ADVERTISEMENT

ವಿದ್ಯಾರ್ಥಿಗಳಿಂದ ರಾಮಾಯಣ ಅಭಿನಯ

ಸತತ 17 ಗಂಟೆಗಳ ಕಾಲ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 10:07 IST
Last Updated 1 ಮಾರ್ಚ್ 2014, 10:07 IST

ರಾಯಬಾಗ: ‘ನಾವು ಎಂದೆಂದಿಗೂ ಸಮಾಜದಲ್ಲಿ ಶಿಸ್ತು ಶಾಂತಿಯ ಕಡೆಗೆ ಗಮನ ಹರಿಸಬೇಕು.ಕೊಟ್ಟ ವಚನ ಪಾಲಿಸಲು ಪ್ರಾಣ ಹೋದರೂ ಬಿಡ ಬಾರದು. ಭ್ರಷ್ಟರಾಗದೆ ಎಂತಹ ಕಷ್ಟ ಕಾಲದಲ್ಲಿಯೂ ಸಹ ಮೋಸ ವಂಚನೆ ಮಾಡದೆ ಸತ್ಯವನ್ನೆ ಪಾಲಿಸಬೇಕು’ ಎಂದು ಬಂಡಿಗಣಿ ಮಠದ ಶ್ರೀಬಸವ ಗೋಪಾಲ ನೀಲಮಾಣಿಕ ಮಠದ ಚಕ್ರವರ್ತಿ ದಾನೇಶ್ವರರು ಹೇಳಿದರು.

ತಾಲ್ಲೂಕಿನ ಪರಮಾನಂದವಾಡಿ ಯಲ್ಲಿನ ಬಂಡಿಗಣಿ ಮಠದ  ಶ್ರೀಬಸವ ಗೋಪಾಲ ನೀಲಮಾಣಿಕ ಮಠದ 19ನೆಯ ವಾರ್ಷಿಕೊತ್ಸವದ ಅಂಗ ವಾಗಿ ಶ್ರೀ ಬಸವ ಗೋಪಾಲ ಮಠದ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ಸತತವಾಗಿ 17 ಗಂಟೆಗಳ ಕಾಲ ನಡೆದ ರಾಮಾಯಣ ನಾಟಕದ  ಮುಕ್ತಾಯ ಸಮಾರಂಭದಲ್ಲಿ ಅವರು ಆಶಿರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಲೊಂಡಿದ್ದ ಕುಡಚಿ ಶಾಸಕ ಪಿ.ರಾಜೀವ ಮಾತನಾಡಿ, ವಿದ್ಯಾರ್ಥಿಗಳ ಈ ಸಾಧನೆ ಅದ್ಭುತವಾದದ್ದು. ಸತತ 17 ಗಂಟೆಗಳ ಕಾಲ ನಟಿಸಿದ ರಾಮಾಯಣ ನಾಟಕ ನಿಜಕ್ಕೂ ಪ್ರೇಕ್ಷಕರಿಗೆ ಮೆಚ್ಚುಗೆಯಾಗಿದೆ. ಪಾಶ್ಚಾತ ಸಂಸ್ಕೃತಿಯಲ್ಲಿ ನಮ್ಮ ದೇಶಿ ಕಲೆಗಳು ನಶಿಸಿ ಹೋಗುತ್ತಿರುವ ಇಂದಿನ ದಿನಗಳಲ್ಲಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಇಂತಹ ಕಲೆಗಳಿಗೆ ಹೆಚ್ಚಿನ ಮಹತ್ವ ನೀಡುವಂತೆ ಹೇಳಿದರು.

ಉತ್ತಮ ರೀತಿಯಲ್ಲಿ ನಾಟಕ ಅಭಿನಯಿಸಿದ  ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಸುಮಂಗಲಾ ವಿ.ಪಾಟೀಲ, ಸಂಜಯ ಬಾಂಡಗೆ, ಎಸ್‌.ಎಸ್‌. ಮನ್ನಾಪೂರ, ವೈ. ಆರ್‌.ಯಲ್ಲಟ್ಟಿ, ಮುರಿಗೆಪ್ಪ ಮಾಲಗಾರ, ಎಂ.ಎಚ್‌.ಹೆಳವಿ, ಶಿವಯ್ಯ ಅಪ್ಪನವರು, ಸೋಮಯ್ಯ ಅಪ್ಪನವರು, ಸಿದ್ದಾಪೂರ, ಖೇಮಲಾಪುರ, ಸುಟ್ಟಟ್ಟಿ, ಹಾರೂಗೇರಿ, ಇಟನಾಳ, ಕುಡಚಿ, ಚಿಂಚಲಿ, ಯಲ್ಪಾರಟ್ಟಿ , ಅಲಖನೂರ  ಗ್ರಾಮಸ್ಥರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.