ADVERTISEMENT

ಗುಂಡುಕಲ್ಲು ಸ್ಪರ್ಧೆ: ಬಸಪ್ಪ ಪ್ರಥಮ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 7:06 IST
Last Updated 12 ಡಿಸೆಂಬರ್ 2013, 7:06 IST
ಗೋಕಾಕ ತಾಲ್ಲೂಕಿನ ಅರಭಾವಿಯಲ್ಲಿ ಮಾರುತಿ ದೇವರ ಕಾರ್ತಿಕೋತ್ಸವ ಪ್ರಯುಕ್ತ ಏರ್ಪಡಿಸಲಾಗಿದ್ದ ಗುಂಡುಕಲ್ಲು ಎತ್ತುವ ಸ್ಪರ್ಧೆಯಲ್ಲಿ 185 ಕೆ.ಜಿ. ಭಾರ ಎತ್ತಿದ ಮುಧೋಳ ತಾಲ್ಲೂಕಿನ ಗೋಲಭಾಂವಿಯ ಬಸಪ್ಪ ಕರಿಗಾರ ಹಾಗೂ 150 ಕೆ.ಜಿ. ಭಾರ ಎತ್ತಿದ ಅರಭಾವಿಯ ರಾಜು ಕರಿಗಾರ.

ಘಟಪ್ರಭಾ (ಗೋಕಾಕ): ಇಲ್ಲಿಯ ಅರಭಾವಿಯ ಪ್ರಸಿದ್ಧ ಮಾರುತಿ ದೇವರ ಕಾರ್ತಿಕೋತ್ಸವ ಆಚರಣೆ ನಿಮಿತ್ತ ಗುಂಡು ಕಲ್ಲನ್ನು ಎತ್ತುವ ಸ್ಫರ್ಧೆ ನಡೆಯಿತು. ಇದರಿಂದ ಪ್ರೇಕ್ಷಕರಿಗೆ ಸಾಹಸಮಯ ಗ್ರಾಮೀಣ ಕ್ರೀಡೆಯನ್ನು ವೀಕ್ಷಿಸುವ ಭಾಗ್ಯ ದೊರಕಿತು. ಸ್ಪರ್ಧೆಯಲ್ಲಿ ನೆರೆಯ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 30ಕ್ಕೂ ಅಧಿಕ ಸ್ಫರ್ಧಾಳುಗಳು ಭಾಗವಹಿಸಿದ್ದರು.

ಗುಂಡು­­­ಕಲ್ಲಿನ ಭಾರ ಎತ್ತುವ ಸ್ಪರ್ಧೆ­ಯಲ್ಲಿ ಸುಮಾರು 185ಕೆ.ಜಿ. ತೂಕದ ಗುಂಡು ಕಲ್ಲನ್ನು ಹೆಗಲ ಮೇಲೆ ಏರಿಸಿ­ಕೊಂಡ ಬಾಗಲಕೋಟ ಜಿಲ್ಲೆಯ ಮುಧೋಳ ತಾಲ್ಲೂಕಿನ ಗೊಲ­ಭಾಂವಿಯ ಬಸಪ್ಪ ಸದಾಶಿವ ಕರಿಗಾರ ಪ್ರಥಮ ಸ್ಥಾನ ಪಡೆದರು. 150 ಕೆ.ಜಿ. ಭಾರದ ಗುಂಡುಕಲ್ಲನ್ನು ಎತ್ತಿದ ಸ್ಥಳೀಯ ರಾಜು ಸದಾಶಿವ ಕರಿಗಾರ ದ್ವೀತಿಯ ಹಾಗೂ ತಾಲ್ಲೂಕಿನ ಲೋಳಸೂರ ಗ್ರಾಮದ ಸಿದ್ದಪ್ಪ ಜೋಡಟ್ಟಿ ತೃತೀಯ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.