ADVERTISEMENT

ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 8:50 IST
Last Updated 3 ಅಕ್ಟೋಬರ್ 2011, 8:50 IST

ಸವದತ್ತಿ: ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಆಚಾರ ವಿಚಾರ, ನಡೆ- ನುಡಿಗಳು ಒಂದಾಗಿ ಸತ್ಯ ಶುದ್ಧ ಕಾಯಕ ಮಾಡಿದರೆ, ಆರೋಗ್ಯದ ಜೊತೆಗೆ ಮನಸ್ಸು ಶುದ್ಧಿಯಾಗುವುದು ಎಂದು ಮುಧೋಳದ ನಿವೃತ್ತ ಶಿಕ್ಷಕ ಕೆ.ಡಿ. ಮುತ್ತೂರ ಹೇಳಿದರು.

ಇಲ್ಲಿನ ನಾಡಹಬ್ಬ ನವರಾತ್ರಿ ಉತ್ಸವದ ಆರಂಭ ದಿನ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಸಂಸಾರದಲ್ಲಿ ಇದ್ದುಕೊಂಡು ಅದರ ಜಂಜಾಟದಲ್ಲಿ ಸಿಲುಕದೆ ದೇವರನ್ನು ಕಾಣುವ ಸುಲಭದ ದಾರಿಯನ್ನು ಬಸವಣ್ಣನವರು, 12 ನೆಯ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ತೋರಿದ್ದಾರೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಸಿ.ಸಿ. ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಆಧುನಿಕತೆಯ ಪ್ರಭಾವದಲ್ಲಿ ಪ್ರಸ್ತುತ ಕಲೆ, ಸಾಹಿತ್ಯ, ಸಂಸ್ಕೃತಿಯಂತಹ ಉನ್ನತ ಪರಂಪರೆಗಳು ನಶಿಸುವ ಸಂದರ್ಭದಲ್ಲಿ ನಾಡಹಬ್ಬ ಉತ್ಸವಕ್ಕೆ ಹೊಸ ಮೆರಗು ನೀಡುವ ಪ್ರಯತ್ನ ಶ್ಲಾಘನೀಯ ಎಂದು ನುಡಿದರು.

ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಸ್ವಾದಿಮಠದ ಶಿವಬಸವ ಸ್ವಾಮೀಜಿ, ಬಿಜಗಲ್ಲದ ಶಿವಲಿಂಗಸ್ವಾಮೀಜಿ, ಜಿ.ಎಸ್. ಶಿಂತ್ರಿ, ಎಂ.ಎನ್. ಹನಸಿ, ಬಸವರಾಜ ಪುರದಗುಡಿ, ಶಂಕರಗೌಡ ಪಾಟೀಲ ಉಪಸ್ಥಿತರಿದ್ದರು. ಮಾರುತಿ ಬಡಿಗೇರ, ಅನ್ನಪೂರ್ಣ ಪತಕಿ ಸಂಗೀತ ಕಾರ್ಯಕ್ರಮನ್ನು ನಡೆಸಿಕೊಟ್ಟರು. ಪ್ರೊ. ವೈ.ಎಂ. ಯಾಕೂಳ್ಳಿ ಸ್ವಾಗತಿಸಿದರು. ಬಿ.ಬಿ. ಗೊರವನಕೊಳ್ಳ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.