ADVERTISEMENT

ದಾಖಲೆ ನಿರ್ಮಿಸಿದ ಸ್ಕೇಟರ್‌ಗಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 11 ಜೂನ್ 2011, 9:10 IST
Last Updated 11 ಜೂನ್ 2011, 9:10 IST

ಬೆಳಗಾವಿ: “ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡೆಗಳ ಬಗ್ಗೆ ಆಸಕ್ತಿ ವಹಿಸಬೇಕು. ಕ್ರೀಡೆ ಆರೋಗ್ಯ ಹೆಚ್ಚಿಸಿ ನಮ್ಮನ್ನು ಸದೃಢಗೊಳಿಸುತ್ತದೆ. ಹೀಗಾಗಿ ಯುವಕರು ಹೆಚ್ಚಿನ ಸಮಯ ವನ್ನು ಕ್ರೀಡೆಗೂ ಮೀಸಲಿಡಬೇಕು” ಎಂದು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಳಾಸಾಹೇಬ್ ಕಂಗ್ರಾಳಕರ ಹೇಳಿದರು.

31 ಗಂಟೆಗಳ ಕಾಲ ನಿರಂತರವಾಗಿ ಸ್ಕೇಟಿಂಗ್ ಮ್ಯಾರಥಾನ್ ನಡೆಸಿ ವಿಶ್ವದಾಖಲೆ ನಿರ್ಮಿಸಿದ ಬೆಳಗಾವಿಯ ಕ್ರೀಡಾಪಟುಗಳನ್ನು ಸತ್ಕರಿಸಿ ಅವರು ಮಾತನಾಡಿದರು.

ಭಾತ್‌ಕಾಂಡೆ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಮಿಲಿಂದ್ ಭಾತ್‌ಕಾಂಡೆ, ಕ್ರೀಡಾ ಸಾಧನೆಗಳಿಂದಾಗಿ ವಿಶ್ವ ಭೂಪಟದಲ್ಲಿ ಬೆಳಗಾವಿ ಗುರುತಿಸಿ ಕೊಳ್ಳುತ್ತಿದೆ. ಕ್ರೀಡಾಪಟು ಗಳಿಂದಾಗಿ ಬೆಳಗಾವಿಗೆ ಖ್ಯಾತಿ ಬರುತ್ತಿದೆ ಎಂದರು.

ಈ ಸಂದರ್ಭದಲ್ಲಿ ಶಿವಗಂಗಾ ಸ್ಕೇಟಿಂಗ್ ಕ್ಲಬ್‌ನ ಅಧ್ಯಕ್ಷೆ ಜ್ಯೋತಿ ಚಿಂಡಕ್, ಮೋತಿಲಾಲ್ ಚಿಂಡಕ್, ಮದನ್‌ಕುಮಾರ, ಭೈರಪ್ಪನವರ, ಶಾಲ್‌ಶರ್ಮ, ಎ.ಡಿ. ಶರ್ಮಾ, ಸುರೇಶ ಚಿಂಡಕ್, ರಮೇಶ್ ಚಿಂಡಕ್, ಚಂದ್ರಶೇಖರ ಪಾಟೀಲ, ರಾಜು ಗುಂಡಲ್ಕರ್, ಸುನೀಲ ಭೋಸ್ಲೆ ಮತ್ತಿತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.