ADVERTISEMENT

ಗ್ರಾಮಗಳು ಆರ್ಥಿಕ ಸಬಲತೆ ಹೊಂದಲಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 9:50 IST
Last Updated 17 ಫೆಬ್ರುವರಿ 2012, 9:50 IST

ಯಮಕನಮರಡಿ: ಗ್ರಾಮೀಣ ಪ್ರದೇಶದಲ್ಲಿರುವ ಬಡವರು ಮತ್ತು  ಕೃಷಿಕರು ಪ್ರಗತಿ ಸಾಲ ಪಡೆದು ಆರ್ಥಿಕ ಸಬಲತೆ ಹೊಂದಬೇಕು  ಎಸ್‌ಡಿಎಂಸಿಡಿಪಿಯ  ಜಿಲ್ಲಾ ನಿರ್ದೇಶಕರಾದ ಶಿವರಾಯ ಪ್ರಭು ಹೇಳಿದರು.

ಗ್ರಾಮದಲ್ಲಿ  ಇತ್ತೀಚಿಗೆ ಜರುಗಿದ  ಧರ್ಮಸ್ಥಳ ಗ್ರಾಮಾಣಾಭಿವೃದ್ದಿ ಯೋಜನೆಯಲ್ಲಿ ನೂತನ ಒಕ್ಕೂಟಗಳ ಉದ್ಘಾಟನೆ ಹಾಗೂ ಕೃಷಿ ಸಲಕರಣೆ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

 ಸಂಸ್ಥೆಯು ರಾಜ್ಯದ 16 ಜಿಲ್ಲೆಗಳ ಎಲ್ಲ ಸಮುದಾಯದ ಜನರಿಗೆ  ಪ್ರಗತಿ ಸಾಲವನ್ನು ನೀಡಿದೆ. ಸಾಲ ಪಡೆದವರು  ಕಾಲಾವಧಿ ಒಳಗೆ ಮರು ಪಾವತಿಸುತ್ತಿವುದು  ಹೆಮ್ಮಯ ವಿಷಯವಾಗಿದೆ ಯುವಕರು ಸ್ವಉದ್ಯೋಗವನ್ನು ಪ್ರಾರಂಭಿಸಿಬೇಕು ಎಂದು   ಕರೆ ನೀಡಿದರು.

ಮಹಿಳಾ ಸ್ವ ಸಹಾಯ ಗುಂಪಿನ ಸದಸ್ಯರಿಗೆ ಪಿಂಚಣಿ ನೀಡುವ ಯೋಜನೆ ಬಗ್ಗೆ  ವಿವರಿಸಿದರು.
ಯಮಕನಮರಡಿ ಗ್ರಾಮ ಪಂಚಾಯಿತಿ ಗ್ರಾಮ ಅಭಿವೃದ್ದಿ ಅಧಿಕಾರಿ ಅನೀತಾ ಕ್ಯಾಥರೀನ್ ಮಾತನಾಡಿ ಇಂದು ಹಳ್ಳಿಗಳು ಅಭವೃದ್ದಿಯಾದರೆ ದೇಶ ತಾನಾಗಿಯೇ ಅಭಿವೃದ್ದಿ ಹೊಂದುವದು ಆದ್ದರಿಂದ ಬಡತನ ರೇಖೆಯಲ್ಲಿರುವ ಪ್ರತಿಯೊಬ್ಬರು  ದುಡಿಮೆ ಮಾಡಿ ಸಂಪಾದನೆ ಮಾಡಿದರೆ ಕುಟುಂಬ ಆರ್ಥಿಕತೆ ಸುಧಾರಿಸುವುದು  ಎಂದರು. 

 ಕಾರ್ಯಕ್ರಮದ ಅಧ್ಯಕ್ಷತೆ ರವೀಂದ್ರ ಹಂಜಿ ವಹಿಸಿದ್ದರು. ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ರಾಜೇಂದ್ರ ತುಬಚಿ, ಬಾಳಾರಾಮ ರಜಪೂತ ಮತ್ತು ಹುಕ್ಕೇರಿ ಯೋಜನಾಧಿಕಾರಿ ಸುರೇಶ ಸಾಲಿಯಾನ್  ಉಪಸ್ಥಿತರಿದ್ದರು. ಸಂದೇಶ ಯು.ಎಸ್. ನಿರೂಪಿಸಿದರು. ಮಂಜುಳಾ  ಹಿರೇಮಠ ವಂದಿಸಿದರು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.