ADVERTISEMENT

ದಕ್ಷಿಣ ಕೊರಿಯಾಗೆ ದೊಡ್ಡಬಳ್ಳಾಪುರ ಯೋಗ ಪಟುಗಳು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 14:56 IST
Last Updated 2 ಏಪ್ರಿಲ್ 2019, 14:56 IST
9ನೇ ಏಷ್ಯನ್ ಯೋಗ ಚಾಪಿಯನ್‌ಷಿಪ್‍ಗೆ ಆಯ್ಕೆಯಾದ ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರದ ಯೋಗ ಪಟುಗಳು
9ನೇ ಏಷ್ಯನ್ ಯೋಗ ಚಾಪಿಯನ್‌ಷಿಪ್‍ಗೆ ಆಯ್ಕೆಯಾದ ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರದ ಯೋಗ ಪಟುಗಳು   

ದೊಡ್ಡಬಳ್ಳಾಪುರ: ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ 9 ನೇ ಏಷ್ಯನ್ ಯೋಗ ಚಾಂಪಿಯನ್ ಷಿಪ್‌ಗೆ ನಿಸರ್ಗ ಯೋಗ ಕೇಂದ್ರದ ಯೋಗ ಪಟುಗಳು ಆಯ್ಕೆಯಾಗಿದ್ದಾರೆ.

ಮಾರ್ಚ್‌ 30 ರವರೆಗೆ ಜಾರ್ಖಂಡ್‌ ರಾಜ್ಯದ ರಾಂಚಿಯಲ್ಲಿ ನಡೆದ 3 ನೇ ಫೆಡರೇಷನ್ ಕಪ್ ಯೋಗ ಚಾಂಪಿಯನ್‍ಷಿಪ್‍ನಲ್ಲಿ ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರದ ಯೋಗಪಟುಗಳಾದ ಕೆ.ವಿನಯ್ ಕುಮಾರ್ (ಶ್ರೀ ದೇವಲ ಮಹರ್ಷಿ ವಿದ್ಯಾನಿಕೇತನ) ಯೋಗದಲ್ಲಿ 5ನೇ ಸ್ಥಾನ ಹಾಗೂ ರಿದಮಿಕ್ ಯೋಗ ಸ್ಪರ್ಧೆಯಲ್ಲಿ ಎಲ್‌.ಎ. ಪುನೀತ್ ಮತ್ತು ವಿನಯ್‌ಕುಮಾರ್ ಜೊತೆಗೂಡಿ 4ನೇ ಸ್ಥಾನ ಪಡೆದಿದ್ದಾರೆ.

ಯೋಗದಲ್ಲಿ ಎಂ.ಆರ್.ಜಾಹ್ನವಿ (ಎಂ.ಎಸ್.ವಿ.ಪಬ್ಲಿಕ್ ಸ್ಕೂಲ್‌), ಪಿ.ವಿ.ವರ್ಷಿಣಿ (ಸ್ವಾಮಿ ವಿವೇಕಾನಂದ ಆಂಗ್ಲ ಪ್ರೌಢ ಶಾಲೆ) ಎಲ್‌.ಎ.ಪುನೀತ್ (ಕೊಂಗಾಡಿಯಪ್ಪ ಪ್ರೌಢ ಶಾಲೆ) ಆಯ್ಕೆಯಾಗಿದ್ದಾರೆ.

ADVERTISEMENT

ಯೋಗ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಅಶೋಕ್ ಕುಮಾರ್ ಅಗರ್ ವಾಲ್, ಕರ್ನಾಟಕ ಸ್ಟೇಟ್ ಅಮೇಚುರ್ ಯೋಗ ಸ್ಪೋಟ್ಸರ್‌ ಅಸೋಸಿಯೇಷನ್‍ನ ಅಧ್ಯಕ್ಷ ಗಂಗಾಧರಪ್ಪ, ಉಪಾಧ್ಯಕ್ಷ ಎ. ನಟರಾಜ್, ಸಹ ಕಾರ್ಯದರ್ಶಿ ಬಿ.ಎಂ. ಗಿರೀಶ್, ಜೋನಲ್ ಸೆಕ್ರೆಟರಿ ಕೆ. ಪ್ರಭು ಬಹುಮಾನ ವಿತರಣಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಏಷ್ಯನ್ ಯೋಗ ಸ್ಪೋರ್ಟ್ಸ್‌ ಚಾಂಪಿಯನ್ ಷಿಪ್‌ಗೆ ಸ್ಪರ್ಧೆಗೆ ಆಯ್ಕೆಯಾಗಿರುವ ಯೋಗಪಟುಗಳನ್ನು ನಿಸರ್ಗ ಯೋಗ ಕೇಂದ್ರದ ಅಧ್ಯಕ್ಷ ಎಚ್.ಸಿ.ರವೀಂದ್ರ, ಕಾರ್ಯದರ್ಶಿ ಯೋಗ ನಟರಾಜ್‌, ಖಜಾಂಚಿ ಶ್ಯಾಮಸುಂದರ್, ಕರ್ನಾಟಕ ಅಮೇಚುರ್ ಯೋಗ ಸ್ಪೋಟ್ಸರ್‌ ಅಸೋಸಿಯೇಷನ್‍ನ ಕಾರ್ಯದರ್ಶಿ ಪ್ರೊ.ಎಂ.ಜಿ. ಅಮರನಾಥ್ ಹಾಗೂ ಯೋಗ ಕೇಂದ್ರದ ಶಿಕ್ಷಕರು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.