ಬೆಳಗಾವಿ: ಬೆಳಗಾವಿ ಎಂದೆಂದಿಗೂ `ಬೆಳಗಾವಿ~ ಆಗಿಯೇ ಇರುತ್ತದೆ. ಈ ವಿಷಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಮುಖಂಡರು ವಿನಾಕಾರಣ ರಾಜಕೀಯ ಮಾಡಬಾರದು ಎಂದು ಸಾಹಿತಿ ಡಾ. ಚಂದ್ರಶೇಖರ ಪಾಟೀಲ ಮನವಿ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಚಂಪಾ ಅವರು ಚುನಾವಣಾ ಪ್ರಚಾರಕ್ಕಾಗಿ ಬುಧವಾರ ನಗರಕ್ಕೆ ಆಗಮಿಸಿದ್ದಾಗ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ. `ಬೆಳಗಾವಿ~ ಎಂದು ಕರೆಯಬಾದರು ಎಂದು ಎಂಇಎಸ್‌ನವರು ಆಕ್ಷೇಪಿಸುತ್ತಿರುವುದು ಸರಿಯಲ್ಲ. ಎಂಇಎಸ್‌ನವರು ನಮ್ಮ ಅಣ್ಣ- ತಮ್ಮಂದಿರಾಗಿದ್ದಾರೆ. ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಗಡಿ ವಿವಾದ ಸೃಷ್ಟಿಸಿದ್ದಾರೆ ಎಂಬುದನ್ನು ಅರ್ಥ ಮಾಡಿ ಕೊಳ್ಳಬೇಕು ಎಂದು ಹೇಳಿದರು.
ಕಸಾಪ ಅಧ್ಯಕ್ಷನಾಗಿ ಆಯ್ಕೆ ಯಾದರೆ, ಗಡಿ ಭಾಗವಾದ ಬೆಳಗಾವಿಯಲ್ಲಿ ಉಭಯ ಭಾಷೆಗಳ ಸಮ್ಮೇಳನ ನಡೆಸಲಾಗುವುದು ಎಂದರು,
ಕನ್ನಡ ಹಾಗೂ ಸ್ಥಳೀಯ ಮರಾಠಿ ಸಾಹಿತಿಗಳು ಪರಸ್ಪರ ವಿಚಾರ ಮಂಡಿಸು ತ್ತಾರೆ. ರಾಜಕಾರಣಿ ಗಳದ್ದು ಧ್ವಂಸ ಮಾಡುವ ಪ್ರವೃತ್ತಿ ಯಾದರೆ, ಸಾಹಿತಿ ಗಳದ್ದು ಕಟ್ಟಬೇಕು ಎಂಬ ಪ್ರವೃತ್ತಿ ಯಾಗಿದೆ ಎಂದರು.
ಕಸಾಪ ಕೇವಲ ಸಾಹಿತಿಗಳಿಗೆ ಸಂಬಂಧಪಟ್ಟದ್ದಲ್ಲ. ಕನ್ನಡದ ಬದುಕಿನ ಬಗ್ಗೆ ಚರ್ಚಿಸಲು, ಕನ್ನಡದ ಹಿತಾಸಕ್ತಿ ಮಂಡಿಸಲು ಕಸಾಪ ವೇದಿಕೆ ಆಗಬೇಕು ಎಂದು ಜನ ನಿರೀಕ್ಷಿಸುತ್ತಿದ್ದಾರೆ. ಕನ್ನಡಿ ಗರಿಗೆ ಕರ್ನಾಟಕದಲ್ಲಿ ಉದ್ಯೋಗ ಸಿಗುವ ನಿಟ್ಟಿನಲ್ಲಿ ಪರಿಷತ್ತು ಕೆಲಸ ಮಾಡಬೇಕು ಎಂದು ತಿಳಿಸಿದರು.
ತಮಿಳುನಾಡಿನಲ್ಲಿ ತಮಿಳಿಗೆ ಇರುವಂತೆ ಕರ್ನಾಟಕದಲ್ಲಿ ಕನ್ನಡಕ್ಕೆ ರಾಜಕೀಯ ಇಚ್ಛಾಶಕ್ತಿ ಬರಬೇಕು ಎಂದು ಚಂಪಾ ಅಭಿಪ್ರಾಯಪಟ್ಟರು.
ಮೇ 15, 2014ರಂದು ಪರಿಷತ್ತು ಆರಂಭಗೊಂಡು ನೂರು ವರ್ಷ ವಾಗುತ್ತದೆ. ಹೀಗಾಗಿ ಶತ ಮಾನೋತ್ಸ ವವನ್ನು ಕನ್ನಡ ಸಂಘಟನೆಗಳ ಸಹಕಾರದಿಂದ ಬೇರೆ ರಾಜ್ಯ, ದೇಶಗಳಲ್ಲೂ ಆಚರಿಸಲಾಗುವುದು. ಜಿಲ್ಲಾ- ಹೋಬಳಿ ಮಟ್ಟದಲ್ಲಿ `ಕನ್ನಡ ಭವನ~ ನಿರ್ಮಿಸಲು ಯತ್ನಿಸ ಲಾಗುವುದು ಎಂದರು.
11 ಅಂಶಗಳ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದ್ದು, ನನ್ನ ಹಿಂದಿನ ಅವಧಿಯಲ್ಲಿ ಅಪೂರ್ಣಗೊಂಡ ಕೆಲಸ ವನ್ನು ಪೂರ್ಣಗೊಳಿಸುತ್ತೇನೆ. ಹೀಗಾಗಿ ಪರಿಷತ್ತಿನ ಆಜೀವ ಸದಸ್ಯರು ನನ್ನನ್ನೇ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಹಿರಿಯ ಕವಿ ಜಿನದತ್ತ ದೇಸಾಯಿ, ಕನ್ನಡ ಹೋರಾಟಗಾರ ಅಶೋಕ ಚಂದರಗಿ, ಬರಹಗಾರ ಡಾ. ಕೆ.ಎನ್. ದೊಡ್ಡಮನಿ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.