ADVERTISEMENT

ನೋಟಾ: ಗೋಕಾಕದಲ್ಲಿ ಹೆಚ್ಚು, ಕುಡಚಿಯಲ್ಲಿ ಕಡಿಮೆ

​ಪ್ರಜಾವಾಣಿ ವಾರ್ತೆ
Published 16 ಮೇ 2018, 6:10 IST
Last Updated 16 ಮೇ 2018, 6:10 IST
ನೋಟಾ: ಗೋಕಾಕದಲ್ಲಿ ಹೆಚ್ಚು, ಕುಡಚಿಯಲ್ಲಿ ಕಡಿಮೆ
ನೋಟಾ: ಗೋಕಾಕದಲ್ಲಿ ಹೆಚ್ಚು, ಕುಡಚಿಯಲ್ಲಿ ಕಡಿಮೆ   

ಬೆಳಗಾವಿ: ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ ಬಹುತೇಕ ಕಡೆಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಪಡೆದ ಮತಕ್ಕಿಂತಲೂ ‘ನೋಟಾ’ಕ್ಕೆ (ಮೇಲಿನ ಯಾರಿಗೂ ಮತವಿಲ್ಲ) ಹೆಚ್ಚಿನ ಮತಗಳು ಚಲಾವಣೆಯಾಗಿವೆ!

ಪ್ರಮುಖ ಪಕ್ಷ ಕಾಂಗ್ರೆಸ್‌ನ ರಮೇಶ ಜಾರಕಿಹೊಳಿ ಹಾಗೂ ಬಿಜೆಪಿಯ ಅಶೋಕ ಪೂಜಾರಿ ಸ್ಪರ್ಧಿಸಿದ್ದ ಗೋಕಾಕ ಕ್ಷೇತ್ರದಲ್ಲಿ ಅತಿ ಹೆಚ್ಚು, ಅಂದರೆ 2121 ಮಂದಿ ‘ಮೇಲಿನ ಯಾರಿಗೂ ಮತವಿಲ್ಲ’ ಎಂದಿದ್ದಾರೆ. ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳಕರ ಹಾಗೂ ಬಿಜೆಪಿ ಸಂಜಯ ಪಾಟೀಲ ಸ್ಪರ್ಧಿಸಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರ ‘ನೋಟಾ’ದಲ್ಲಿ 2ನೇ ಸ್ಥಾನದಲ್ಲಿದೆ.

ಬಿಜೆಪಿಯ ಪಿ. ರಾಜೀವ ಹಾಗೂ ಕಾಂಗ್ರೆಸ್‌ನ ಅಮಿತ್‌ ಘಾಟಗೆ ಕಣದಲ್ಲಿದ್ದ ಕುಡಚಿ (ಪ. ಜಾತಿ ಮೀಸಲು) ಕ್ಷೇತ್ರದಲ್ಲಿ ಅತಿ ಕಡಿಮೆ (348) ನೋಟಾ ಚಲಾವಣೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 24,145 ಮಂದಿ ‘ನೋಟಾ’ಗೆ ಜೈ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.