ADVERTISEMENT

ಬೆಟ್ಟ ಅರಣ್ಯೀಕರಣಕ್ಕೆ ಕ್ರಮ

ವಿಶ್ವ ಪರಿಸರ ದಿನಾಚರಣೆ: ನರೇಗಾ ಅಡಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 17:07 IST
Last Updated 4 ಜೂನ್ 2020, 17:07 IST
ಸೂಲಿಬೆಲೆ ಸರ್ಕಾರಿ ಪದವಿ ಕಾಲೇಜು ಮತ್ತು ಪಂಚಾಯತಿ ಸಹಯೋಗದಲ್ಲಿ ನೆಟ್ಟ ಸಸಿಗಳು ಬೆಳೆದು ಹಸಿರನ್ನು ಚೆಲ್ಲುತ್ತಿರುವುದು
ಸೂಲಿಬೆಲೆ ಸರ್ಕಾರಿ ಪದವಿ ಕಾಲೇಜು ಮತ್ತು ಪಂಚಾಯತಿ ಸಹಯೋಗದಲ್ಲಿ ನೆಟ್ಟ ಸಸಿಗಳು ಬೆಳೆದು ಹಸಿರನ್ನು ಚೆಲ್ಲುತ್ತಿರುವುದು   

ಸೂಲಿಬೆಲೆ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ, ಗ್ರಾಮ ಪಂಚಾಯಿತಿ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕೆಲವು ವರ್ಷಗಳ ಹಿಂದೆ ಸೂಲಿಬೆಲೆಯ ಸರ್ಕಾರಿ ಶಾಲಾ ಕಾಲೇಜು ಹಾಗೂ ಸ್ಮಶಾನ ಮತ್ತಿತರ ಕಡೆಗಳಲ್ಲಿ ನೆಟ್ಟಿದ ಸಸಿಗಳು ಬೆಳೆದು ಮರ ಬೆಳೆಸುವ ಯೋಜನೆಗಳು ಫಲ ನೀಡಿವೆ.

ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆಯಿಂದ ರೂಪುಗೊಂಡ ಯೋಜನೆಗಳು ಆಶಾದಾಯಕವಾಗಿರುವ ಹಿನ್ನೆಲೆಯಲ್ಲಿ ಕಳೆದ ವಾರ ಇಂಜನಹಳ್ಳಿ ಗ್ರಾಮದ ಬರಡು ಬೆಟ್ಟದ ಮೇಲೆ ಸಸಿಗಳನ್ನು ನೆಟ್ಟು ಅರಣ್ಯ ನಿರ್ಮಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.

ಶುಕ್ರವಾರ ಪರಿಸರ ದಿನಾಚರಣೆ ಪ್ರಯುಕ್ತ ನೇರಳೆ, ಹುಣಸೆ, ಶಿವಾನಿ, ಸಿಲ್ವರ್ ಸೇರಿದಂತೆ ಮತ್ತಿತರ ಜಾತಿಯ 1,500 ಸಸಿಗಳನ್ನು ನೆಡುವ ಮೂಲಕ ಇಂಜನಹಳ್ಳಿ ಬೆಟ್ಟದ ಅರಣ್ಯೀಕರಣವನ್ನು ಒರೋಹಳ್ಳಿ ಗ್ರಾಮ ಪಂಚಾಯಿತಿ ನರೇಗಾ ಯೋಜನೆ, ಸಾಮಾಜಿಕ ಅರಣ್ಯ ಇಲಾಖೆ ಹೊಸಕೋಟೆ, ಮೈರಾಡ್ ಸಂಸ್ಥೆ ಹಾಗೂ ರೋಟರಿ ಬೆಂಗಳೂರು ಕಂಟೋನ್ಮೆಂಟ್, ಡಿಜಿಟೇ ಇನ್ಫೋಟೆಕ್ ಪ್ರೈವೇಟ್(ಲಿ) ಸಹಯೋಗದಲ್ಲಿ ರೂಪಿಸಲಾಗಿದೆ.ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 100 ಸಸಿ ನೆಡುವುದು ಸೇರಿ ತಾಲ್ಲೂಕಿನಲ್ಲಿ ಒಟ್ಟು 1 ಲಕ್ಷ ಸಸಿ ನೆಡುವ ಯೋಜನೆಯಿದೆ ಎಂದುಹೊಸಕೋಟೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಶ್ರೀನಾಥ್ ಗೌಡ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.