ADVERTISEMENT

ಮರಗಳನ್ನು ಬೆಳೆಸಲು ಆಸಕ್ತಿವಹಿಸಿ: ಕಡಾಡಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 10:00 IST
Last Updated 14 ಫೆಬ್ರುವರಿ 2012, 10:00 IST

ಹುಕ್ಕೇರಿ: ಜನರು ಗಿಡ-ಮರಗಳನ್ನು ಕಡಿಯುವಾಗಿನ ಆಸಕ್ತಿಯನ್ನು ಅವುಗಳನ್ನು ಬೆಳೆಸುವಾಗ ತೋರುವುದಿಲ್ಲ. ಇದಕ್ಕಾಗಿ ಹೆಚ್ಚು ಮರಗಳನ್ನು ಬೆಳೆಸಲು ಆಸಕ್ತಿ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಈರಣ್ಣ ಕಡಾಡಿ ಎಂದರು.

ಪಟ್ಟಣದ   `ಸಾಮಾಜಿಕ ಅರಣ್ಯ ವಲಯ ಕಚೇರಿಯ~ ನೂತನ ಕಟ್ಟಡ ಉದ್ಘಾಟಿಸಿ ಅವರು  ಮಾತನಾಡಿದರು.
 ದಿನದಿಂದ ದಿನಕ್ಕೆ ಅರಣ್ಯ ನಾಶವಾಗುವದರಿಂದ ನಿಸರ್ಗ ತನ್ನ ಸಮತೋಲನ ಕಳೆದುಕೊಂಡು ಋತುಮಾನದಲ್ಲಿ ವ್ಯತ್ಯಾಸ ಮಾಡುತ್ತಿರುವದಕ್ಕೆ ಆತಂಕ ವ್ಯಕ್ತಪಡಿಸಿದರು.

 ಎನ್‌ಆರ್‌ಇಜಿ ಯೋಜನೆಯಡಿ ಕೈಕೊಳ್ಳುವ ಕಾಮಗಾರಿಗಳು ಆಯಾ ಗ್ರಾಮ ಪಂಚಾಯಿತಿ ಅಭಿರುಚಿಗೆ ತಕ್ಕಂತೆ ನಡೆಯುತ್ತವೆ. ಗ್ರಾಮ ಪಂಚಾಯಿತಿಗಳು ಗಿಡ-ಮರ ಬೆಳೆಸುವ ಉದ್ದೇಶ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಚಿವ ಉಮೇಶ್ ಕತ್ತಿ ಮಾತನಾಡಿ ಏಳು ನದಿ ಹರಿಯುವ ಜಿಲ್ಲೆಯಲ್ಲಿ ಕಬ್ಬಿಗೆ ಕೊಡುವಷ್ಟು ಮಹತ್ವವನ್ನು ಗಿಡ-ಮರ ಬೆಳೆಸಲು ಕೊಡಬೇಕೆಂದು ವಿನಂತಿಸಿದ ಅವರು ಅರಣ್ಯ ನಾಶವಾಗುವದರಿಂದ ಕಾಡು ಮೃಗಗಳು ಪಟ್ಟಣ ಪ್ರವೇಶ ಮಾಡುತ್ತಿವೆ ಎಂಬುದನ್ನು ಉದಾಹರಣೆ ಸಹಿತ ವಿವರಿಸಿ, ಕಾಡಿನ ನಾಶದಿಂದ ಆಗುವ ಅನಾಹುತದ ಬಗ್ಗೆ ಜನರಲ್ಲಿ ಅರಣ್ಯ ಇಲಾಖೆ ಪರಿಣಾಮಕಾರಿ ಪ್ರಚಾರದ ಮೂಲಕ ಅರಿವು ಮೂಡಿಸಲು ಸೂಚಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಜೆ.ಎನ್.ಪಾಟೀಲ ಇಲಾಖೆಯಿಂದ ಉಚಿತವಾಗಿ ವಿವರಿಸುವ ಸಸಿ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಜಿ.ಪಂ.ಉಪಾಧ್ಯಕ್ಷೆ ಸುನೀತಾ ಶಿರಗಾಂವೆ, ಪ.ಪಂ.ಅಧ್ಯಕ್ಷ ಜಯಗೌಡ ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಪರಗೌಡ ಪಾಟೀಲ, ಹಿರಾ ಶುಗರ್ಸ್‌ ಉಪಾಧ್ಯಕ್ಷ ಶಿವನಾಯ್ಕ ನಾಯಿಕ, ನಿರ್ದೇಶಕ ಅಪ್ಪಾಸಾಹೇಬ ಶಿರಕೋಳಿ,  ಸುಭಾಷ ನಾಯಿಕ, ಭೀಮಗೌಡ ಗಿರಿಗೌಡನವರ, ತಾ.ಪಂ.ಮಾಜಿ ಅಧ್ಯಕ್ಷ ಸತ್ಯಪ್ಪ ನಾಯಿಕ,  ಅಶೋಕ ಪಟ್ಟಣಶೆಟ್ಟಿ, ಅಪ್ಪಾಸಾಹೇಬ ಸಾರಾಪುರೆ, ತನುಜಾ ಜಾಧವ, ನಂದಾ ಸನ್ನಾಯಿಕ, ಮಕಬುಲ್ ಮುಲ್ಲಾ, ಸಂಗೀತಾ ಕರಗುಪ್ಪಿ,  ಗಿರೀಶ ಹೊಸೂರ ಟಿ.ಹೀರಾಲಾಲ, ದುರದುಂಡಿ ಕೆಂಗಾರ, ತಹಶಿಲ್ದಾರ ಎ.ಐ.ಅಕ್ಕಿವಾಟೆ ಮತ್ತು ಮುಖ್ಯಾಧಿಕಾರಿ ಈರಣ್ಣ ಬಗನಾಳ ಉಪಸ್ಥಿತರಿದ್ದರು.

ಡಿ.ಸಿ.ಎಫ್.ಅಧಿಕಾರಿ ಜೆ.ಎನ್. ಪಾಟೀಲ ಸ್ವಾಗತಿಸಿದರು. ಸಿ.ಜಿ.ಮಿರ್ಜಿ ನಿರೂಪಿಸಿದರು. ಎ.ಸಿ.ಎಫ್.ಅಧಿಕಾರಿ ಪ್ರಶಾಂತ ಶಂಖಿಕಿನಮಠ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.