ADVERTISEMENT

ದೊಡ್ಡಬಳ್ಳಾಪುರ: 15 ಮಂದಿ ಕಾರ್ಮಿಕರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 15:04 IST
Last Updated 14 ಮಾರ್ಚ್ 2020, 15:04 IST
ಬಾಲಕಾರ್ಮಿಕರು ವಾಸವಿದ್ದ ಮುಪ್ಪಡಿಘಟ್ಟ ಗ್ರಾಮದ ಸಮೀಪದ ಟೆಂಟ್‌ಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು
ಬಾಲಕಾರ್ಮಿಕರು ವಾಸವಿದ್ದ ಮುಪ್ಪಡಿಘಟ್ಟ ಗ್ರಾಮದ ಸಮೀಪದ ಟೆಂಟ್‌ಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು   

ದೊಡ್ಡಬಳ್ಳಾಪುರ: ಮಾನವ ಕಳ್ಳಸಾಗಣೆಗೆ ಒಳಗಾಗಿದ್ದ 15ಮಂದಿ ಕಾರ್ಮಿಕರನ್ನು ಮುಪ್ಪಡಿಘಟ್ಟ ತೋಟದಿಂದ ರಕ್ಷಣೆ ಮಾಡಲಾಗಿದೆ. ಇದರಲ್ಲಿ ಕೆಲ ಬಾಲಕಾರ್ಮಿಕರು ಇದ್ದಾರೆ. ಸಂತ್ರಸ್ತರು ಎರಡು ವರ್ಷಗಳಿಂದ ನೀಲಗಿರಿ ಮರಕಡಿಯುವ ಕೆಲಸ ಮಾಡುತ್ತಿದ್ದರು.

ರಾಜ್ಯದ ವಿವಿಧ ಜಿಲ್ಲೆಗಳ ನೀಲಗಿರಿ ತೋಪುಗಳಲ್ಲೂ ದುಡಿಯಲು ಸಾಗಣೆ ಮಾಡಲಾಗುತ್ತಿತ್ತು. ಪೊಲೀಸ್ ಇಲಾಖೆ, ರಾಜ್ಯ ಮಾನವ ಹಕ್ಕುಗಳ ಆಯೋಗ ಹಾಗೂ ಇಂಟರ್‌ ನ್ಯಾಷನಲ್ ಜಸ್ಟಿಸ್ ಮಿಷನ್ ಎನ್‍ಜಿಒ ನೆರವಿನೊಂದಿಗೆ ಈ ಕಾರ್ಮಿಕರನ್ನು ರಕ್ಷಿಸಲಾಗಿದೆ. ಮಾಲೀಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT