ರಾಮದುರ್ಗ: ಯಾವುದೇ ರೀತಿಯ ರಂಗದಲ್ಲಿ ಯಶಸ್ವಿ ಸಾಧಿಸಬೇಕಾದರೆ ಆ ರಂಗದಲ್ಲಿರುವ ಆಸಕ್ತಿ ಹಾಗೂ ನಿರಂತರ ಶ್ರಮದಿಂದ ಮಾತ್ರ ಸಾಧ್ಯ ಎಂದು ಅಥಣಿ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು.
ರಾಮದುರ್ಗದ ಆಪ್ಟೆ ಸೋಶಿಯಲ್ ಅಸೋಸಿಯೇಶನ್‌ನಲ್ಲಿ ಭಾನುವಾರ ಹಮ್ಮಿಕೊಂಡ `ಅನುಪಮಾ ಕಲಾ ಸಂಸ್ಥೆಯ ದಶಮಾನೋತ್ಸವ~ ಹಾಗೂ `ಪುಸ್ತಕ ಬಿಡುಗಡೆ~ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಆಧುನಿಕ ಕಲೆಗೆ ಒಗ್ಗದೆ ಪ್ರಾಚೀನ ಕಾಲದ ಕಲೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಪಾಲಕರು ತಮ್ಮ ಮಕ್ಕಳ ಪ್ರತಿಭೆಯನ್ನು ಬಾಲ್ಯದಲ್ಲಿ ಗುರುತಿಸಿ ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಎನ್ನುವುದನ್ನು ತಿಳಿದು ಅದಕ್ಕೆ ತಕ್ಕ ರೀತಿಯಲ್ಲಿ ಅವರಿಗೆ ಪ್ರೋತ್ಸಾಹ ನೀಡಬೇಕು ಎಂದು ತಿಳಿ ಹೇಳಿದರು.
ಬೆಳಗಾವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರಿಶೈಲ ಕರಿಶಂಕರಿ ಮಾತನಾಡಿ, ಸರ್ಕಾರಗಳು ಕಲಾ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ನೀಡುತ್ತಿವೆ. ಆ ನಿಟ್ಟಿನಲ್ಲಿ ಕಲಾ ಸಂಸ್ಥೆಗಳು ಸರ್ಕಾರವು ನೀಡುವ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸರ್ಕಾರದ ವತಿಯಿಂದ ಯಾವುದೇ ರೀತಿಯ ಕಲಾವಿದರಿಗೆ ಪ್ರತಿ ತಿಂಗಳು ರೂ. 1 ಸಾವಿರ ಮಾಸಾಶನ ನೀಡಲಾಗು ವುದು. ಆ ನಿಟ್ಟಿನಲ್ಲಿ ಕಲಾವಿದರು ಈ ಸೌಲಭ್ಯವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ನುಡಿದರು.
ವಿಜಯ ಶೆಟ್ಟಿ, ಆಪ್ಟೆ ಅಸೋಸಿಯೇಶನ್ ಅಧ್ಯಕ್ಷ ಬಿ. ಎಚ್. ಸಂಕಿನವರ, ಸಾಹಿತಿ ಡಾ. ವೈ. ಎಂ. ಯಾಕೊಳ್ಳಿ, ಸಂಗಮೇಶ ಗುರವ, ನಾಗರತ್ನಾ ಹಡಗಲಿ ಹಾಜರಿದ್ದರು. ವಿ. ಬಿ. ಸೋಮಣ್ಣನವರ ನಿರೂಪಿಸಿ ದರು. ಸಂಸ್ಥೆ ಅಧ್ಯಕ್ಷ ಸುರೇಶ ಗುದಗನವರ ಸ್ವಾಗತಿಸಿದರು. ರಾಜಶ್ರಿ ಗುದಗನವರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.