕರೆ ನೀಡಿರುವ ಬಂದ್‌ ಅನ್ನು ಬೆಂಬಲಿಸಲಾಗುವುದು ಎಂದು ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ವಿ.ಎಸ್‌.ರವಿಕುಮಾರ್‌ ತಿಳಿಸಿದ್ದಾರೆ.

ಬಂದ್‌ನಲ್ಲಿ ಭಾಗವಹಿಸಲಾಗುವುದು ಎಂದು ಸಿಪಿಐಎಂ ತಾಲ್ಲೂಕು ಸಮಿತಿ ಕಾರ್ಯದರ್ಶಿ ಎಸ್‌.ರುದ್ರಾರಾಧ್ಯ ತಿಳಿಸಿದ್ದಾರೆ.

ADVERTISEMENT

ಬಲವಂತದ ಬಂದ್‌ ವಿರುದ್ಧ ಕ್ರಮ: ವಿವಿಧ ನೇಕಾರ ಸಂಘಟನೆಗಳು ಜ.5 ರಂದು ದೊಡ್ಡಬಳ್ಳಾಪುರ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಅಗತ್ಯ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದೆ ಎಂದು ಡಿವೈಎಸ್‌ಪಿ ಪಾಂಡುರಂಗ ತಿಳಿಸಿದ್ದಾರೆ.

ಸ್ವಯಂ ಪ್ರೇರಿತವಾಗಿ ಬಂದ್‌ ಮಾಡಬಹುದು. ಆದರೆ ಯಾವುದೇ ರೀತಿಯ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಬಾಗಿಲು ಮುಚ್ಚಿಸಲು ಪ್ರಯತ್ನಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಪೊಲೀಸರು ನಿಗಾವಹಿಸಲಿದ್ದಾರೆ. ಬಲವಂತವಾಗಿ ಬಂದ್‌ ಮಾಡಿಸುವ ಪ್ರಯತ್ನಗಳನ್ನು ವಿಡಿಯೋ ಮಾಡಿಕೊಳ್ಳುವ ಮೂಲಕ ದೂರು ದಾಖಲಿಸಲಾಗುವುದು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.