ADVERTISEMENT

ದಾಖಲೆ ಹೊಂದಿರದ 25.67 ಲಕ್ಷ ಜಪ್ತಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2013, 9:16 IST
Last Updated 19 ಏಪ್ರಿಲ್ 2013, 9:16 IST

ಬೆಳಗಾವಿ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಎಲ್ಲ ಕಡೆಗಳಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ಚೆಕ್ ಪೋಸ್ಟ್‌ಗಳಲ್ಲಿ ನಿಯೋಜಿಸಲಾಗಿದೆ. ಫ್ಲಾಯಿಂಗ್ ಸ್ಕ್ವಾಡ್ ಸಹ ನೇಮಿಸಲಾಗಿದೆ.

ಜಿಲ್ಲೆಯಲ್ಲಿ ಯಾವುದೇ ದಾಖಲೆ ಇಲ್ಲದೇ ಸಾಗಿಸುತ್ತಿ ರುವಂತಹ 3 ಪ್ರಕರಣಗಳು ಮತ್ತೆ ವರದಿ ಯಾಗಿದ್ದು, ಒಟ್ಟು 25.67 ಲಕ್ಷ ರೂಪಾಯಿ ಜಪ್ತ್ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲ ತಿಳಿಸಿದ್ದಾರೆ.

ಸವದತ್ತಿ ಪೊಲೀಸ್ ಠಾಣೆ ವ್ಯಾಪ್ತಿಯ ಕಗದಾಳ ಚೆಕ್‌ಪೋಸ್ಟ್‌ದಲ್ಲಿ ಬೆಳಗಾವಿಯಿಂದ ಕುಷ್ಟಗಿಗೆ ತೆಗೆದುಕೊಂಡು ಹೋಗುತ್ತಿದ್ದ 8.38 ಲಕ್ಷ ರೂಪಾಯಿ ಬುಧವಾರ ಜಪ್ತ್ ಮಾಡಲಾಗಿದೆ.

ಗೋಕಾಕ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಮಾಲದಿನ್ನಿ ಚೆಕ್ ಪೋಸ್ಟ್‌ದಲ್ಲಿ ಸಾಂಗ್ಲಿಯಿಂದ ರಾಮದುರ್ಗಕ್ಕೆ ತೆಗೆದುಕೊಂಡು ಹೋಗುತ್ತಿರುವಾಗ 11 ಲಕ್ಷ ರೂಪಾಯಿಗಳನ್ನು ಗುರುವಾರ ಜಪ್ತ್ ಮಾಡಲಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಬಾಚಿ ಚೆಕ್ ಪೋಸ್ಟ್‌ದಲ್ಲಿ ಸಾವಂತವಾಡಿಯಿಂದ ಬೆಳಗಾವಿಗೆ ತೆಗೆದುಕೊಂಡು ಬರುತ್ತಿದ್ದ 6.29 ಲಕ್ಷ ರೂಪಾಯಿಗಳನ್ನು ಗುರುವಾರ ಜಪ್ತ್ ಮಾಡಲಾಗಿದೆ.

ಒಟ್ಟು 25.67 ಲಕ್ಷ ರೂಪಾಯಿ ನಗದು ಹಣವನ್ನು ಯಾವುದೇ ದಾಖಲೆ ಇಲ್ಲದೇ ಸಾಗಿಸುತ್ತಿರುವಾಗ ಜಪ್ತ್  ಮಾಡಲಾಗಿದೆ.
ಈ ಹಣ ಚುನಾವಣೆಗೆ ಸಂಬಂಧಪಟ್ಟಿರುವ ಬಗ್ಗೆ ತನಿಖೆ ನಡೆದಿದೆ ಎಂದು ತಿಳಿಸಿರುವ ಸಂದೀಪ ಪಾಟೀಲ, ಒಂದು ವಾರದ ಅವಧಿಯಲ್ಲಿ ಒಂದು ಕೋಟಿಗಿಂತ ಅಧಿಕ ಹಣವನ್ನು ಜಪ್ತ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.