ADVERTISEMENT

ಕೆಎಲ್‌ಇ ಕನ್ನಡ ಬಳಗದ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 7:09 IST
Last Updated 4 ಏಪ್ರಿಲ್ 2013, 7:09 IST

ಬೆಳಗಾವಿ:  `ಸಾಹಿತ್ಯ ಮತ್ತು ಸಂಗೀತ ದಲ್ಲಿ ಪ್ರತಿಯೊಬ್ಬರು ಆಸಕ್ತಿ ತೋರುವುದರ ಮೂಲಕ ತಮ್ಮ ಮನಸ್ಸನ್ನು ಶುದ್ಧಿ ಮಾಡಿಕೊಳ್ಳಬಹುದು' ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು.

ಕೆಎಲ್‌ಇ ವಿಶ್ವವಿದ್ಯಾಲಯದ ಕನ್ನಡ ಬಳಗ ಇಲ್ಲಿನ ಡಾ. ಜೀರಗೆ ಸಭಾಂಗಣದಲ್ಲಿ ಆಯೋಜಿಸಿದ್ದ ಸುವರ್ಣ  ವಾರ್ಷಿಕೋತ್ಸವ, ಅಧಿಕಾರ ಹಸ್ತಾಂತರ ಹಾಗೂ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯ ತನ್ನ ದಿನನಿತ್ಯದ ಜೀವನದಲ್ಲಿ ಸೌಂದರ್ಯ ಪ್ರಜ್ಞೆಯನ್ನು ಬೆಳೆಸಿಕೊಂಡರೆ ಬದುಕಿನಲ್ಲಿ ನೆಮ್ಮದಿಯನ್ನು ಕಾಣಬಹುದು ಎಂದ ಅವರು, ಪ್ರಸ್ತುತ ವಿದ್ಯಮಾನಗಳ ಕುರಿತು ಹಲವಾರು ಉದಾಹರಣೆಗಳ ಮೂಲಕ ವಿವರಿಸಿದರು.

ಕಲಾವಿದ ಗಂಗಾವತಿ ಪ್ರಾಣೇಶ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಿತು. ನಂತರ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ವೀರೇಶ ಪುರದ, ಕಾರ್ಯ ದರ್ಶಿಗಳಾಗಿ ಮಹೇಶ ಗದಗ, ಪ್ರಿಯ ದರ್ಶಿನಿ ಚೌಗಲಾ ಅಧಿಕಾರ ವಹಿಸಿ ಕೊಂಡರು.

ಕೆಎಲ್‌ಇ ವಿವಿಯ ಕುಲಸಚಿವ ಡಾ. ವಿ.ಡಿ.ಪಾಟೀಲ, ಡಾ. ಎ.ಎಸ್.ಗೋಧಿ, ಡಾ. ಎಚ್.ಬಿ.ರಾಜಶೇಖರ, ಡಾ. ಎಂ.ಜಿ.ಧೊರೇಗೋಳ, ಡಾ. ಎ.ಡಿ. ತಾರಣಹಳ್ಳಿ, ಡಾ. ಎಂ.ವಿ.ಜಾಲಿ, ಡಾ. ಆರ್.ಎನ್.ಮುಧೋಳ ಉಪಸ್ಥಿತ ರಿದ್ದರು.ಡಾ. ಅವಿನಾಶ ಕವಿ ನಿರೂ ಪಿಸಿದರು. ಶಂಭು ಪುರದ ಸ್ವಾಗತಿಸಿದರು. ವೀರೇಶ ಪುರದ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.