ADVERTISEMENT

ಆಡಳಿತ ಮಂಡಳಿ ಲಾಬಿಗೆ ಮಣಿದ ಸರ್ಕಾರ:ದೂರು:ಶುಲ್ಕ ಕಡಿತಕ್ಕೆ ಎಬಿವಿಪಿ ಮನವಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2012, 7:55 IST
Last Updated 11 ಏಪ್ರಿಲ್ 2012, 7:55 IST

ಬೆಳಗಾವಿ: `ರಾಜ್ಯ ಸರ್ಕಾರವು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಶೇ. 10ರಷ್ಟು ಹೆಚ್ಚಿಸಿರುವ ಎಂಜಿನಿಯರಿಂಗ್, ವೈದ್ಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಪ್ರವೇಶ ಶುಲ್ಕವನ್ನು ಕೂಡಲೇ ವಾಪಸ್ ಪಡೆದು ಕೊಳ್ಳಬೇಕು~ ಎಂದು ಅಖಿಲ ಭಾರ ತೀಯ ವಿದ್ಯಾರ್ಥಿ ಪರಿಷತ್ ಮುಖ್ಯ ಮಂತ್ರಿ  ಡಿ.ವಿ.ಸದಾನಂದ ಗೌಡ ಅವರನ್ನು ಒತ್ತಾಯಿಸಿದೆ.

ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಮಾರುತಿ ಸುಣಗಾರ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ಅವರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು ಪ್ರವೇಶ ಶುಲ್ಕ ವಾಪಸಾತಿಗಾಗಿ ಆಗ್ರಹಿಸಿದರು.
`ರಾಜ್ಯ ಸರ್ಕಾರ ಪ್ರತಿ ವರ್ಷವೂ ಖಾಸಗಿ ಆಡಳಿತ ಮಂಡಳಿಯ ಲಾಬಿಗೆ ಮಣಿಯುತ್ತಿದೆ~ ಎಂದು ಅವರು ದೂರಿದರು.

 ಶುಲ್ಕ ಮತ್ತು ಸೀಟು ಹಂಚಿಕೆಯ ಸಂದರ್ಭದಲ್ಲಿ ಕೇವಲ ಖಾಸಗಿ ಆಡಳಿತ ಮಂಡಳಿಯೊಂದಿಗೆ ಮಾತ್ರ ಮಾತುಕತೆ ನಡೆಸುತ್ತಿದೆ. ರಾಜ್ಯದ ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳು, ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ದೂರ ಇಟ್ಟು ಶುಲ್ಕ ಹೆಚ್ಚಳ ನಿರ್ಧಾರವನ್ನು ಕೈಗೊಳ್ಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುತ್ತಿದೆ~ ಎಂದು ಅವರು ಆರೋಪಿಸಿದರು.

`ವರ್ಷದಿಂದ ವರ್ಷಕ್ಕೆ ಸರ್ಕಾರಿ ಸೀಟುಗಳನ್ನು ಕಡಿಮೆ ಮಾಡಿ, ಪದೇ ಪದೇ ಶುಲ್ಕವನ್ನು ಹೆಚ್ಚಿಸುತ್ತಿರುವ ಸರ್ಕಾರ ಖಾಸಗಿ ಆಡಳಿತ ಮಂಡಳಿ ಗಳಿಗೆ ಲಾಭ ಮಾಡಿ ಕೊಡುತ್ತಿದೆ. ಸರ್ಕಾರ ಕೈಗೊಳ್ಳುವ ಇಂತಹ ಅಸಮರ್ಪಕ ನಿರ್ಧಾರದಿಂದಾಗಿ ಸಾವಿರಾರು ಪ್ರತಿಭಾವಂತ ಬಡ ವಿದ್ಯಾರ್ಥಿಗಳು ವೃತ್ತಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಹೀಗಾಗಿ ಸರ್ಕಾರ ಇಂಥ ಅವೈಜ್ಞಾನಿಕ ನಿರ್ಧಾರ ಗಳನ್ನು ಕೈಗೊಳ್ಳಬಾರದು~ ಎಂದು ಅವರು ಆಗ್ರಹಿಸಿದ್ದಾರೆ.
`ಪ್ರಸಕ್ತ ವರ್ಷದಿಂದ ಸರ್ಕಾರಿ ಕೋಟಾದ ವೈದ್ಯಕೀಯ ಶುಲ್ಕ ರೂ. 38,500 (3,500 ಹೆಚ್ಚಳ); ಎಂಜಿನಿ ಯರಿಂಗ್ ಶುಲ್ಕ ರೂ. 36,300 (3,300ಹೆಚ್ಚಳ) ನಿಗದಿ ಪಡಿಸಲಾಗಿದೆ. 

 ಸರ್ಕಾರವು ಹೆಚ್ಚಿಸಿರುವ  ಈ ಶುಲ್ಕವನ್ನು ಕೂಡಲೇ ವಾಪಸ್ ಪಡೆಯಬೇಕು. `ಕಾಮೆಡ್ ಕೆ~ ರದ್ದುಪಡಿಸಿ ಸರ್ಕಾರದ ಮೂಲಕವೇ ಕೌನ್ಸೆಲಿಂಗ್ ನಡೆಸಬೇಕು~ ಎಂದು ಒತ್ತಾಯಿಸಿದರು.ಗಂಗಾಧರ ಗಡಿಬಿಡಿ, ಕೇದಾರ ಕಾಮಕರ, ಪ್ರಶಾಂತ ಅಮಿನಬಾವಿ, ಪ್ರಮೋದ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.