ADVERTISEMENT

ಉರುಸ್‌: ರೋಚಕ ಗಾಡಿ ಶರ್ಯತ್ತು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2014, 9:16 IST
Last Updated 13 ಫೆಬ್ರುವರಿ 2014, 9:16 IST
ನಿಪ್ಪಾಣಿಯಲ್ಲಿ ಉರುಸ್ ನಿಮಿತ್ತ ಏರ್ಪಡಿಸಲಾಗಿದ್ದ ಕುದುರೆಗಾಡಿ ಶರ್ಯತ್ತಿನಲ್ಲಿ ಗಾಡಿ ಮಗುಚಿ ಚಾಲಕ ನೆಲಕ್ಕುರುಳಿ ಬಿದ್ದರೂ ಶರ್ಯತ್ತು ಪೂರ್ಣಗೊಳಿಸಿ ಪ್ರಥಮ ಸ್ಥಾನ ಗಿಟ್ಟಿಸಿದವು.
ನಿಪ್ಪಾಣಿಯಲ್ಲಿ ಉರುಸ್ ನಿಮಿತ್ತ ಏರ್ಪಡಿಸಲಾಗಿದ್ದ ಕುದುರೆಗಾಡಿ ಶರ್ಯತ್ತಿನಲ್ಲಿ ಗಾಡಿ ಮಗುಚಿ ಚಾಲಕ ನೆಲಕ್ಕುರುಳಿ ಬಿದ್ದರೂ ಶರ್ಯತ್ತು ಪೂರ್ಣಗೊಳಿಸಿ ಪ್ರಥಮ ಸ್ಥಾನ ಗಿಟ್ಟಿಸಿದವು.   

ನಿಪ್ಪಾಣಿ: ಕುದುರೆ ಗಾಡಿ ಶರ್ಯತ್ತಿನಲ್ಲಿ ಗಾಡಿ ಮಗುಚಿ ಚಾಲಕ ನೆಲಕ್ಕುರುಳಿ ದರೂ ಕುದುರೆಗಳು ಮಾತ್ರ ಶರ್ಯತ್ತು ಪೂರ್ಣಗೊಳಿಸಿ ಒಡೆಯನಿಗೆ ಪ್ರಥಮ ಸ್ಥಾನ ಗಳಿಸಿಕೊಟ್ಟ ಅಪರೂಪದ ಘಟನೆ ಬುಧವಾರ ನಗರದಲ್ಲಿ ನಡೆಯಿತು.

ಪ್ರತಿವರ್ಷದಂತೆ ಮಹಾನ್‌ ಅವ ಲಿಯಾ ಹಜರತ್‌ ಪೀರಾನಪೀರ್‌ ದಸ್ತ ಗೀರ್‌ ಸಾಹೇಬರ ಉರುಸ್‌ ನಿಮಿತ್ತ ಬೆಳಿಗ್ಗೆ ಆಂಬೇಡ್ಕರ್‌ ನಗರದ ಅಮಲ ಝರಿ ರಸ್ತೆಯಲ್ಲಿ ಹಮ್ಮಿಕೊಂಡ   ಶರ್ಯತ್ತುಗಳಲ್ಲಿ ನಗರದ ಶಿವಾಜಿ ಕಾಂಬಳೆ ಅವರ ಕುದುರೆ ಗಾಡಿ ಶರ್ಯತ್ತಿನ ನಡುವೆ ಮಗುಚಿ ಅಕ್ಕೋಳನ ಚಾಲಕ ನಿಲೇಶ ಭೋಸಲೆ ನೆಲಕ್ಕುರುಳಿದರು. ಆದರೂ ಕುದುರೆಗಳು ಶರ್ಯತ್ತಿನಲ್ಲಿ ಓಡಿ ಮಾಲೀಕನಿಗೆ ಪ್ರಥಮ ಸ್ಥಾನದ ಬಹುಮಾನ ₨ 1501 ಹಾಗೂ ಢಾಲು ಗಳಿಸಿಕೊಟ್ಟವು. ಬೂದಿಹಾಳದ ಸಾಗರ ದೇಸಾಯಿ ಅವರ ಗಾಡಿ ದ್ವಿತೀಯ ಸ್ಥಾನ ಗಳಿಸಿತು. 

ಮುಕ್ತ ಗಾವಗನ್ನಾ ಜೋಡೆತ್ತಿನ ಗಾಡಿ ಶರ್ಯತ್ತಿನಲ್ಲಿ ಮಹಾರಾಷ್ಟ್ರದ ಮ್ಹಾಕವೆಯ ಶಾಮರಾವ ದೇವಡಕರ ಅವರ ಗಾಡಿ ಪ್ರಥಮ ಸ್ಥಾನ ಗಿಟ್ಟಿಸಿ ₨ 3001 ಮತ್ತು ಢಾಲು ಗಳಿಸಿದವು. ನಗರದ ಸಚಿನ ಕಾಟಕರ ಮತ್ತು ಯರನಾಳದ ಪಾಂಡುರಂಗ ಖಾಮಕರ ಅನುಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವು.

ಒಂದು ಕುದುರೆ ಮತ್ತು ಒಂದು ಎತ್ತಿನ ಗಾಡಿ ಶರ್ಯತ್ತಿನಲ್ಲಿ ಅಕ್ಕೋಳನ ದಯಾನಂದ ವಾರಕೆ, ಬೆನಾಡಿಯ ಪ್ರಕಾಶ ಪಾಟೀಲ ಹಾಗೂ ನಗರದ ಸಚಿನ್‌ ಕಾಟಕರ ಅನುಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವು. 

ನಗರಸಭೆ ಸದಸ್ಯ ಬಾಳಾಸಾಹೇಬ ದೇಸಾಯಿ ಸರಕಾರ ಶರ್ಯತ್ತುಗಳನ್ನು ಉದ್ಘಾಟಿಸಿದರು. ರಮೇಶರಾಜೆ ದೇಸಾಯಿ ಸರಕಾರ ಹಾಗೂ ಬಾಳಾ ಸಾಹೇಬ ದೇಸಾಯಿ ಬಹುಮಾನ ವಿತರಿಸಿದರು. ಸಂಗ್ರಾಮ ದೇಸಾಯಿ, ರಣಜಿತ್‌ ದೇಸಾಯಿ, ದತ್ತಾ ರೇಪೆ, ಪ್ರಮೋದ ಘೋಡಕೆ, ಶಹಾಜಿ ಪಾಟೀಲ, ಸೌರಭ ನಲವಡೆ, ವಿಶ್ವಾಸ ಮಾಳಿ ಮುಂತಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.