ADVERTISEMENT

ಅಪ್ಪಣ್ಣನ ಮೂರ್ತಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2014, 10:08 IST
Last Updated 14 ಫೆಬ್ರುವರಿ 2014, 10:08 IST
ಮೂಡಲಗಿಯಲ್ಲಿ ನೂತನವಾಗಿ ನಿರ್ಮಿಸಿರುವ ಶಿವಶರಣ ಹಡಪದ ಅಪ್ಪಣ್ಣ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಿರುವ ಮೂರ್ತಿ ಹಾಗೂ ಕಳಸವನ್ನು ಕುಂಭಹೊತ್ತ ಸುಮಂಗಲಿಯರು ಸ್ವಾಗತಿಸಿದರು.
ಮೂಡಲಗಿಯಲ್ಲಿ ನೂತನವಾಗಿ ನಿರ್ಮಿಸಿರುವ ಶಿವಶರಣ ಹಡಪದ ಅಪ್ಪಣ್ಣ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಿರುವ ಮೂರ್ತಿ ಹಾಗೂ ಕಳಸವನ್ನು ಕುಂಭಹೊತ್ತ ಸುಮಂಗಲಿಯರು ಸ್ವಾಗತಿಸಿದರು.   

ಮೂಡಲಗಿ: ಜಂಬೂ ಸವಾರಿ, ಕುಂಭ ಹೊತ್ತ ಸುಮಂಗಲಿಯರು,ಬಸವಾದಿ ಶರಣರ ರೂಪಕಗಳು, ವಿವಿಧ ಕಲಾ ತಂಡಗಳು ಹಾಗೂ ವಿವಿಧ ವಾದ್ಯಗಳೊಂದಿಗೆ ಇಲ್ಲಿ ಈರಣ್ಣ ನಗರದಲ್ಲಿ ನಿರ್ಮಿಸಿರುವ ಶಿವಶರಣ ಹಡಪದ ಅಪ್ಪಣ್ಣ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಿರುವ ಮೂರ್ತಿ ಹಾಗೂ ಕಳಸದ ಭವ್ಯ ಮೆರವಣಿಗೆ ಜರುಗಿತು.

ಬಸವೇಶ್ವರ ಕಲ್ಯಾಣ ಮಂಟಪದಿಂದ ಪ್ರಾರಂಭಗೊಂಡ ಮೆರವಣಿಗೆ ದೇವಸ್ಥಾನದ ವರೆಗೆ ಜರುಗಿತು.
ಬೆಳಿಗ್ಗೆ ತಂಗಡಗಿಯ ಶಿವಶರಣ ಹಡಪದ ಅಪ್ಪಣ್ಣ ಮಹಾಸಂಸ್ಥಾನಮಠದ ಜಗದ್ಗುರು ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮಿಗಳು  ಹಾಗೂ ಸುಣಧೋಳಿಯ ಶಿವಾನಂದ ಸ್ವಾಮಿಗಳ ಸಾನಿಧ್ಯದಲ್ಲಿ ಷಟಸ್ಥಲ್ ಧ್ವಜಾರೋಹಣ ಹಾಗೂ ಲಿಂಗ ದೀಕ್ಷೆನಡೆಯಿತು. ನೂರಾರು ಭಕ್ತರಿಗೆ ಲಿಂಗ ದೀಕ್ಷೆ ಧಾರಣೆ ಮಾಡಲಾಯಿತು.

ವಿವಿಧ ಕಲಾವಿದರಿಂದ ವಚನ ಸಂಗೀತೋತ್ಸವ, ಹುಕ್ಕೇರಿಯ ವೀಣಾ ನಾವಿ ಅವರಿಂದ ಹಡಪದ ಅಪ್ಪಣ್ಣ ಕುರಿತು ಪ್ರವಚನ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.