ADVERTISEMENT

ಸಿಎಂ ಭೇಟಿಗೆ ಜಿ.ಪಂ. ಉಪಾಧ್ಯಕ್ಷೆಗೇ ನಿರಾಕರಣೆ!

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2012, 8:30 IST
Last Updated 25 ಏಪ್ರಿಲ್ 2012, 8:30 IST

ಬೆಳಗಾವಿ: ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಲಿದ್ದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರನ್ನು ಸ್ವಾಗತಿ ಸಲು ವಿಮಾನ ನಿಲ್ದಾಣದೊಳಗೆ ಹೋಗಲು ನಿರಾಕರಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಜಿಲ್ಲಾ ಪಂಚಾ ಯಿತಿ ಅಧ್ಯಕ್ಷೆ ಹಾಗೂ ಕೆಲ ಸದಸ್ಯರು ಪ್ರತಿಭಟಿಸಿದರು.

ಮುಖ್ಯಮಂತ್ರಿಗಳು ವಿಮಾನ ನಿಲ್ದಾಣಕ್ಕೆ ಇನ್ನೇನು ಆಗಮಿಸಲಿದ್ದಾರೆ ಎನ್ನುವಾಗ ವಿಮಾನ ನಿಲ್ದಾಣದೊಳಗೆ ಹೋಗಲು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸುನಿತಾ ಶಿರಂಗಾವ, ಜಿ.ಪಂ. ಸದಸ್ಯರಾದ ಮಹೇಶ ಭಾತೆ, ರಮೇಶ ಸರನಾಯ್ಕ ಪರ್ವಿನಾಯ್ಕರ ಅವರು ಆಗಮಿಸಿದರು. ಆದರೆ, ಗೇಟಿನಲ್ಲಿ ಕಾವಲಿಗಿದ್ದ ಪೊಲೀಸ್ ಅಧಿಕಾರಿ ಇವರನ್ನು ಒಳಗಡೆಗೆ ಬಿಡಲು ನಿರಾಕರಿಸಿದರು.

ಇದರಿಂದ ಸಿಡಿಮಿಡಿಗೊಂಡ ಮಹೇಶ ಭಾತೆ, ರಮೇಶ ಪರ್ವಿ ನಾಯ್ಕರ ಅವರು, “ಜಿಲ್ಲಾ ಪಂಚಾ ಯಿತಿ ಉಪಾಧ್ಯಕ್ಷೆಗೇ ಒಳಗೆ ಬಿಡುವು ದಿಲ್ಲ ಎಂದರೆ ಹೇಗೆ? ಜನಪ್ರತಿನಿಧಿ ಗಳಾದ ನಮಗೆ ಬೆಲೆ ಇಲ್ಲವೇ?” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿ.ಪಂ. ಸದಸ್ಯರ ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಬಳಿಕ ಹಿರಿಯ ಅಧಿಕಾರಿಗಳ ಒಪ್ಪಿಗೆ ಮೇರೆಗೆ ಇವರನ್ನು ವಿಮಾನ ನಿಲ್ದಾಣದೊಳಗೆ ಬಿಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.