
ಆನೇಕಲ್: ಕಳೆದ ಎರಡು ದಿನಗಳಿಂದ ಗ್ರಾಮಗಳಲ್ಲಿ ಸುತ್ತಾಡುತ್ತಾ ಜನರಲ್ಲಿ ಭೀತಿ ಹುಟ್ಟಿಸಿರುವ ಒಂಟಿ ಕೊಂಬಿನ ಕಾಡೆಮ್ಮೆಯೊಂದು ಕಮ್ಮಸಂದ್ರ ಅಗ್ರಹಾರದಲ್ಲಿ ಗುರುವಾರ ಕಾಣಿಸಿಕೊಂಡಿದೆ. ದ್ವಿಚಕ್ರ ವಾಹನಗಳನ್ನು ಒಂಟಿ ಕೊಂಬಿನಿಂದ ಗುದ್ದಿ ಎತ್ತಸೆದಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕಳೆದ ಎರಡು ದಿನಗಳಿಂದ ಕಾಡಿನಿಂದ ತಪ್ಪಿಸಿಕೊಂಡು ಬಂದಿರುವ ಕಾಡೆಮ್ಮೆ ಬ್ಯಾಗಡದೇನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಸೊಪ್ಪಳ್ಳಿ, ದೊಡ್ಡಹಾಗಡೆ, ಕಮ್ಮಸಂದ್ರ ಅಗ್ರಹಾರದಲ್ಲಿ ಓಡಾಡುತ್ತಿದೆ.
ಕಾಡೆಮ್ಮೆ ಓಡಾಟದಿಂದಾಗಿ ಸ್ಥಳೀಯ ರೈತರು ಮತ್ತು ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಕಮ್ಮಸಂದ್ರದಲ್ಲಿ ನಿರ್ಮಾಣ ಹಂತದಲ್ಲಿರುವ ಲೇಔಟ್‌ನಲ್ಲಿ ಬೀಡುಬಿಟ್ಟಿದೆ.
ಕಾಡೆಮ್ಮೆ ಸೆರೆಗೆ ಡ್ರೋನ್ ಬಳಕೆ: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಕಾಡೆಮ್ಮೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಡ್ರೋನ್ ಮೂಲಕ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.