ADVERTISEMENT

ನ್ಯಾಯಾಂಗ ಅಧಿಕಾರಿಗಳಿಂದ ವಂತಿಗೆ

ಉತ್ತರಾಖಂಡ್‌ನಲ್ಲಿ ಪರಿಹಾರ ಕಾರ್ಯ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 7:52 IST
Last Updated 20 ಜುಲೈ 2013, 7:52 IST

ಬೆಳಗಾವಿ: ಉತ್ತರಾಖಂಡದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಜನರಿಗೆ ಪುನರ್ ವಸತಿ ಕಲ್ಪಿಸಲು ಅನುಕೂಲವಾಗುವಂತೆ ಜಿಲ್ಲೆಯ ನ್ಯಾಯಾಂಗ ಇಲಾಖೆಯ ಅಧಿಕಾರಿಗಳು ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ 1.06 ಲಕ್ಷ ರೂಪಾಯಿ ಪರಿಹಾರ ನಿಧಿಯ ಚೆಕ್ ಅನ್ನು ನೀಡಿದ್ದಾರೆ.

ಜಿಲ್ಲಾ ನ್ಯಾಯಾಧೀಶ ಕೆ.ಎನ್.ಫಣೀಂದ್ರ ಅವರು ಜಿಲ್ಲಾಧಿಕಾರಿ ಎನ್.ಜಯರಾಂ ಅವರಿಗೆ ಶುಕ್ರವಾರ ಪರಿಹಾರದ ಚೆಕ್ಕನ್ನು ನೀಡಿದರು.
ಈ ಹಣವನ್ನು ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ಕಳುಹಿಸಿ ಪುನರ್ ವಸತಿ ಕಾರ್ಯಕ್ರಮಗಳಿಗೆ ಬಳಸುವಂತೆ ಜಿಲ್ಲಾಧಿಕಾರಿಗಳಿಗೆ ನ್ಯಾಯಾಧೀಶರು ತಿಳಿಸಿದರು.

ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರಾದ ಚಂದ್ರಶೇಖರ ಪಾಟೀಲ, ಎನ್.ಸಿ.ಶ್ರೀನಿವಾಸ, ಕೆ.ನಾಗರತ್ನ, ವಿ.ಎಚ್.ಸಂಬ್ರಾಣಿ, ಎಚ್.ಆರ್.ಶ್ರೀನಿವಾಸ, ಎಸ್.ಜಿ.ಬಿರಲದಿನ್ನಿ, ಪಿ.ಜಿ.ಎಂ.ಪಾಟೀಲ, ಮಧುಸೂದನ ಬಿ.,  ಎಂ.ಎಂ.ಪಠಾಣ, ಎಂ.ಚಂದ್ರಶೇಖರ ರೆಡ್ಡಿ, ವೆಂಕಟೇಶ ಹುಲಗಿ, ನಾಗರಾಜಪ್ಪ ಎ.ಕೆ., ಆರ್.ಪಿ.ಗೌಡಾ, ಪ್ರಕಾಶ ನಾಯಕ, ಎಂ.ಎಸ್.ಶಶಿಕಲಾ, ಅರವಿಂದ ಹಗರಗಿ, ಎಂ.ಕೆ.ಅಶೋಕ, ಎನ್.ಸುಬ್ರಮಣ್ಯ ಹಾಗೂ ಆನಂದ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT