ADVERTISEMENT

‘ಸಂಸ್ಕೃತ ಭಾಷೆ ಕಲಿಕೆಯಿಂದ ಸಂಸ್ಕಾರ ಸಾಧ್ಯ’

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 5:02 IST
Last Updated 13 ಅಕ್ಟೋಬರ್ 2017, 5:02 IST

ಗೋಕಾಕ: ‘ಸಂಸ್ಕೃತ ಭಾಷೆ ಕಲಿಕೆಯಿಂದ ಸಂಸ್ಕಾರ ದೊರೆಯುತ್ತದೆ. ಯೋಗ ಪ್ರಾಣಾಯಾಮದಿಂದ ಮನುಷ್ಯನಿಗೆ ಸದೃಢ ಆರೋಗ್ಯ ಹಾಗೂ ಪರಿಶುದ್ಧವಾದ ಮನಸ್ಸು ಪ್ರಾಪ್ತವಾಗುತ್ತದೆ’ ಎಂದು ಸಿದ್ಧಾರೂಢ ದರ್ಶನ ಪೀಠದ ಕಾರ್ಯಾಧ್ಯಕ್ಷ ಶಾಮಾನಂದ ಪೂಜೇರಿ ಹೇಳಿದರು.

ಪಟ್ಟಣದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರ ಮತ್ತು ಚಿಕ್ಕನಂದಿಯ ಸಿದ್ಧಾರೂಢ ದರ್ಶನ ಪೀಠದ ಸಿದ್ಧಾರೂಢ ಸಂಸ್ಕೃತ ಪಾಠಶಾಲೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಯೋಗಾಸನ ಶಿಬಿರ ಹಾಗೂ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯೋಗಗುರು ಸದಾಶಿವ ಗುರುಜಿ ಹಾಗೂ ಸಂಸ್ಕೃತ ವಿದುಷಿ ಶಶಿಕಲಾ ತಾಯಿ ಅಧ್ಯಕ್ಷತೆ ವಹಿಸಿದ್ದರು. ಗುರುಕುಲದ ಆಡಳಿತಾಧಿಕಾರಿ ಲಿಂಗರಾಜ ಪಾಟೀಲ, ಸಿದ್ಧಾರೂಡ ದರ್ಶನಪೀಠದ ಕಾರ್ಯದರ್ಶಿ ನಿಂಗಪ್ಪ ಬಟ್ಟಿ, ಸಂಸ್ಕೃತ ಶಿಕ್ಷಕರಾದ ವಿದ್ವಾನ್‌ ಜ್ಯೋತಿಭಾ, ಶಿವಾನಂದ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.