ADVERTISEMENT

ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಆದ್ಯತೆ: ಕಡಾಡಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 9:40 IST
Last Updated 14 ಫೆಬ್ರುವರಿ 2012, 9:40 IST

ಗೋಕಾಕ: ಕೃಷಿ ಚಟುವಟಿಕೆಗಳ ಮತ್ತು ಕೃಷಿಕರ ಅನುಕೂಲಕ್ಕಾಗಿ ತೋಟದ ರಸ್ತೆಗಳ ಅಭಿವೃಧ್ಧಿ ಪಡಿಸಲು  ಕಾಡಾ ಇಲಾಖೆ ಹೆಚ್ಚಿನ ಆದ್ಯತೆ ನೀಡಿದೆ  ಎಂದು ಜಿ.ಪಂ. ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.

ಕಲ್ಲೋಳಿ ಗ್ರಾಮದ ಹಣಮಾಪೂರ  ಬಸವನಗರ ಬಡಾವಣೆ ಶಾಲೆಯವರೆಗೆ 3ಕಿ. ಮೀ. ರಸ್ತೆ  ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾಡಾದಿಂದ ರೂ 45ಲಕ್ಷ ಮಂಜೂರು ಆಗಿದ್ದು, ಕಲ್ಲೋಳಿ ಕಳ್ಳಿ ಹಾದಿಯಿಂದ ನಾಗಯ್ಯಗೋಳ ತೋಟದ ವರೆಗಿನ 3.25 ಕಿ. ಮೀ. ಹಾಗೂ ನಲ್ಲಾನಟ್ಟಿ ಗ್ರಾಮದ ಗೌಡ್ರ ತೋಟದ ವರೆಗಿನ ಅಂದಾಜು 1.5 ಕಿ. ಮೀ. ಗ್ರಾಮೀಣ ಸಂಪರ್ಕ ರಸ್ತೆಗಳನ್ನು ರೂ.25 ಲಕ್ಷಗಳ ಮೇಲ್ದರ್ಜೆಗೇರಿಸುವ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.

ರಾಜಾಪುರದಿಂದ ಜಿ.ಎಲ್.ಬಿ.ಸಿ. ಮುಖ್ಯ ಕಾಲುವೆಯವರೆಗೆ 2.5 ಕಿ. ಮೀ, ಕಲ್ಲೋಳಿ-ದುರದುಂಡಿ ರಸ್ತೆಯಿಂದ ಲಗಮಣ್ಣ ದಂಡಿನ ತೋಟದವರೆಗಿನ ಸಂಪರ್ಕ ರಸ್ತೆ ನಿರ್ಮಾಣಕ್ಕೆ 9.50 ಲಕ್ಷ ರೂ.ಗಳ ವೆಚ್ಚದ ಕಾಮಗಾರಿಗಳಿಗೆ ಶೀಘ್ರದಲ್ಲೆ ಚಾಲನೆ ದೊರಕಲಿದೆ ಎಂದರು.

ಅರಭಾಂವಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ 6 ಜಿ.ಪಂ. ಕ್ಷೇತ್ರಗಳ ವ್ಯಾಪ್ತಿಯ ಗ್ರಾಮೀಣ ರಸ್ತೆ ಅಭಿವೃಧ್ಧಿಗೆ  ಸಚಿವ ಜಗದೀಶ ಶೆಟ್ಟರ್ ಒಟ್ಟು ರೂ 93 ಲಕ್ಷ  ಆಡಳಿತಾತ್ಮಕ ಅನುಮೋದನೆ ನೀಡಿದ್ದಾರೆ. ಟೆಂಡರ್ ಪ್ರಕಿಯೆ ನಂತರ ಕಾಮಗಾರಿಗಳನ್ನು ಪ್ರಾರಂಭಗೊಳ್ಳಲಿವೆ ಎಂದು  ಮಾಹಿತಿ ನೀಡಿದರು.

ಕಲ್ಲೋಳಿ-ತುಕ್ಕಾನಟ್ಟಿ (ಬಾಗಿ) ರಸ್ತೆಗೆ ಹೊಂದಿಕೊಂಡಿರುವ ಗಾಣಿಗೇರ ತೋಟದಿಂದ ಪರಪ್ಪ ಬೀ. ಪಾಟೀಲ ಅವರ ತೋಟದವರೆಗಿನ 1 ಕಿ. ಮೀ. ರಸ್ತೆ, ಹೀಗೆ ಒಟ್ಟು 10.50 ಲಕ್ಷ ರೂ.ಗಳ ವೆಚ್ಚದ ಅಭಿವೃಧ್ಧಿ ಕಾಮಗಾರಿಗಳಿಗೆ ಇದೇ ಸಂದರ್ಭದಲ್ಲಿ ಚಾಲನೆ ನೀಡಿಲಾಯಿತು.

ತಾ.ಪಂ. ಸದಸ್ಯ ಚಿಂತಾಮನಿ ಮೇಟಿ,  ಬಸವಣ್ಣೆಪ್ಪ ಗೋರೋಶಿ, ಪ್ರಭು ಕಡಾಡಿ, ಕೃಷ್ಣಾ ಮುಂಡಿಗನಾಳ,  ಶಿವಲಿಂಗಪ್ಪ ಕುಂಬಾರ, ಭೀಮಶೆಪ್ಪ ಹೆಬ್ಬಾಳ, ಮಹಾದೇವ ಮದಭಾಂವಿ, ಭೀಮಶಿ ಚೌಗಲಾ,  ರಾಮಣ್ಣ ಉಳ್ಳಾಗಡ್ಡಿ, ಭೀಮಪ್ಪ  ಪಾಟೀಲ,  ಹಣಮಂತ ಸಂಗಟಿ, ಬಸವರಾಜ ದಾಸನಾಳ,  ಮತ್ತು ಈರಣ್ಣ ಮುನ್ನೋಳಿಮಠ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.