ADVERTISEMENT

ಶೈಕ್ಷಣಿಕ ಪ್ರಗತಿಗೆ ಕ್ರಮ: ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 9:37 IST
Last Updated 23 ಡಿಸೆಂಬರ್ 2013, 9:37 IST

ಗೋಕಾಕ: ಗೋಕಾಕ ವಿಧಾನಸಭಾ -ಮತಕ್ಷೇತ್ರದಲ್ಲಿ ಶೈಕ್ಷಣಿಕ ಪ್ರಗತಿಗಾಗಿ ಕ್ರಮ ತೆಗೆದುಕೊಳ್ಳಲಾಗಿದ್ದು ಶಾಲೆ ಗಳಿಗೆ ಎಲ್ಲ ಮೂಲಸೌಕರ್ಯಗಳನ್ನು ಒದಗಿಸುವುದಾಗಿ ಶಾಸಕ ರಮೇಶ ಜಾರಕಿಹೊಳಿ  ಭರವಸೆ ನೀಡಿದರು.

ಶನಿವಾರ ನಗರದ ಸರ್ಕಾರಿ ಪ.ಪೂ. ಕಾಲೇಜಿನ ಆವರಣದಲ್ಲಿ ನೂತನ ಶಾಲಾ ಕೊಠಡಿಗಳ ನಿರ್ಮಾಣ ಕಾಮ ಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಆರ್. ಎಮ್.ಎಸ್.ಎ. ಯೋಜನೆಯಡಿ ಶಾಲಾ ಕೊಠಡಿಗಳ ನಿರ್ಮಾಣ ಮತ್ತು ಮೂಲ ಸೌಕರ್ಯಕ್ಕಾಗಿ ₨ 5ಕೋಟಿ 20ಸಾವಿರ  ಮಂಜೂರಾಗಿದ್ದು, ಆ ಪೈಕಿ ಸರ್ಕಾರಿ ಪ.ಪೂ. ಕಾಲೇಜಿಗೆ 18, ಜಿ.ಎನ್.ಎಸ್. ಸ್ಕೂಲ್‌ಗೆ  2, ಬೆಣಚಿನ ಮರಡಿ ಪ್ರೌಢಶಾಲೆಯಲ್ಲಿ 12, ಮಾಲದಿನ್ನಿ ಗ್ರಾಮದಲ್ಲಿ 7, ಮಕ್ಕಳಗೇರಿಯಲ್ಲಿ 4, ಮದವಾಲಗ ದಲ್ಲಿ 6,ಉರುಬಿನಹಟ್ಟಿಯಲ್ಲಿ 5, ಹಿರೇ ನಂದಿಯಲ್ಲಿ 3, ಕೊಳವಿಯಲ್ಲಿ 8 ಕೊಠ ಡಿಗಳನ್ನು ನಿರ್ಮಾಣ ಮಾಡಲಾಗುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾ ಧ್ಯಕ್ಷ ತುಕಾರಾಮ್ ಕಾಗಲ್, ಎ.ಪಿ.ಎಮ್.ಸಿ. ನಿರ್ದೇಶಕ ಮಡ್ಡೆಪ್ಪ ತೋಳಿನವರ, ನಗರಸಭೆ ಸದಸ್ಯ ಚಂದ್ರಕಾಂತ ಇಳಿ ಗೇರ, ಕ್ಷೇತ್ರ ಶಿಕ್ಷಣಾ ಧಿಕಾರಿ ಎ.ಎಸ್. ಜೋಡಗೇರಿ, ಕ್ಷೇತ್ರಸಮನ್ವಯ ಅಧಿ ಕಾರಿ ಜಿ.ಆರ್. ಮಾಳಗಿ, ಪ್ರಾಚಾರ್ಯ ಎಸ್.ಎಸ್. ಚಾಳಕರ ಇತರರು  ಉಪ್ಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.