ADVERTISEMENT

`ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆದ್ಯತೆ'

ಅ. 23ರಿಂದ 25ವರೆಗೆ ಕಿತ್ತೂರು ಉತ್ಸವ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 6:37 IST
Last Updated 7 ಸೆಪ್ಟೆಂಬರ್ 2013, 6:37 IST
ಚನ್ನಮ್ಮನ ಕಿತ್ತೂರಿನ ಐತಿಹಾಸಿಕ ಕೋಟೆಗೆ ಶುಕ್ರವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಪ್ರಾಧಿಕಾರದಡಿ ಕೈಗೊಳ್ಳಲಾಗಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಲೋಕೋಪಯೋಗಿ ಎಇಇ ಕೆ. ಜಿ. ಕಡೇಲಿ, ಉಪವಿಭಾಗಾಧಿಕಾರಿ ವಿಜಯಕುಮಾರ್ ಹೊನಕೇರಿ ಮತ್ತಿತರರು ಇದ್ದಾರೆ.
ಚನ್ನಮ್ಮನ ಕಿತ್ತೂರಿನ ಐತಿಹಾಸಿಕ ಕೋಟೆಗೆ ಶುಕ್ರವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಪ್ರಾಧಿಕಾರದಡಿ ಕೈಗೊಳ್ಳಲಾಗಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಲೋಕೋಪಯೋಗಿ ಎಇಇ ಕೆ. ಜಿ. ಕಡೇಲಿ, ಉಪವಿಭಾಗಾಧಿಕಾರಿ ವಿಜಯಕುಮಾರ್ ಹೊನಕೇರಿ ಮತ್ತಿತರರು ಇದ್ದಾರೆ.   

ಚನ್ನಮ್ಮನ ಕಿತ್ತೂರು: `ಕಿತ್ತೂರು ರಾಣಿ ಚನ್ನಮ್ಮಾಜಿಯ ತ್ಯಾಗ ಮತ್ತು ಬಲಿದಾನ ಸ್ಮರಣೆಗಾಗಿ ಅ.23ರಿಂದ 25ರವರೆಗೆ ನಡೆಯಲಿರುವ ಪ್ರಸಕ್ತ ಸಾಲಿನ `ಚನ್ನಮ್ಮನ ಕಿತ್ತೂರು ಉತ್ಸವ' ಆಚರಣೆಯಲ್ಲಿ ರಾಷ್ಟ್ರ ಮಟ್ಟದ ಕ್ರೀಡಾಪಟುಗಳು ಮತ್ತು ಸಾಂಸ್ಕೃತಿಕ ಲೋಕದ ದಿಗ್ಗಜರು ಭಾಗವಹಿಸಲು ಆಮಂತ್ರಣ ನೀಡಲಾಗುವುದು' ಎಂದು ಅಬಕಾರಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಪ್ರಕಟಿಸಿದರು.

ಗ್ರಾಮ ಪಂಚಾಯಿತಿ ಸಭಾಭವನದಲ್ಲಿ  ಶುಕ್ರವಾರ ಏರ್ಪಡಿಸಲಾಗಿದ್ದ ಉತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು.

`ಕಿತ್ತೂರು ಉತ್ಸವದ ವೇದಿಕೆ ಎಂದರೆ ಅದು ಎಲ್ಲ ರಂಗಗಳಲ್ಲಿಯ ಪ್ರತಿಭಾ ವಂತರನ್ನು ನಾಡಿನ ಜನತೆಗೆ ಪರಿಚ ಯಿಸುವ ಮತ್ತು ಅವರ ಕಲೆಯ ರಸದೌತಣ ಉಣಬಡಿಸುವ ವೇದಿಕೆಯಾಗಬೇಕು. ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಲ್ಲಿ ವಿದೇಶಗಳಿಂದ ಆಮದು ಆದ ವಸ್ತುಗಳ ಪ್ರದರ್ಶನ, ಮಾರಾಟ ಮಾಡುವ ಅವಕಾಶ ವನ್ನು ವ್ಯಾಪಾರಸ್ಥರಿಗೆ ಒದಗಿಸಬೇಕು' ಎಂದು ಸಲಹೆ ನೀಡಿದರು.

`ದೇಶದ ರಾಷ್ಟ್ರಪತಿ ಅವರನ್ನು ಉತ್ಸವಕ್ಕೆ ಆಹ್ವಾನಿಸಬೇಕೆಂಬ ಬೇಡಿಕೆ ನಾಡಿನ ಜನತೆಯದ್ದಾಗಿದೆ. ಅವರನ್ನು ಆಮಂತ್ರಿಸಬೇಕೆಂದರೆ ಕನಿಷ್ಠ ಮೂರು ತಿಂಗಳ ಮೊದಲು ಕಾಲಾವಕಾಶ ಇರ ಬೇಕು. ಸಮಯಕ್ಕೆ ಸಿಗುವ ಚುನಾಯಿತ ಜನಪ್ರತಿನಿಧಿಗಳು ಮತ್ತು ಸಚಿವರನ್ನು ಆಮಂತ್ರಿಸಿ ಉತ್ಸವ ಆಚರಣೆಯನ್ನು ಯಶಸ್ವಿಗೊಳಿಸೋಣ' ಎಂದು ಸಚಿವರು ಕೋರಿದರು.

ಶಾಸಕ ಡಿ. ಬಿ. ಇನಾಮದಾರ ಮಾತ ನಾಡಿ, `ನಾನು ಶಾಸಕನಾಗಿದ್ದ ಅವಧಿ ಯಲ್ಲಿ ಕಿತ್ತೂರ ರಾಣಿ ಚನ್ನಮ್ಮೋಜಿ ವಂಶಜರನ್ನು ವೇದಿಕೆ ಮೇಲೆ ಕರೆದು ಗೌರವ ಸೂಚಿಸಲಾಗುತ್ತಿತ್ತು. ಅನಂತರ ಈ ಸಂಪ್ರದಾಯ ನಿಂತು ಹೋಗಿದ್ದು ವಿಷಾದನೀಯ. ಈಗ ಮತ್ತೆ ಅದಕ್ಕೆ ಚಾಲನೆ ನೀಡಲಾಗುವುದು. ಜನರ ಸಲಹೆ ಸೂಚನೆಗಳನ್ನು ಮನ್ನಿಸಿ ಅರ್ಥ ಪೂರ್ಣವಾಗಿ ಹಾಗೂ ಅಚ್ಚುಕಟ್ಟಾಗಿ ಉತ್ಸವ ಆಚರಿಸಲಾಗುವುದು' ಎಂದು ಭರವಸೆ ನೀಡಿದರು.

ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ ಸೇರಿದಂತೆ ಅನೇಕರು ಮಾತನಾಡಿದರು.

ಸಭೆ: ಅನಂತರ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಡಿ. ಬಿ. ಇನಾವ ುದಾರ ಉಪಸ್ಥಿತಿಯಲ್ಲಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾ ರದ ಸಭೆ ಜರುಗಿತು.

ಶಾಸಕ ಡಾ. ವಿಶ್ವನಾಥ ಪಾಟೀಲ, ಜಿ. ಪಂ. ಅಧ್ಯಕ್ಷೆ ಶಾಂತಾ ಕಲ್ಲೋಳಕರ, ಉಪಾಧ್ಯಕ್ಷೆ ಉಷಾ ಶಿಂತ್ರೆ, ಗ್ರಾ. ಪಂ. ಅಧ್ಯಕ್ಷ ಮೃತ್ಯುಂಜಯ ಮಾರಿಹಾಳ, ಜಿಲ್ಲಾಧಿ ಕಾರಿ ಎನ್. ಜಯರಾಂ, ಜಿ. ಪಂ. ಸಿಇಒ ದೀಪಾ ಚೋಲನ್, ಎಸ್.ಪಿ. ಡಾ. ಚಂದ್ರಗುಪ್ತ, ಉಪ ವಿಭಾಗಾಧಿಕಾರಿ ವಿಜಯಕುಮಾರ ಹೊನಕೇರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ನಾಗರಿಕರು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.