ADVERTISEMENT

ಸವದತ್ತಿ ಕ್ಷೇತ್ರದ ಪ್ರಗತಿ ಚಿತ್ರಣ ಅಗತ್ಯ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 10:40 IST
Last Updated 23 ಫೆಬ್ರುವರಿ 2011, 10:40 IST

ಸವದತ್ತಿ: ರಾಜ್ಯ ಸರ್ಕಾರ ಸಾವಿರದಿನದ ಆಡಳಿತದಲ್ಲಿ ಸಾಧಿಸಿದ ಮಹತ್ತರ ಸಾಧನೆಯನ್ನು ಸಾರಿ ಹೇಳುವುದರ ಜೊತೆಗೆ ಜತೆಗೆ ಜನಸಾಮಾನ್ಯರ ಅನುಕೂಲಕ್ಕಾಗಿ ಜಾರಿಗೆ ಬಂದ ಮಹತ್ವದ ಯೋಜನೆಗಳ ಮಾಹಿತಿ ಪ್ರಚಾರದ ಪ್ರದರ್ಶದ ಜತೆಗೆ ಸ್ಥಳೀಯ ಪ್ರಗತಿಯ ಚಿತ್ರಣ ಇದ್ದರೆ ಇನ್ನೂ ಉತ್ತಮ ಎಂದು ಶಾಸಕ ಆನಂದ ಮಾಮನಿ ಹೇಳಿದರು.ಇಲ್ಲಿನ ಯಲ್ಲಮ್ಮನಗುಡ್ಡದಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆಯ ಮಂಗಳವಾರ ಆಯೋಜಿಸಿದ್ದ ಸರ್ಕಾರದ ಸಾಧನೆಗಳ ಪ್ರಚಾರದ ಪ್ರದರ್ಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ಷೇತ್ರವನ್ನು ಮಾದರಿ ತಾಣವಾಗಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಪ್ರಾಧಿಕಾರ ರಚಿಸಿ, 50 ಕೋಟಿ ವೆಚ್ಚದಲ್ಲಿ ಪ್ರಗತಿ ಕಾಮಗಾರಿಗಳು ನಡೆಯುತ್ತವೆ ಎಂದರು.ಸರ್ಕಾರದಿಂದ ಒಟ್ಟು ರೂ. 23 ಕೋಟಿ ಕಾಮಗಾರಿ ಮಾಡುವಂತೆ ಆಡಳಿತಾತ್ಮಕ ಮಂಜೂರಾತಿ ಸಿಕ್ಕಿದೆ. 13 ಕೋಟಿ ದೇವಸ್ಥಾನದಲ್ಲಿ, 5 ಕೊಟಿ ಸರ್ಕಾರದಿಂದ ಬರಲಿದೆ. ಅಲ್ಲದೆ ಜಿಲ್ಲಾಧಿಕಾರಿಗಳಿಂದ ಹಣ ಬರಲಿದ್ದು, ಬರುವ ದಿನಗಳಲ್ಲಿ ಉತ್ತಮ ಕೆಲಸಗಳು ನಡೆಯಲಿದೆ. ಇದೀಗ 2.70 ಕೋಟಿ ವೆಚ್ಚದಲ್ಲಿ ಒಂದು ಯಾತ್ರಿನಿವಾಸ ಭಕ್ತರ ಸೇವೆಯಲ್ಲಿದೆ ಎಂದರು. ಪುರಸಭೆ ಅಧ್ಯಕ್ಷ ಶಿವಾನಂದ ಹೂಗಾರ, ದೇವಸ್ಧಾನದ ಅಧಿಕಾರಿ ಲಿಂಬಾವಳಿ, ಹಿರೇಮಠ ಮುಂತಾದವರು ಹಾಜರಿದ್ದರು.

ಸವದತ್ತಿಗೆ ನುಡಿ ತೇರು ಇಂದು ಆಗಮನ: ವಿಶ್ವ ಕನ್ನಡ ಸಮ್ಮೇಳನದ ವಾತಾವರಣ ನಿರ್ಮಾಣದ ಕನ್ನಡ ನುಡಿ ತೇರು ಜಾಗೃತಿ ಜಾಥಾದ ಮೆರವಣಿಗೆ ಇಲ್ಲಿನ ಕರೀಕಟ್ಟಿ ಕ್ರಾಸ್‌ನಿಂದ ಬುಧವಾರ ಸಂಜೆಗೆ 3 ಗಂಟೆಗೆ ಆರಂಭವಾಗಲಿದೆ.ನಂತರ ನಡೆಯುವ ಸಮಾರಂಭದ ಸಾನ್ನಿಧ್ಯವನ್ನು ಶಿವಬಸವ ಸ್ವಾಮೀಜಿ, ಮುರುಘೇಂದ್ರ ಸ್ವಾಮೀಜಿ ವಹಿಸಲಿದ್ದಾರೆ. ಶಾಸಕ ಆನಂದ ಮಾಮನಿ ಉದ್ಘಾಟಿಸಲಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಪುರಸಭೆ ಅಧ್ಯಕ್ಷ ಶಿವಾನಂದ ಹೂಗಾರ, ತಾ.ಪಂ. ಅಧ್ಯಕ್ಷ ಪರ್ವತಗೌಡ ಪಾಟೀಲ, ಉಪಾಧ್ಯಕ್ಷೆ ಮಹಾದೇವಿ ರವದಿ, ಶಾರದಾ ಸಿ.ಕೆ. ಸಾಹಿತಿ ಯ.ರು. ಪಾಟೀಲ, ಎಸ್.ಎಸ್. ಪಾಟೀಲ ಪದಕಿ, ಬಸವರಾಜ ಕಾರದಗಿ, ವೈ.ಬಿ. ಕಡಕೊಳ ಆಗಮಿಸಲಿದ್ದಾರೆ ಎಂದು ಕಸಾಪ ಅಧ್ಯಕ್ಷ ಬಿ.ವಿ.ಬಿ. ನರಗುಂದ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.