ADVERTISEMENT

ಹಿಡಕಲ್ ಡ್ಯಾಂ: ಕುಡಿವ ನೀರಿನ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 4:58 IST
Last Updated 27 ಮಾರ್ಚ್ 2018, 4:58 IST
ಹಿಡಕಲ್ ಡ್ಯಾಂ ನಿವಾಸಿಯೊಬ್ಬರು ದ್ವಿಚಕ್ರ ವಾಹನ ಮೇಲೆ ನದಿಯಿಂದ ನೀರು ತರುತ್ತಿರುವುದು
ಹಿಡಕಲ್ ಡ್ಯಾಂ ನಿವಾಸಿಯೊಬ್ಬರು ದ್ವಿಚಕ್ರ ವಾಹನ ಮೇಲೆ ನದಿಯಿಂದ ನೀರು ತರುತ್ತಿರುವುದು   

ಯಮಕನಮರಡಿ: ಸಮೀಪದ ಹಿಡಕಲ್ ಡ್ಯಾಂನ ನಿವಾಸಿಗಳಿಗೆ ಕಳೆದ ಎರಡು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಇದ್ದರೂ ನೀರಾವರಿ ಇಲಾಖೆ ಗಮನ ಹರಿಸುತ್ತಿಲ್ಲ ಎಂದು ಹಿಡಕಲ್ ಡ್ಯಾಂನ ನಿವಾಸಿಗಳು ಆರೋಪಿಸಿದ್ದಾರೆ.

ಇಲಾಖೆ ಅಧಿಕಾರಿಗಳು ಯಾವುದೇ ಪರ್ಯಾಯ ವ್ಯವಸ್ಥೆ ಮಾಡದ ಕಾರಣ ಇಲ್ಲಿಯ ನಿವಾಸಿಗಳು ಪರಿತಪಿಸಬೇಕಾಗಿದೆ. ಹೊಟೇಲ್ ಮಾಲೀಕರು, ಸ್ಥಳೀಯರು ದ್ವಿಚಕ್ರ ವಾಹನದ ಮೇಲೆ ನದಿಗೆ ಹೋಗಿ ನೀರು ತರುವ ಸನ್ನಿವೇಶ ಬಂದಿದೆ.  ಅಧಿಕಾರಿಗಳನ್ನು ಕೇಳಿದರೆ ಪಂಪ್ ಸೆಟ್‌ ಹಾಳಾಗಿದೆ, ದುರಸ್ತಿ ಮಾಡಬೇಕು ಎಂದು ಹೇಳುತ್ತಿದ್ದಾರೆ. ನಿವಾಸಿಗಳ ಸಹನೆ ಕಟ್ಟೆ ಒಡೆಯುವ ಮುನ್ನ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT