ADVERTISEMENT

ಜೂಡೋ: ಬೆಳಗಾವಿ ತಂಡಗಳಿಗೆ ಪ್ರಶಸ್ತಿ

ರಾಜ್ಯ ಮಟ್ಟದ ಪೈಕಾ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 12:44 IST
Last Updated 11 ಡಿಸೆಂಬರ್ 2012, 12:44 IST

ಬೆಳಗಾವಿ: ಆತಿಥೇಯ ಜಿಲ್ಲೆಯ ಬಾಲಕ ಹಾಗೂ ಬಾಲಕಿಯರ ತಂಡದವರು ರಾಜ್ಯ ಮಟ್ಟದ ಪೈಕಾ ಗುಂಪು-1ರ ಕ್ರೀಡಾಕೂಟದ ಜುಡೋ ಸ್ಪರ್ಧೆಯಲ್ಲಿ ತಂಡ ಪ್ರಶಸ್ತಿಗಳನ್ನು ಗೆದ್ದುಕೊಂಡರು. 

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಸ್ಪರ್ಧೆಗಳಲ್ಲಿ ಬಾಲಕರು 45 ಹಾಗೂ ಬಾಲಕಿಯರು 38 ಪಾಯಿಂಟ್‌ಗಳನ್ನು ಗಳಿಸಿದರು.

ಫಲಿತಾಂಶಗಳು
ಬಾಲಕರು: 90 ಕೆ.ಜಿ. ಮೇಲಿನವರು: ಅವಿನಾಶ ವಿ. (ಬೆಳಗಾವಿ)-1, ಅನೂಪ್ ಕುಮಾರ್ (ಬೆಂಗಳೂರು)-2, ಚಿನ್ನಪ್ಪ (ಧಾರವಾಡ)-3; 90 ಕೆ.ಜಿ: ಪ್ರಫುಲ್ ಹೆಬ್ಬಾಳಕರ (ಬೆಳಗಾವಿ)-1, ಪ್ರದೀಪ್ ಎಸ್. (ಬೆಂಗಳೂರು)-2, ಚಿನ್ಮಯ (ಚಿತ್ರದುರ್ಗ)-3; 81 ಕೆ.ಜಿ: ನವೀನ್ ಕುಮಾರ್ (ಕೋಲಾರ)-1, ಮುಫೀದ್ ಅರಭಾವಿ (ಬೆಳಗಾವಿ)-2, ಮದನ್ ನೇಸರಕರ (ಧಾರವಾಡ)-3; 73 ಕೆ.ಜಿ: ಚೇತನ್ ಗೌಡ (ಬೆಳಗಾವಿ)-1, ಸುರೇಶ ಎಂ.ಎನ್. (ಮಂಡ್ಯ)-2, ತಿಪ್ಪೇಶ ಎಂ.ಎನ್. (ಕೋಲಾರ)-3; 66 ಕೆ.ಜಿ: ಬಸಪ್ಪ (ಬಾಗಲಕೋಟೆ)-1, ಶಿವಶಂಕರ್ (ಬೆಂಗಳೂರು)-2, ಗಂಗಪ್ಪ (ಬೆಳಗಾವಿ)-3;

60 ಕೆ.ಜಿ: ಕುಶಾಲ್ ಲೋಹಾರ್ (ಬೆಳಗಾವಿ)-1, ಮಲ್ಲಿಕಾರ್ಜುನ (ಬಾಗಲಕೋಟೆ)-2, ಸುರೇಶ (ದಾವಣಗೆರೆ)-3; 55 ಕೆ.ಜಿ: ಮೋಹನ್ ಗಾಡೆ (ಬೆಳಗಾವಿ)-1, ಸೋನಾ ದರ್ಶನ್ (ಹಾಸನ)-2, ರಾಮಣ್ಣ (ಬಾಗಲಕೋಟೆ)-3; 50 ಕೆ.ಜಿ: ಅಮರ್ ನೀಲಜಕರ್ (ಬೆಳಗಾವಿ)-1, ಅಕ್ಷಯ ಕುಮಾರ್ (ಬೆಂಗಳೂರು)-2, ಶರತ್ (ದಾವಣಗೆರೆ)-3; 46 ಕೆ.ಜಿ: ಸುನಿಲ್ ಅಲೋಕಕರ (ಬೆಳಗಾವಿ)-1, ಮಣಿಕಂಠ (ಬೆಂಗಳೂರು)-2, ಕುಬೇರ ನಾಯಕ (ದಾವಣಗೆರೆ)-3; 42 ಕೆ.ಜಿ. ನಾಗೇಶ ಭಾತಕಾಂಡೆ (ಬೆಳಗಾವಿ)-1, ಅಭಿಷೇಕ ಗೌಡ (ಹಾಸನ)-2, ಶಿವಕುಮಾರ (ಬೆಂಗಳೂರು)-3.
ಬಾಲಕಿಯರು

70 ಕೆ.ಜಿ. ಮೇಲಿನವರು: ಕೋಮಲ್ (ಬೆಳಗಾವಿ)-1, ಲಾವಣ್ಯ ಕೆ. (ಬೆಂಗಳೂರು)-2, ಸೆಲ್ವಿ ಡಿ (ಹಾಸನ)-3; 70 ಕೆ.ಜಿ: ರಮ್ಯಾ (ಬೆಂಗಳೂರು)-1, ವರ್ಷಾ (ಬೆಳಗಾವಿ)-2, ದೀಪಿಕಾ ಎಸ್. (ಮಂಡ್ಯ)-3; 63 ಕೆ.ಜಿ: ಜಯಮ್ಮ (ದಾವಣಗೆರೆ)-1, ರೋಶನಿ (ಬೆಳಗಾವಿ)-2, ಸಂಧ್ಯಾ (ಬೆಂಗಳೂರು)-3; 57 ಕೆ.ಜಿ: ಕೋಮಲ್ ಹಲಗೇಕರ (ಬೆಳಗಾವಿ)-1, ಅಭಿಲಾಷಾ (ಮಂಡ್ಯ)-2, ಮೇಘನಾ (ದಾವಣಗೆರೆ)-3; 52 ಕೆ.ಜಿ: ರಾಜೇಶ್ವರಿ (ಬೆಳಗಾವಿ)-1, ಎಲ್.ಎಚ್. ದೀಪಾ (ದಾವಣಗೆರೆ)-2, ಜ್ಯೋತಿ (ಬೆಂಗಳೂರು)-3; 48 ಕೆ.ಜಿ: ಮಲಾ ಬಿ. (ಬೆಳಗಾವಿ)-1, ಶ್ರುತಿ (ದಾವಣಗೆರೆ)-2, ದೀಪಾ ಎಸ್. (ಬೆಂಗಳೂರು)-3; 44 ಕೆ.ಜಿ: ಮಲಪ್ರಭಾ ಜಾಧವ್ (ಬೆಳಗಾವಿ)-1, ಚೈತ್ರೇಯಿ (ದಾವಣಗೆರೆ)-2, ಕವಿತಾ (ಬಾಗಲಕೋಟೆ)-3; 40 ಕೆ.ಜಿ: ಗೀತಾ ಕೆ.ಟಿ. (ಬೆಳಗಾವಿ)-1, ದೀಪಾ ಬಿ. (ದಾವಣಗೆರೆ)-2, ಮೊನಿಕಾ (ಬೆಂಗಳೂರು)-3.

ಬ್ಯಾಸ್ಕೆಟ್ ಬಾಲ್
ವಿದ್ಯಾನಗರ ಬೆಂಗಳೂರು ಹಾಗೂ ಮಂಡ್ಯ ಜಿಲ್ಲಾ ತಂಡಗಳು ಕ್ರಮವಾಗಿ ಬ್ಯಾಸ್ಕೆಟ್‌ಬಾಲ್ ಪಂದ್ಯಗಳ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆದವು.

ಬಾಲಕರ ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ವಿದ್ಯಾನಗರ ತಂಡವು 36-31ರಲ್ಲಿ ಮೈಸೂರು ತಂಡವನ್ನು ಸೋಲಿಸಿತು. ಮೂರನೇ ಸ್ಥಾನಕ್ಕೆ ನಡೆದ ಹಣಾಹಣಿಯಲ್ಲಿ ಮಂಡ್ಯ ತಂಡವು 20-18ರಲ್ಲಿ ಬಳ್ಳಾರಿ ತಂಡವನ್ನು ಮಣಿಸಿತು.

ಬಾಲಕಿಯರ ವಿಭಾಗದ ಫೈನಲ್ ಪಂದ್ಯದಲ್ಲಿ ಮಂಡ್ಯವು 34-22ರಲ್ಲಿ ಬೆಂಗಳೂರಿನ ವಿದ್ಯಾನಗರ ತಂಡವನ್ನು ಸೋಲಿಸಿತು. ಮೂರನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಮೈಸೂರು 16-8ರಲ್ಲಿ ರಾಮನಗರ ತಂಡವನ್ನು ಮಣಿಸಿತು.

ಅಥ್ಲೆಟಿಕ್ಸ್ ಫಲಿತಾಂಶ
ಅಥ್ಲೆಟಿಕ್ಸ್ ವಿಭಾಗದಲ್ಲಿ 23 ಅಂಕ ಗಳಿಸಿದ ದಕ್ಷಿಣ ಕನ್ನಡ ಹಾಗೂ 30 ಅಂಕ ಪಡೆದ ಡಿವೈಎಸ್‌ಎಸ್ ಕೂಡಗಿ ತಂಡಗಳು ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ತಂಡ ಪ್ರಶಸ್ತಿಗಳನ್ನು ಗೆದ್ದುಕೊಂಡವು. 20 ಪಾಯಿಂಟ್ ಪಡೆದ ಡಿವೈಎಸ್‌ಎಸ್ ಕೂಡಗಿ ಬಾಲಕರ ತಂಡ ಹಾಗೂ 20 ಪಾಯಿಂಟ್ ಪಡೆದ ದಕ್ಷಿಣ ಕನ್ನಡ ಬಾಲಕಿಯರ ತಂಡಗಳು ರನ್ನರ್‌ಅಪ್ ಪ್ರಶಸ್ತಿ ಗೆದ್ದುಕೊಂಡವು.

ಬಾಲಕರು
3000 ಮೀ: ನಿತಿನ್ ಎನ್. (ಶಿವಮೊಗ್ಗ)-1, ಪ್ರಕಾಶ ಪಿ. (ದ.ಕ)-2, ಶ್ರೀಕಾಂತ ಪವಾರ (ಗುಲ್ಬರ್ಗ)-3; ಲಾಂಗ್ ಜಂಪ್: ಧೀರಜ್ ವಿ. (ದ.ಕ)-1, ಶರತ್ ಟಿ.ಡಿ. (ಡಿವೈಎಸ್‌ಎಸ್ ಕೂಡಗಿ)-2, ಕಿರಣ್ (ಕೋಲಾರ)-3; ಡಿಸ್ಕಸ್ ಥ್ರೋ: ಶರತ್‌ಬಾಬು ಆರ್.ಪಿ. (ದಾವಣಗೆರೆ)-1, ದೀಪಕ್ ಎಚ್.ಎಸ್. (ಬೆಂಗಳೂರು ಗ್ರಾಮೀಣ)-2, ಸಾಯಿರಾಮ್ ಎಂ. ಭಟ್ಕಳ (ಉತ್ತರ ಕನ್ನಡ)-3.

4 ್ಡ 100 ರಿಲೆ: ಡಿವೈಎಸ್‌ಎಸ್ ವಿದ್ಯಾನಗರ-1, ಡಿವೈಎಸ್‌ಎಸ್ ಕೂಡಗಿ-2, ಕೋಲಾರ-3.
ಬಾಲಕಿಯರು

3000 ಮೀ: ವೀಣಾ (ಮೈಸೂರು)-1, ವಿಶಾಲಾಕ್ಷಿ ಎಂ.ಕೆ. (ಕೊಡಗು)-2, ಕೀರ್ತಿ ವೆಂಕಟೇಶ (ಚಿಕ್ಕಮಗಳೂರು)-3; ಹೈಜಂಪ್: ಹರ್ಷಿಪಾ ಪಿ. (ಡಿವೈಎಸ್‌ಎಸ್, ಕೂಡಗಿ)-1, ಜಸ್ವಿ ಥಾಮಸ್ (ದ. ಕ)-2, ಚೈತ್ರಾ ಆರ್. ವೆರ್ಣೇಕರ (ಉತ್ತರ ಕನ್ನಡ)-3. ಶಾಟ್‌ಪಟ್: ಮಾನಸಾ ಮೋಹನ್ ನಾಯಕ (ಉತ್ತರ ಕನ್ನಡ)-1, ಸುಮಲತಾ (ದ. ಕನ್ನಡ)-2, ಮಾನಸಾ ಎಸ್.ಕೆ. (ಚಿಕ್ಕಮಗಳೂರು)-3.
4 ್ಡ 100 ಮೀ. ರಿಲೆ: ಎಸ್.ಎಸ್. ಕೂಡಗಿ-1, ದಕ್ಷಿಣ ಕನ್ನಡ-2, ಎಸ್‌ಎಸ್. ವಿದ್ಯಾನಗರ-3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.