ADVERTISEMENT

ಬಂಗಾರಪೇಟೆ: ಕಾಡು ಹಂದಿಗಳ ಹಾವಳಿ; ಭತ್ತದ ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 7:23 IST
Last Updated 5 ಅಕ್ಟೋಬರ್ 2025, 7:23 IST
ಬಂಗಾರಪೇಟೆ ತಾಲ್ಲೂಕಿನ ಸಂತೋಜಿ ರಾವ್ ಅವರ ಭತ್ತದ ಬೆಳೆಯನ್ನು ಹಂದಿಗಳು ನಾಶ ಮಾಡಿರುವುದು
ಬಂಗಾರಪೇಟೆ ತಾಲ್ಲೂಕಿನ ಸಂತೋಜಿ ರಾವ್ ಅವರ ಭತ್ತದ ಬೆಳೆಯನ್ನು ಹಂದಿಗಳು ನಾಶ ಮಾಡಿರುವುದು   

ಬಂಗಾರಪೇಟೆ: ಕಾಡು ಹಂದಿಗಳ ದಾಳಿಯಿಂದ ಭತ್ತದ ಬೆಳೆ ನಾಶವಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಾಲ್ಲೂಕಿನ ಗಡಿಭಾಗದಲ್ಲಿರುವ ಕನಮನಹಳ್ಳಿ ಗ್ರಾಮದ ರೈತ ಸಂತೋಜಿ ರಾವ್ ಅವರ ಭತ್ತದ ಬೆಳೆ ಹಂದಿಗಳ ದಾಳಿಗೆ ಗುರಿಯಾಗಿ ₹30 ಸಾವಿರ ನಷ್ಟವಾಗಿದೆ. ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲೂ ಇದೇ ರೀತಿಯ ಸಮಸ್ಯೆ ಉಂಟಾಗಿದೆ.

ಬೆಳೆ ಕೊಯ್ಲು ಸಮಯದಲ್ಲಿ ಹಂದಿಗಳು ಗದ್ದೆಗಳಿಗೆ ನುಗ್ಗಿ ಬೆಳೆಯನ್ನು ನಾಶಪಡಿಸುತ್ತಿವೆ. ಹಿಂಡು ಹಿಂಡಾಗಿ ಬರುವ ಈ ಹಂದಿಗಳ ದಾಳಿಯಿಂದ ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ರೈತರು ಅರಣ್ಯ ಇಲಾಖೆಯು ತಕ್ಷಣ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

ರೈತರಾದ ಆನಂದ್ ರಾವ್ ಮತ್ತು ಕೆ.ಎಂ.ಮಂಜುನಾಥ್ ಅವರು, ಅರಣ್ಯ ಇಲಾಖೆಯು ಕಾಡು ಹಂದಿಗಳ ಹಾವಳಿ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಬೆಳೆ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಕೋಲಾರದ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗರ್, ‘ಹಂದಿಗಳ ದಾಳಿಯಿಂದ ಆಗಿರುವ ಬೆಳೆ ನಾಶವನ್ನು ಪರಿಶೀಲಿಸಿ ರೈತರಿಗೆ ನಷ್ಟ ಪರಿಹಾರ ನೀಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ಬಂಗಾರಪೇಟೆ:ಹಂದಿಗಳು ಭತ್ತದ ಗದ್ದೆಗಳಿಗೆ ನುಗ್ಗಿ, ಕೊಯ್ಲಿಗೆ ಬಂದಿರುವ ಭತ್ತದ ಪೈರನ್ನು ನಾಶ ಮಾಡುತ್ತಿವೆ, ಇದರಿಂದಾಗಿ

ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆ ಹಂದಿ ದಾಳಿಯಿಂದ ನಾಶವಾಗಿ, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಲ್ಲೂಕಿನ ಗಡಿಭಾಗದಲ್ಲಿರುವ ಕನಮನಹಳ್ಳಿ ಗ್ರಾಮದ ರೈತ ಸಂತೋಜಿ ರಾವ್ ರವರ ಭತ್ತದ ಮಂಗಳವಾರ ರಾತ್ರಿ ನಾಶ ಮಾಡಿದ್ದು ಸುಮಾರು ಮುವತ್ತು ಸಾವಿರ ರೂಪಾಯಿಗಳಿಗೂ ಹೆಚ್ಚಿನ ನಷ್ಟವಾಗಿದೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ

ಹಂದಿಗಳ ಹಾವಳಿಯಿಂದ ಭತ್ತದ ಬೆಳೆ ನಾಶವಾಗುತ್ತಿರುವುದು ಒಂದು ಗಂಭೀರ ಸಮಸ್ಯೆಯಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಬೆಳೆ ಕೊಯ್ಲಿನ ಸಮಯದಲ್ಲಿ ಹಂದಿಗಳು ಗದ್ದೆಗಳಿಗೆ ನುಗ್ಗಿ ಬೆಳೆಯುವ ಭತ್ತವನ್ನು ತಿಂದು ನಾಶ ಮಾಡುತ್ತಿವೆ. ಈ ಸಮಸ್ಯೆಯಿಂದ ರೈತರು ತಕ್ಕ ಪರಿಹಾರ ನೀಡುವಂತೆ ಮತ್ತು ಅರಣ್ಯ ಇಲಾಖೆ ಹಂದಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ರೈತರು ಒತ್ತಾಯಿಸುತ್ತಿದ್ದಾರೆ.

ಕಾಡು ಹಂದಿಗಳ ಹಾವಳಿ ಭತ್ತದ ಬೆಳೆಗಾರರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಹಂದಿಗಳು ಹಿಂಡು ಹಿಂಡಾಗಿ ಬಂದು ಬೆಳೆಯುತ್ತಿರುವ ಭತ್ತದ ಬೆಳೆಯನ್ನು ನಾಶಪಡಿಸುತ್ತಿವೆ, ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗುತ್ತಿದೆ. ಇದಕ್ಕೆ ಪರಿಹಾರವಾಗಿ ಅರಣ್ಯ ಇಲಾಖೆಯು ಕಾಡಿನಲ್ಲಿ ಹಂದಿಗಳಿಗೆ ಆಹಾರ ಸಿಗುವ ಗಿಡಗಳನ್ನು ಬೆಳೆಸಬೇಕು ಮತ್ತು ಹಂದಿ ದಾಳಿಯಿಂದ ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಆಗ್ರಹಿಸಿದರು.

ಅರಣ್ಯ ಇಲಾಖೆಯು ಕಾಡು ಹಂದಿಗಳ ಹಾವಳಿಯನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳವ ಮೂಲಕ ನಿಯಂತ್ರಿಸಬೇಕು ಹಾಗೂ ಬೆಳೆ ನಾಶಕ್ಕೆ ಒಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು
ಆನಂದ್ ರಾವ್ ಚತ್ತಗುಟ್ಲಹಳ್ಳಿ
ಕಾಡು ಹಂದಿಗಳ ಹಿಂಡುಗಳು ರಾತ್ರಿ ಹೊತ್ತು ಜಮೀನುಗಳಿಗೆ ನುಗ್ಗಿ, ಭತ್ತದ ತೆನೆಗಳನ್ನು ತಿಂದು ಮತ್ತು ತುಳಿದು ನಾಶಪಡಿಸುತ್ತವೆ,ರೈತರು ಕಷ್ಟಪಟ್ಟು ಬೆಳೆದ ಬೆಳೆ ನಾಶವಾಗುವುದರಿಂದ ದೊಡ್ಡ ಆರ್ಥಿಕ ನಷ್ಟ ಅನುಭವಿಸುವಂತಾಗಿದ್ದು, ಲಭಿಸಬೇಕಿದ್ದ ಲಾಭ ಕೈ ತಪ್ಪಿ ಹೋಗುತ್ತದೆ.
ಸಂತೋಜಿ ರಾವ್ ಕನಮನಹಳ್ಳಿ ಗ್ರಾಮದ ಭತ್ತ ಬೆಳೆಗಾರ
ಕಾಡು ಹಂದಿಗಳ ಹಾವಳಿಯಿಂದಾಗಿ ಭತ್ತದ ಬೆಳೆ ನಾಶವಾಗುತ್ತಿದ್ದು, ರೈತರು ದೊಡ್ಡ ನಷ್ಟವನ್ನು ಅನುಭವಿಸುತ್ತಿದ್ದಾರೆ,ಬೆಳೆ ನಷ್ಟವನ್ನು ತಡೆಗಟ್ಟುವಲ್ಲಿ ಮತ್ತು ಸೂಕ್ತ ಪರಿಹಾರ ಒದಗಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ
ಕೆ ಎಂ ಮಂಜುನಾಥ ಮಾಜಿ ಗ್ರಾ ಪಂ ಅಧ್ಯಕ್ಷರು
ಹಂದಿಗಳ ದಾಳಿಯಿಂದ ಆಗಿರುವ ಬೆಳೆ ನಾಶವನ್ನು ಪರೀಶೀಲನೆ ಮಾಡಿ ರೈತರಿಗೆ ಬೆಳೆ ನಷ್ಟ ಪರಿಹಾರವನ್ನು ನೀಡಲು ಸೂಕ್ತ ಕ್ರಮವನ್ನು ಕೈಗೊಳ್ಳುತ್ತೇವೆ
ಸರೀನಾ ಸಿಕ್ಕಲಿಗರ್, ಅರಣ್ಯ ಸಂರಕ್ಷಣಾಧಿಕಾರಿ ಕೋಲಾರ
ಬಂಗಾರಪೇಟೆ ತಾಲ್ಲೂಕಿನ ಸಂತೋಜಿ ರಾವ್ ರವರ ಭತ್ತವನ್ನು ಹಂದಿಗಳು ನಾಶ ಮಾಡಿರುವುದು
ಬಂಗಾರಪೇಟೆ ತಾಲ್ಲೂಕಿನ ಸಂತೋಜಿ ರಾವ್ ರವರ ಭತ್ತವನ್ನು ಹಂದಿಗಳು ನಾಶ ಮಾಡಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.