ADVERTISEMENT

ರಸ್ತೆ ಕಾಮಗಾರಿಗೆ ಭೂಮಿ ಪೂಜೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 6:00 IST
Last Updated 24 ಸೆಪ್ಟೆಂಬರ್ 2011, 6:00 IST

ಯಮಕನಮರಡಿ: `ಗ್ರಾಮಸ್ಥರ ಬಹು ದಿನಗಳ ಬೇಡಿಕೆಯಾದ ಮುಖ್ಯ ರಸ್ತೆ ಕಾಮಗಾರಿ ಕನಸು ಈಗ ಈಡೇರುತ್ತಿದೆ. ಅದರ ಸದುಪಯೋಗ ಮಾಡಿಕೊಳ್ಳಬೇಕು~ ಎಂದು ಶಾಸಕ ಸತೀಶ ಜಾರಕಿಹೊಳಿ ತಿಳಿಸಿದರು.

ಇಲ್ಲಿಗೆ ಸಮೀಪದ ಹೊಸವಂಟಮೂರಿ ಗ್ರಾಮದ ಮುಖ್ಯ ರಸ್ತೆ ಕಾಂಕ್ರೀಟ್ ರಸ್ತೆ  ಗೆ 50-50 ಯೋಜನೆಯಡಿಯಲ್ಲಿ ಸುಮಾರು 7ಲಕ್ಷ 50 ಸಾವಿರ ರೂಪಾಯಿ ವೆಚ್ಚದ ಕಾಮಗಾರಿಗೆ   ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮದಲ್ಲಿ ಈ ಹಿಂದೆ ಮಾಜಿ ಮುಖ್ಯ ಮಂತ್ರಿ  ಎಚ್.ಡಿ. ಕುಮಾರಸ್ವಾಮಿ ಅವರ ಅಧಿಕಾರ ಅವಧಿಯಲ್ಲಿ ಮಂಜೂರಾದ ಕುಡಿಯುವ ನೀರಿನ ಯೋಜನೆಯು ನೆನಗುದಿಗೆ ಬಿದ್ದಿದ್ದು, ಅದನ್ನು ಸರಿಯಾಗಿ ವಿಚಾರಣೆ ಮಾಡಿ, ಬರುವ ದಿನಗಳಲ್ಲಿ ಗ್ರಾಮದ ಜನರಿಗೆ ಸಮರ್ಪಕವಾಗಿ ಕುಡಿರಯುವ ನೀರು ಬಿಡಲು ನಾವು ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಲಗಮಣ್ಣಾ ಪಾಟೀಲ ಭೂಮಿ ಪೂಜೆ ನೇರವೇರಿಸಿದರು. ವಂಟಮೂರಿ ತಾ.ಪಂ ಸದಸ್ಯ ರಾಮಾಣ್ಣಾ ಗುಳ್ಳಿ, ಗ್ರಾಪಂ ಅಧ್ಯಕ್ಷ ಮಹಾದೇವ ಬನ್ನಿಬಾಗಿ, ಸುರೇಶ ನಾಯಿಕ, ರಾಜೇಂದ್ರ ತುಬಚಿ, ಮಾರುತಿ ಗುಟಗುದ್ದಿ, ಬಿರಾದಾರ ಗೌಡರ, ಎಸ್.ಎ. ಬಾದಾಮಿ ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.