ADVERTISEMENT

ವೈದ್ಯರ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 7:22 IST
Last Updated 3 ಮಾರ್ಚ್ 2014, 7:22 IST
ಸವದತ್ತಿ ಸರ್ವಾಜನಿಕ ಆಸ್ಪತ್ರೆಯ ಎದುರು ಬಾಲಕನ ಶವ ಇಟ್ಟು ಪ್ರತಿಭಟನೆ ನಡೆಸಿದರು.
ಸವದತ್ತಿ ಸರ್ವಾಜನಿಕ ಆಸ್ಪತ್ರೆಯ ಎದುರು ಬಾಲಕನ ಶವ ಇಟ್ಟು ಪ್ರತಿಭಟನೆ ನಡೆಸಿದರು.   

ಸವದತ್ತಿ: ಹಾವು ಕಚ್ಚಿದ್ದ ಬಾಲಕನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮೃತನ ಸಂಬಂಧಿ ಗಳು ಸವದತ್ತಿ ತಾಲ್ಲೂಕು ಆಸ್ಪತ್ರೆಯ ಮುಂದೆ ಶವವನ್ನಿಟ್ಟು ಪ್ರತಿಭಟನೆ ನಡೆಸಿದ ಘಟನೆ ಶನಿವಾರ ಸಂಜೆ ನಡೆಯಿತು.

ಯಡ್ರಾಂವಿ ಗ್ರಾಮದ ಶಿವಾನಂದ ಯಲ್ಲಪ್ಪ ಗೋಕನ್ನವರ (12)  ಶನಿ ವಾರ ಮುಂಜಾನೆ ಹಾವು ಕಚ್ಚಿದ್ದರಿಂದ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಆತನನ್ನು ಕರೆದುಕೊಂಡು ಬಂದೆವು. ಆದರೆ ಕರ್ತವ್ಯದ ಮೇಲಿದ್ದ ವೈದ್ಯ ತಡವಾಗಿ ಬಂದಿದ್ದಲ್ಲದೇ, ಇಲ್ಲಿ ಚಿಕಿತ್ಸೆ ನೀಡಲಾಗು ವುದಿಲ್ಲ. ಹುಬ್ಬಳ್ಳಿಗೆ ಕರೆದು ಕೊಂಡು ಹೋಗಿ ಎಂದು ನಿರ್ಲಕ್ಷ್ಯ ಮಾಡಿದರು.

ಬಾಲಕನನ್ನು ಹುಬ್ಬಳ್ಳಿಗೆ ಕರೆದು ಕೊಂಡು ಹೋಗುವಾಗ ಮಾರ್ಗ ಮಧ್ಯೆ ಅಸುನೀಗಿದ ಎಂದು ಬಾಲಕನ ಕುಟುಂಬದವರು ಆರೋಪಿಸಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಆನಂದ ಮಾಮನಿ, ವೈದ್ಯರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿ ಪ್ರತಿಭಟನಾಕಾರರನ್ನು ಸಮಾ ಧಾನಗೊಳಿಸಿದರು. ತಹಶೀಲ್ದಾರ್‌ ಶಿವಲಿಂಗಪ್ಪ ಪಟ್ಟದಕಲ್ಲ, ಪಿ.ಎಸ್.ಐ ಅರುಣಕುಮಾರ ಇದ್ದರು.

ಪ್ರತಿಭಟನೆ ಎಚ್ಚರಿಕೆ : ಕೆಲವು ವೈದ್ಯರು ಬಹು ವರ್ಷದಿಂದ ಇಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದು, ರೋಗಿಗಳನ್ನು ಸುಲಿಗೆ ಮಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಏಜೆಂಟರ್‌ ಹಾವಳಿ ಹೆಚ್ಚಾಗಿದೆ. ಈ ಕುರಿತು ಸಂಬಂಧ ಪಟ್ಟವರು ಕ್ರಮ ಕೈಗೊಳ್ಳದಿದ್ದರೆ ಶೀಘ್ರದಲ್ಲಿ ಪ್ರತಿಭಟನೆ ನಡೆಸುವುದಾಗಿ ಕರವೇ ಅಧ್ಯಕ್ಷ ಮಹಾದೇವ ಕಿಚಡಿ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.