ADVERTISEMENT

ಹಿಡಕಲ್ ಜಲಾಶಯ: 5 ಟಿಎಂಸಿ ನೀರು ಕುಡಿಯಲು ಮೀಸಲು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 5:25 IST
Last Updated 2 ಅಕ್ಟೋಬರ್ 2012, 5:25 IST

ಯಮಕನಮರಡಿ: `ಮಳೆಯ ಅಭಾವ ಹೆಚ್ಚಾಗಿದ್ದು ಹಿಡಕಲ್ ಜಲಾಶಯದಲ್ಲಿನ ಸಂಗ್ರಹವಾದ ನೀರಲ್ಲಿ, 5 ಟಿಎಂಸಿ ನೀರನ್ನು ಕುಡಿಯುವಗೊಸ್ಕರ ಜಿಲ್ಲೆಗೆ ಮೀಸಲು ಇಡಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಸಚಿವ ಗೋವಿಂದ ಕಾರಜೋಳ ಹೇಳಿದರು.

ಸಮೀಪದ ಹೂನ್ನೂರ ಪ್ರವಾಸ ಮಂದಿರದಲ್ಲಿ ಸೋಮವಾರ ನಡೆದ ನೀರಾವರಿ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ  ಅವರು ಮಾತನಾಡಿದರು.

`ಈಗಾಗಲೇ 43 ಟಿಎಂಸಿ ನೀರು ಸಂಗ್ರಹವಾಗಿದೆ. ಒಂದು ವೇಳೆ ಆಗದೇ ಇದ್ದರೆ ಅಕ್ಕೋಬರ್ 15 ರಿಂದ ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುಗಳಿಗೆ ಹಂತ-ಹಂತವಾಗಿ ನೀರನ್ನು 70 ದಿನ ಬಿಡಲಾಗುವುದು ಎಂದು ತಿಳಿಸಿದರು. 

ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಮಾತನಾಡಿ, ನೀರು ಬಿಡುವ ವೇಳೆಯಲ್ಲಿ ಅಧಿಕಾರಿಗಳು ಹಾಗೂ ಪೋಲೀಸ್ ಇಲಾಖೆಯ ಸಹಾಯ ಪಡೆದು ಕಾಲುವೆಯ ನೀರನ್ನು ಕೊನೆ ಭಾಗ ರೈತರಿಗೆ ಹೊಲಕ್ಕೆ ನೀರು ಹರಿಸಿಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆಯ ಸೂಚನೆ ನೀಡಿದರು.

ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ,   ಕೆಲವು ಕಡೆಗೆ ಕಾಲುವೆಗಳು ಒಡೆದು ಹೋಗಿದ್ದು ದುರಸ್ತಿ ಕಾರ್ಯವನ್ನು ಬೇಗನೆ ಆಗಬೇಕು ಎಂದು ಆಗ್ರಹಿಸಿದರು.

ಶಾಸಕರಾದ ಸಿದ್ದು ಸವದಿ, ಶ್ರೀಕಾಂತ ಕುಲಕರ್ಣಿ, ಧುರ್ಯೋದನ ಐಹೊಳೆ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.