ADVERTISEMENT

ಮಹಾದಾಯಿ ನ್ಯಾಯಮಂಡಳಿ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 9:24 IST
Last Updated 21 ಡಿಸೆಂಬರ್ 2013, 9:24 IST

ದಾಂಡೇಲಿ: ಮಹಾದಾಯಿ ಜಲ ನ್ಯಾಯಮಂಡಳಿ  ಅಧ್ಯಕ್ಷರಾದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಜೆ.ಎಚ್. ಪಾಂಚಾಲ ಅವರ ನೇತೃತ್ವದ ತಂಡ ಶುಕ್ರವಾರ ಸೂಪಾ ಡ್ಯಾಂ ಮತ್ತು ಅಂಬಿಕಾನಗರದ ನಾಗಝರಿ ಪವರ್ ಹೌಸ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

18 ಮಂದಿಯ ತಂಡದಲ್ಲಿ ಗೋವಾ ಅಡ್ವೊಕೇಟ್ ಜನರಲ್ ಆತ್ಮರಾಮ ನಾಡಕರ್ಣಿ, ಕರ್ನಾಟಕದ ಅಡ್ವೊಕೇಟ್ ಜನರಲ್ ಎ.ಎಚ್. ಮೋಹನ ಕತಾರ್ಕಿ, ನಿವೃತ್ತ ಮುಖ್ಯ ನ್ಯಾಯಾಧೀಶರುಗಳಾದ ವಿನಯ ಮಿತ್ತಲ್‌, ಪಿ.ಎಸ್. ನಾರಾಯಣ ಅವರು ಇದ್ದರು
.
ಅವರು ಕರ್ನಾಟದಲ್ಲಿ ನಿರ್ಮಿತವಾಗಿರುವ ಅಣೆಕಟ್ಟೆಗಳಿಂದ ಅದರ ಸಂತ್ರಸ್ತರಿಗೆ ಆಗಿರುವ ಸಮಸ್ಯೆ, ಪರಿಸರಕ್ಕೆ ಉಂಟಾದ ಧಕ್ಕೆ ಹಾಗೂ ಅದರ ಸಾಧಕ -ಬಾಧಕಗಳ ಬಗ್ಗೆ ಪರಿಶೀಲಿಸಲು ಭೇಟಿ ನೀಡಿದ್ದರು ಎಂದು ತಿಳಿದುಬಂದಿದೆ. ಈ ಸಮಿತಿಯ ಜೊತೆಯಲ್ಲಿ ಕರ್ನಾಟಕ ಹಾಗೂ ಗೋವಾ ರಾಜ್ಯದ ಸುಮಾರು ನೂರಕ್ಕೂ ಹೆಚ್ಚಿನ ವಿವಿಧ ಇಲಾಖೆಯ ಅಧಿಕಾರಿಗಳು ಬಂದಿದ್ದರು.

ಈ ಸಂದರ್ಭದಲ್ಲಿ ಗಣೇಶಗುಡಿಯ ಕೆಪಿಸಿ ಮುಖ್ಯ ಎಂಜಿನಿಯರ್‌ ಶಂಕರ ದೇವನೂರ, ಅಂಬಿಕಾನಗರದ ಕೆಪಿಸಿ ಮುಖ್ಯ ಎಂಜಿನಿಯರ್‌ ಲಕ್ಷಣ ಕಬಾಡೆ, ಕಾರವಾರ ಉಪ ವಿಭಾಗಾಧಿಕಾರಿ ಪುಷ್ಪಲತಾ ಹಾಗೂ ಪೊಲೀಸ್ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.