ADVERTISEMENT

ಮಲ್ಲಕಂಬ ಪ್ರದರ್ಶಿಸಿದ ಬೂದಿಹಾಳ ಯುವಕರು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 5:12 IST
Last Updated 16 ಅಕ್ಟೋಬರ್ 2017, 5:12 IST

ನಿಪ್ಪಾಣಿ: ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಗಳಿಂದ ಒಂದು ತಿಂಗಳು ನಡೆದಿರುವ ಅಧ್ಯಾತ್ಮಿಕ ಪ್ರವಚನದ ನಿಮಿತ್ತ ಆಯೋ ಜಿಸಿದ್ದ ಭಾರತೀಯ ಹಬ್ಬ ಹಾಗೂ ಸಂಸ್ಕೃತಿ ಕಾರ್ಯಕ್ರಮದಲ್ಲಿ ಶುಕ್ರವಾರ ಬೂದಿಹಾಳ ಗ್ರಾಮದ ಹನುಮಾನ ತಾಲೀಮ್‌ ಮಂಡಳದ ಯುವಕರು ಮಲ್ಲಕಂಬ ಸಾದರಪಡಿಸಿದರು.

ಬೆಳವಿಯ ಡಾ. ಡಿ.ಆರ್‌. ನದಾಫ್‌ ಅವರಿಂದ ಕೊಳಲು ವಾದನ, ಗೋಕಾಕದ ಬಸವರಾಜ ಹಿರೇಮಠ ಅವರಿಂದ ಜಾನಪದ ಗಾಯನ ಹಾಗೂ ನಣದಿಯ ಬಸವಜ್ಯೋತಿ ಪದವಿ ಕಾಲೇಜಿನ ವಿದ್ಯಾರ್ಥಿನಿಯರಿಂದ ಜಾನಪದ ನೃತ್ಯ ಕಾರ್ಯಕ್ರಮಗಳು ಜರುಗಿದವು.

ಸ್ಥಳೀಯ ವಿರೂಪಾಕ್ಷಲಿಂಗ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ, ಸದಲಗಾ ಗ್ರಾಮದ ಶ್ರದ್ಧಾನಂದ ಸ್ವಾಮೀಜಿ, ಶಾಸಕಿ ಶಶಿಕಲಾ ಜೊಲ್ಲೆ, ಮುಖಂಡ ಅಣ್ಣಾಸಾಹೇಬ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ, ಬಸವಪ್ರಸಾದ ಜೊಲ್ಲೆ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.