ADVERTISEMENT

ಭರ್ತಿಯಾದ ಮಲಪ್ರಭೆಯ ಮಡಿಲು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 10:55 IST
Last Updated 10 ಸೆಪ್ಟೆಂಬರ್ 2011, 10:55 IST

ಸವದತ್ತಿ: ಮುಂಗಾರು ಮಳೆ ವಿಫಲ ದಿಂದ ಕಂಗಾಲಾದ ರೈತರಿಗೆ ಮಲಪ್ರ ಭೆಯ ಮಡಿಲು ಭರ್ತಿಯಾಗಿರುವುದು ಸಂತಸ ತಂದಿದೆ. ರೇಣುಕಾ ಸಾಗರಕ್ಕೆ ಒಳ ಹರಿವು ಹೆಚ್ಚಾಗಿದ್ದರಿಂದ ಹೆಚ್ಚುವರಿ ನೀರನ್ನು ಹೊರ ಬಿಡಲಾಗಿದೆ.

ಗುರುವಾರ ನದಿಯ ಮೇಲ್ಗಡೆ ಭಾಗದಲ್ಲಿ ಸುರಿದ ಮಳೆ ಯಿಂದ ನದಿ ಪಾತ್ರದಲ್ಲಿ ನೀರು ಸಂಗ್ರಹವಾಗಿದ್ದು, ಹೆಚ್ಚಿನ ನೀರು ಹೊರ ಹಾಕಲಾಗಿತ್ತು. ಇದರಿಂದ ಮುನವಳ್ಳಿ ಸೇತುವೆ ಮೇಲೆ ನೀರು ಹರಿದು ಸಂಚಾರ ಸ್ಥಗಿತವಾ ಗಿತ್ತು. ಆದರೆ ಶುಕ್ರವಾರ ಒಳ ಹರಿವು ಕಡಿಮೆಯಾಗಿದೆ.

ಶುಕ್ರವಾರ ದೊರೆತ ಮಾಹಿತಿ ಪ್ರಕಾರ 13272 ಕ್ಯೂಸೆಕ್ ಒಳ ಹರಿವು ಇದೆ. ಒಟ್ಟು 12484 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದ್ದು ಇದರಲ್ಲಿ ಮಲಪ್ರಭಾ ಬಲದಂಡೆ ಕಾಲುವೆಗೆ 900 ಕ್ಯೂಸೆಕ್, ಎಡದಂಡೆ ಕಾಲುವೆಗೆ 800 ಕ್ಯೂಸೆಕ್ ಹಾಗೂ 125 ಎಲ್.ಆರ್.ಎಸ್ ಮೂಲಕ ಬಿಡಲಾಗಿದೆ ಎಂದು ನವಿಲು ತೀರ್ಥ ಡ್ಯಾಮ್‌ನ ಅಧೀಕ್ಷಕ ಎಂಜಿನಿ ಯರ್ ಬಿ.ಆರ್. ನರಸನ್ನವರ ತಿಳಿಸಿ ದರು.

ಈಗಾಗಲೇ ನದಿ ಪಾತ್ರದ ಗ್ರಾಮ ಗಳಿಗೆ ಹಾಗೂ ರಾಮದುರ್ಗ, ರೋಣ, ಬಾಗಲಕೋಟೆವರೆಗಿನ ನಗರಗಳಿಗೆ ಮುಂಜಾಗ್ರತಾ ಕ್ರಮಕ್ಕಾಗಿ ಎಚ್ಚರಿಸಲಾ ಗಿದ್ದು, ಶುಕ್ರವಾರ ಬಹುತೇಕ ನೀರಿನ ಒಳ ಹರಿವು ಕಡಿಮೆಯಾಗಿದ್ದು, ಹೊರ ಹರಿವು ಕಡಿಮೆ ಮಾಡಲಾಗಿದೆ. ಸಂಜೆಯ ವೇಳೆಗೆ ಮುನವಳ್ಳಿ ಸೇತುವೆ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.

ರೈತರಲ್ಲಿ ಹರ್ಷ: ಮುಂಗಾರು ಮಳೆ ಹೋದರೇನು ಹಿಂಗಾರಿ ಬೆಳೆಯನ್ನಾ ದರೂ ಬೆಳೆಯಬಹುದು, ಇದರಿಂದ ಸಾಲದ ಬಡ್ಡಿಯಾದರೂ ಭರಿಸಬ ಹುದು ಎಂಬುದು ರೈತರ ಅನಿಸಿಕೆಯಾ ಗಿದೆ. ಇದೀಗ ಕಾಲುವೆಗೂ ನೀರು ಹರಿ ಸಿದ್ದು, ಭೂಮಿ ಹದಗೊಳಿಸುತ್ತಿದ್ದಾರೆ.

ಮಲಪ್ರಭಾ ನದಿಯ ನೀರಿನ ಯೋಜನೆ ಈ ಭಾಗದ ಸಮಸ್ತ ಜನರ ಪಾಲಿನ ಕಲ್ಪವೃಕ್ಷವಾಗಿದ್ದು, ಸೂಕ್ತ ರಕ್ಷ ಣೆಯ ಕೊರತೆ ಇದ್ದು, ಇಡೀ ನವಿಲು ತೀರ್ಥದಲ್ಲಿ ಒಬ್ಬ ಪೇದೆ ಬಿಟ್ಟರೆ ಯಾರೂ ಕಾಣಲಿಲ್ಲ.  ಈ ಕುರಿತು ಇಲ್ಲಿನ ಅಧಿಕಾರಿಗಳನ್ನು ವಿಚಾರಿಸಿದರೆ ಸರಿಯಾದ ಉತ್ತರ ದೊರಕಿಲಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.