ADVERTISEMENT

ರಸಗೊಬ್ಬರ ಅಂಗಡಿಗೆ ನುಗ್ಗಿದ ಮಳೆ ನೀರು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 5:44 IST
Last Updated 15 ಅಕ್ಟೋಬರ್ 2017, 5:44 IST
ಶುಕ್ರವಾರ ರಾತ್ರಿ ಸುರಿದ ಬಾರಿ ಮಳೆಯಿಂದಾಗಿ ರಾಯಬಾಗ ಪಟ್ಟಣದ ಮಹಾದೇವ ದೊಡಮನಿ ಅವರ ಬಾಲಾಜಿ ರಸಗೊಬ್ಬರ ಅಂಗಡಿಗೆ ಮಳೆ ನೀರು ನುಗ್ಗಿವುದು
ಶುಕ್ರವಾರ ರಾತ್ರಿ ಸುರಿದ ಬಾರಿ ಮಳೆಯಿಂದಾಗಿ ರಾಯಬಾಗ ಪಟ್ಟಣದ ಮಹಾದೇವ ದೊಡಮನಿ ಅವರ ಬಾಲಾಜಿ ರಸಗೊಬ್ಬರ ಅಂಗಡಿಗೆ ಮಳೆ ನೀರು ನುಗ್ಗಿವುದು   

ರಾಯಬಾಗ: ‘ತಾಲ್ಲೂಕಿನ ಎಲ್ಲ ಕೆರೆಕಟ್ಟೆಗಳು ಬಹುತೇಕ ಭರ್ತಿಯಾಗಿವೆ. ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಹುಲ್ಯಾಳ ಕೆರೆಯಲ್ಲಿ 0.75 ಟಿ.ಎಂ.ಸಿ ಅಡಿ ನೀರು ಸಂಗ್ರಹವಾಗಿದೆ’ ಎಂದು ತಹಶೀಲ್ದಾರ ಕೆ.ಎನ್.ರಾಜಶೇಖರ ಹೇಳಿದರು.

‘ಪಟ್ಟಣದ ಹುಲ್ಯಾಳ ಕೆರೆಗೆ ಶನಿವಾರ ಭೇಟಿ ನೀಡಿ ಮಾತನಾಡಿದ ಅವರು, ‘ಕಳೆದ ವಾರದಿಂದ ತಾಲ್ಲೂಕಿನಲ್ಲಿ ಸುಮಾರು 42 ಮಿ.ಮೀ. ನಷ್ಟು ಮಳೆಯಾಗಿದೆ. ಶುಕ್ರವಾರ ರಾತ್ರಿ ಸುರಿದ ಬಾರಿ ಮಳೆಯಿಂದಾಗಿ ಕೊಳಚೆ ಮನೆಗಳಿಗೆ ಹಾಗೂ ವಾಣಿಜ್ಯ ಮಳಿಗೆಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಪರಿಹಾರಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು’ ಎಂದರು.

‘ಚರಂಡಿ ನೀರು ಸರಾಗವಾಗಿ ಹರಿಯದೇ ಇದ್ದರಿಂದ ರಸಗೊಬ್ಬರ ಅಂಗಡಿ ಹಾಗೂ ಮನೆಗಳಿಗೆ ಕೊಳಚೆ ನುಗ್ಗಿದ್ದ. ಚರಂಡಿ ಒತ್ತುವರೆ ಮಾಡಿರುವುದೇ ಇದಕ್ಕೆ ಕಾರಣ. ಶುಕ್ರವಾರ ಸುರಿದ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಸುಮಾರು 40 ಮನೆಗಳು ಬಿದ್ದಿವೆ’ ಎಂದರು.

ADVERTISEMENT

ಕೃಷಿ ಅಧಿಕಾರಿ ಸಿ.ಆರ್.ಮನ್ನಿಕೇರಿ, ಪಟ್ಟಣ ಪಂಚಾಯ್ತಿ ಸದಸ್ಯರಾದ ಚಂದು ನಾವಿ, ಬೀರಪ್ಪ ಕುರಿ, ಕಲ್ಲಪ್ಪ ಹಳಿಂಗಳಿ, ಎಂಜಿನಿಯರ್‌ ಎಸ್.ಆರ್. ಚೌಗಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.