ADVERTISEMENT

‘ಸಮಾಜಸೇವೆ ಮಾಡಿದರೆ ರಾಜಕೀಯ ಸುಲಭ’

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2017, 6:14 IST
Last Updated 3 ಸೆಪ್ಟೆಂಬರ್ 2017, 6:14 IST

ಬೈಲಹೊಂಗಲ: ‘ರೈತರ ಜಮೀನುಗಳಿಗೆ ನೀರಾವರಿ, ಗುಣಮಟ್ಟದ ರಸ್ತೆ, ಬೆಳೆಗೆ ಯೋಗ್ಯ ಬೆಲೆ ಹಾಗೂ ರೈತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸಹಕಾರಿ ರಂಗದ ಅಭಿವೃದ್ಧಿ ಜೊತೆಗೆ ಅನ್ಯಾಯದ ವಿರುದ್ಧ ಚಳವಳಿ ಈ ಐದು ಸೂತ್ರಗಳನ್ನು ನಿತ್ಯ ಜೀವನದಲ್ಲಿ ಪಾಲಿಸಿದರೆ ಸಮಾಜದಲ್ಲಿ ಯೋಗ್ಯ ಸ್ಥಾಮಾನಗಳು ತಾನಾಗಿಯೇ ಹುಡುಕಿಕೊಂಡು ಬರುತ್ತವೆ’ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ತಾಲ್ಲೂಕಿನ ನೇಸರಗಿ ಗ್ರಾಮದ ಎಪಿಎಂಸಿ ಆವರಣದಲ್ಲಿ ಶನಿವಾರ ಮಹಾಂತೇಶ ದೊಡಗೌಡರ ಜನ್ಮದಿನ ಅಂಗವಾಗಿ ನಡೆದ ಬೃಹತ್ ಸಾಧಕರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ‘ರಾಜ್ಯ ಸಹಕಾರ ಮಾರಾಟ ಮಂಡಳಿಯಲ್ಲಿ ಉತ್ತಮ ಸೇವೆಯಿಂದ ದೊಡಗೌಡರ ನೂರಾರು ಕೋಟಿ ರೂಪಾಯಿ ಲಾಭ ಮಾಡಿದ್ದು ಖುಷಿ ನೀಡಿದೆ.

ದೊಡಗೌಡರ ಕಾರ್ಯಕ್ರಮಕ್ಕೆ ಇಪ್ಪತ್ತು ಸಾವಿರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರ ಬಗ್ಗೆ ಪಕ್ಷದ ಮುಖಂಡರುಗಳಿಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮಹಾಂತೇಶರಂತ ಯುವಕರಿಗೆ ಜನತೆ ರಾಜಕೀಯ ಶಕ್ತಿ ನೀಡಿದರೆ ಒಳ್ಳೆಯ ದಾಗುತ್ತದೆ’ ಎಂದರು.

ADVERTISEMENT

ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ‘ಅಧಿಕಾರ ಶಾಶ್ವತವಲ್ಲ. ಇದ್ದಾಗ ಸಮಾಜ ಮುಖಿ ಕೆಲಸ ಮಾಡಬೇಕು. ದೊಡಗೌಡ ರಿಗೆ ಉಜ್ವಲ ಭವಿಷ್ಯವಿದೆ’ ಎಂದರು. ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾತ ನಾಡಿ, ‘ಮುಂದಿನ ಹುಟ್ಟುಹಬ್ಬ ದೊಳಗೆ ದೊಡಗೌಡರು ಕಿತ್ತೂರಿನ ಶಾಸಕರಾಗಲಿ’ ಎಂದು ಶುಭ ಹಾರೈಸಿದರು.

ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಅಧ್ಯಕ್ಷ ಹಾಲಪ್ಪ ಆಚಾರ್ಯ ಮಾತನಾಡಿ, ‘ದೊಡಗೌಡರ ಜತೆಗೂಡಿ ರಾಜ್ಯದ ರೈತರಿಗೆ ಗೊಬ್ಬರ ಕಡಿಮೆ ಆಗ ದಂತೆ ನೋಡಿಕೊಂಡಿದ್ದೇನೆ. ಇದ ರಲ್ಲಿ ದೊಡಗೌಡರ ಪಾತ್ರ ಹಿರಿದು ಎಂದು ಪ್ರಶಂಸಿಸಿದರು.

ಮಹಾಂತೇಶ ದೊಡಗೌಡರ ಮಾತ ನಾಡಿ, ಸೇವೆ ಮಾಡಲು ಅವಕಾಶ ನೀಡಿದ ಎಲ್ಲ ಸ್ಥಳಗಳಲ್ಲಿ ಒಳ್ಳೆಯ ಕೆಲಸ ನೀಡಿದ್ದೇನೆ. ಕ್ಷೇತ್ರದ ಜನತೆ ಹರಸಿದರೆ ಚನ್ನಮ್ಮನ ಕಿತ್ತೂರಿನ ಅಭಿವೃದ್ಧಿಗೆ ಸಿದ್ಧ ಎಂದು  ತಿಳಿಸಿದರು. ಸೋಮೇಶ್ವರ ಸಕ್ಕರೆ ಕಾರ್ಖಾನೆ ನಿರ್ದೇಶಕ ಪ್ರಕಾಶ ಬಾಳೇಕುಂದರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸತ್ಕರಿಸಲಾಯಿತು.

ಇಂಚಲ ಡಾ.ಶಿವಾನಂದ ಭಾರತಿ ಸ್ವಾಮೀಜಿ, ಮಲ್ಲಾಪೂರ ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ, ಗುಡ್ಡಾಪೂರದ ಗುರುಪಾದೇಶ್ವರ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಶಾಸಕ ಅರವಿಂದ ಪಾಟೀಲ, ಅಣ್ಣಾಸಾಹೇಬ ಜೊಲ್ಲೆ, ಗಂಗಮ್ಮ ದೊಡಗೌಡರ, ಶಂಕರೆಪ್ಪ ಸಿದ್ನಾಳ, ರುದ್ರಪ್ಪ ಮೊಖಾಶಿ, ಡಿ.ಟಿ.ಪಾಟೀಲ, ಶಿವ ಕುಲಕರ್ಣಿ, ಅಪ್ಪುರಾವ್ ರುದ್ರಾಪೂರ, ಪಾರೀಸಪ್ಪ ಭಾವಿ, ಈರಣ್ಣಾ ಕರೀಕಟ್ಟಿ, ಸಿ.ಕೆ. ಮೆಕ್ಕೇದ, ಬಾಳಾಸಾಹೇಬ ದೇಸಾಯಿ, ಬಿ.ಎಫ್.ಕೊಳದೂರ, ಆರ್.ಎ. ಪಾಟೀಲ, ಚನಗೌಡ ಪಾಟೀಲ, ಚಿದಾನಂದ ನೇಸರಗಿ, ಎಸ್.ಎಫ್. ದೊಡಗೌಡರ, ಯಲ್ಲಪ್ಪ ವಕ್ಕುಂದ ಸಹಕಾರಿ ಮುಖಂಡರು ಹಾಗೂ ಮಹಾಂತೇಶ ದೊಡಗೌಡರ ಗೆಳೆಯರ ಬಳಗ, ಅಭಿಮಾನಿ ಬಳಗ ಇದ್ದರು. ಈಶ್ವರ ಉಳ್ಳೇಗಡ್ಡಿ ಸ್ವಾಗತಿಸಿದರು. ಕೆ.ಜಿ.ಗಡಾದ ರೈತಗೀತೆ ಹಾಡಿದರು. ತಾರಕೇಶ್ವರಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.