ADVERTISEMENT

ರೈತ ಸಂಘದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 7:45 IST
Last Updated 10 ಏಪ್ರಿಲ್ 2012, 7:45 IST

ಗೋಕಾಕ: ರಾಜ್ಯದಲ್ಲಿ ತಲೆದೋರಿರುವ ಬರಗಾಲ ಪರಿಸ್ಥಿತಿಯನ್ನು ಸಮರ್ಪ ಕವಾಗಿ ನಿಭಾಯಿಸಬೇಕು, ಬರಗಾಲದಿಂದ ಸಂಕಷ್ಟವನ್ನು  ಎದುರಿ ಸುತ್ತಿರುವ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಸೋಮವಾರ ಮನವಿ ಅರ್ಪಿಸಿ, ಸಾಂಕೇತಿಕ ಧರಣಿ ನಡೆಸುವ ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಶಿವನಗೌಡ ಗೌಡರ ಮಾತನಾಡಿ, ಸರ್ಕಾರ ಬರಗಾಲ ನಿವಾರಣೆಗೆ ಹಾಕಿ ಕೊಂಡಿರುವ ಯೋಜನೆಗಳು ಸಮರ್ಪ ಕವಾಗಿ ಜಾರಿಯಾಗ ದಿರುವುದು ಹಾಗೂ ಬರಗಾಲ ಕಾಮ ಗಾರಿಗಳನ್ನು ಬೇಗನೆ ಆರಂಭಿಸದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಬರಗಾಲ ನಿರ್ಮೂಲನೆಗೆ ಖುಷ್ಕಿ ಪ್ರದೇಶದ ಕೃಷಿ ನೀತಿ ಜಾರಿ, ಬೆಳೆ ಸಾಲ ಮನ್ನಾ, ಬರಗಾಲ ಪ್ರದೇಶಕ್ಕೆ ಹೆಚ್ಚಿನ ಸಾಲ ಸೌಲಭ್ಯ, ಉದ್ಯೋಗ ಸೃಷ್ಟಿ, ಜನ-ಜಾನುವಾರಗಳ ರಕ್ಷಣೆಗೆ  ಪರಿಹಾರ ನಿಧಿ ಸಮಿತಿ ಸ್ಥಾಪನೆ ಸೇರಿದಂತೆ ಮೊದಲಾದ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುವಂತೆ  ಆಗ್ರಹಿಸಿ ಉಪ-ತಹಶೀಲ್ದಾರ ಎಸ್.ಕೆ.ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮಾರುತಿ ಕರಿಶೆಟ್ಟಿ, ರಮೇಶ ಕೌಜಲಗಿ, ಸೂರ್ಯ ಕಾಂತ ಮುಚ್ಚಂಡಿಹಿರೇಮಠ, ಮಹಾ ಂತೇಶ  ಕಂಬಾರ, ಕಲ್ಲಪ್ಪ ಕುರಿ ಮತ್ತು ಬಾಲಪ್ಪ ಕುರಿ ಪಾಲ್ಗೊಂಡಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.