ADVERTISEMENT

ಅರಭಾವಿ ಅಭಿವೃದ್ಧಿಗೆ ರೂ 53.76 ಕೋಟಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 8:25 IST
Last Updated 6 ಫೆಬ್ರುವರಿ 2012, 8:25 IST

ಗೋಕಾಕ: ರಾಜ್ಯ ನೀರಾವರಿ ಇಲಾಖೆಯ ಎಸ್‌ಸಿಟಿಮತ್ತು ಟಿಎಫ್. ಯೋಜನೆಯಡಿ ಅರಭಾವಿ ವಿಧಾನ ಸಭಾ ಮತಕ್ಷೇತ್ರಕ್ಕೆ ರೂ 53.76 ಕೋಟಿ ಅನುದಾನ ಮಂಜೂರಾಗಿದ್ದು, ಯೋಜನೆಯನ್ನು ಕ್ಷೇತ್ರದ ಜನತೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು  ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ನಗರ ಸಮೀಪದ ಬಸವ ಸಭಾ ಭವನದಲ್ಲಿ ಈಚೆಗೆ ಏರ್ಪಡಿಸಲಾಗಿದ್ದ ಅರಭಾವಿ ವಿಧಾನಸಭಾ ಕ್ಷೇತ್ರದ ಬಸವ ವಸತಿ ಮತ್ತು ಅವಾಸ ಯೋಜನೆಯಡಿಯಲ್ಲಿ ಗ್ರಾ.ಪಂ  ಗಳಿಗೆ ವಸತಿ ಗುರಿ ನೀಡುವ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

ಚುನಾಯಿತ ಪ್ರತಿನಿಧಿಗಳು ಪ್ರಾಮಾಣಿಕವಾಗಿ ಜನರ ಬೇಡಿಕೆ ಮತ್ತು ಸಮಸ್ಯೆಗಳಿಗೆ ಸ್ಪಂದಿಸಬೇಕು. ತಮ್ಮ ಕ್ಷೇತ್ರ ವ್ಯಾಪ್ತಿಯ 30 ಗ್ರಾ.ಪಂ ಗಳಿಗೆ 2010-11ನೇ ಸಾಲಿನಲ್ಲಿ ಬಸವ ವಸತಿ ಮತ್ತು ಇಂದಿರಾ ಅವಾಸ ಯೋಜನೆಯಡಿಯಲ್ಲಿ ಸುಮಾರು 4,500 ಮನೆಗಳು ಮಂಜೂರಾಗಿವೆ.

ಗ್ರಾಮ ಸಭೆಗಳ  ಮೂಲಕ ಅರ್ಹ ಫಲಾನುಭವಿಗಳಿಗೆ ಮನೆ ವಿತರಿಸಬೇಕು. ಈ ಹಿಂದೆ ಅರ್ಹ  ಫಲಾನುಭವಿಗಳಿಗೆ ದೊರಯಬೇಕಿದ್ದ ಮನೆಗಳ ಹಂಚಿಕೆ ಕಾರ್ಯ ಸಮಪರ್ಕವಾಗಿ ನಡೆಯದ ಹಿನ್ನೆಲೆಯಲ್ಲಿ ಅರ್ಹರು  ಅಸಮಾಧಾನಗೊಂಡಿದ್ದಾರೆ. ಈ ಬಾರಿ ಅಂತಹ ತಪ್ಪು ನಡೆಯಬಾರದು ಎನ್ನುವುದು ತಮ್ಮ ಉದ್ದೇಶವಾಗಿದೆ ಎಂದರು.

ಕ್ಷೇತ್ರದ ವಸತಿ ರಹಿತ ಬಡ ಕುಟುಂಬಗಳ ಹಿತ ದೃಷ್ಟಿಯಿಂದ ತಾವು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹಾಗೂ ವಸತಿ ಸಚಿವ ವಿ.ಸೋಮಣ್ಣ ಅವರಿಗೆ  ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ  ಹೆಚ್ಚುವರಿ 1,030 ಮನೆಗಳನ್ನು ನೀಡುವ ಬಗ್ಗೆ ಅವರು ಭರವಸೆ ನೀಡಿದ್ದಾರೆ ಎಂದರು.

ಜಿ.ಪಂ. ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಮಾತನಾ ಡಿದರು.
ಪ್ರಭಾ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಅಶೋಕ ಪಾಟೀಲ, ನಿರ್ದೇಶಕ ರಾವಸಾಹೇಬ ಬೆಳಕೂಡ, ಜಿ.ಪಂ. ಮಾಜಿ ಸದಸ್ಯರಾದ ವಿಠ್ಠಲ್ ಸವದತ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.