ADVERTISEMENT

‘ಬಯಲು ಶೌಚಾಲಯ ಮುಕ್ತ ತಾಲ್ಲೂಕು ಆಗಲಿ’

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 8:29 IST
Last Updated 4 ಡಿಸೆಂಬರ್ 2013, 8:29 IST

ಘಟಪ್ರಭಾ (ಗೋಕಾಕ): ‘ನಿಸ್ವಾರ್ಥ ಸೇವೆ ಮೂಲಕ ರೈತರ ಹಾಗೂ ಗ್ರಾಮೀಣ ಮಹಿಳೆಯರ ಅಭಿವೃದ್ಧಿ­ಗೋಸ್ಕರ ಧರ್ಮಸ್ಥಳದ ಧರ್ಮಾ­ಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಇಚ್ಛೆಯಂತೆ ನಿಸ್ವಾರ್ಥದಿಂದ ಜಿಲ್ಲೆಯಲ್ಲಿ ಶ್ರಮಿಸುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಶ್ಲಾಘನೀಯ’ ಎಂದು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಇಲ್ಲಿಯ ಎಸ್‌.ಡಿ.ಟಿ. ಮಹಾ ವಿದ್ಯಾ ಲಯದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮ ಸ್ಥಳ ಗ್ರಾಮಾಭಿವೃದ್ದಿ ಯೋಜನೆ(ರಿ) ಹಾಗೂ ಕೃಷಿ ಉತ್ಸವ ವ್ಯವಸ್ಥಾಪನಾ ಸಮಿತಿ ಗೋಕಾಕ, ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾರಶ್ರಯದಲ್ಲಿ ಆಯೋಜಿಸಲಾಗಿದ್ದ ಗೋಕಾಕ ತಾಲ್ಲೂಕು ಮಟ್ಟದ ಕೃಷಿ ಉತ್ಸವ–2013ನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿಸ್ವಾರ್ಥ ಸೇವೆ ಗೈಯುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ­ಯ ಸಂಘಟನೆಗೆ ಮತ್ತು ರಾಜಕಾರಣಿಗಳಾದ ನಾವು ಒಂದು ಆಸೆ, ಕನಸನ್ನು ಹೊತ್ತುಕೊಂಡು ಸಂಘ­ಟನೆ ಮಾಡುತ್ತಿರುವುದಕ್ಕೆ  ವ್ಯತ್ಯಾಸ ಅಷ್ಟೇ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ, ಕಳೆದ ಮೂರು ದಶಕಗಳಿಂದ ಕರ್ನಾಟಕದಲ್ಲಿ 28 ಸಾವಿರ ಪ್ರಗತಿ ಬಂಧು ಸ್ವಸಹಾಯ ಸಂಘಗಳನ್ನು ನಿರ್ಮಾಣ ಮಾಡು­ವುದರ ಜೊತೆಗೆ ಕೃಷಿ, ಸ್ವ–ಉದ್ಯೋಗ, ಶಿಕ್ಷಣ, ಶೌಚಾಲಯ, ವಿದ್ಯಾರ್ಥಿ ವೇತನ, ಮದ್ಯ ವರ್ಜನ ಶಿಬಿರ ಆಯೋಜನೆ ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣ­ವಾಗುತ್ತದೆ. ಸರ್ಕಾರ ಮತ್ತು ಸಂಸ್ಥೆಗಳ ಸದುಪಯೋಗ ಪಡೆದುಕೊಂಡು ಪ್ರತಿ­ಯೊಂದು ಕುಟುಂಬಕ್ಕೆ ಶೌಚಾಲಯ ನಿರ್ಮಿಸಿ ಗೋಕಾಕ ತಾಲ್ಲೂಕನ್ನು ಬಯಲು ಶೌಚಾಲಯ ಮುಕ್ತವಾಗಿ­ಸಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.

ಜಿ.ಪಂ  ಮಾಜಿ ಉಪಾ­ಧ್ಯಕ್ಷ ಟಿ.ಆರ್. ಕಾಗಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕಸ್ತೂರಿ ಕೋಣಿ,  ಧಾರವಾಡ ಶ್ರೀ.ಕ್ಷೇ.ಧ,ಗ್ರಾ.­ಯೋಜ­ನೆಯ ಪ್ರಾದೇಶಿಕ ನಿರ್ದೇಶಕ ಜಯ­ಶಂಕರ ಶರ್ಮಾ, ಜಿಲ್ಲಾ ಪಂಚಾಯಿತಿ ಸದಸ್ಯೆಯರಾದ ಕುಮಾ ಚೌಕಶಿ ಮತ್ತು ವಂದನಾ ಕತ್ತಿ, ತಾ.ಪಂ. ಸದಸ್ಯರಾದ ಸುಲೋಚನಾ ಹಾಗೂ  ನಿಂಗಪ್ಪ ಮಾಳ್ಯಾಗೋಳ, ಗ್ರಾ.ಪಂ. ಅಧ್ಯಕ್ಷೆ ಕಮಲಾ ಪವಾರ, ಮಹಾದೇವಿ ಮೆಕ್ಕ­ಳಕಿ, ವಿಜಯಾ ಬಾಗೇವಾಡಿ,  ಜಿ.ಪಂ. ­ಸದಸ್ಯ ದುಂಡಪ್ಪ ಚೌಕಶಿ, ಕೃಷಿ ಉತ್ಸವ ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ಕಲ್ಲಪ್ಪ ಚೌಕಶಿ, ಬರಮಣ್ಣ ಉಪ್ಪಾರ, ಮುತ್ತೇಪ್ಪ ಜಲ್ಲಿ, ಬಸವರಾಜ ಮಾಳೇದ­ವರ, ಶಿವಲೀಲಾ ಗಾಣಿಗೇರ, ಎಂ.ಜಿ. ಮುಚಳಂಬಿ, ಶಂಕರ ಕಮತಿ ಸೇರಿದಂತೆ ಇತರರು ಇದ್ದರು.

ತಾಲ್ಲೂಕು ಯೋಜನಾಧಿಕಾರಿ ನಾರಾಯಣ ಪಾಲನ್ ಸ್ವಾಗತಿಸಿದರು. ರಾಧಾ ಕೃಷ್ಣ ಭಟ್ ನಿರೂಪಿಸಿ, ವಂದಿಸಿದರು.

ರೈತ ಅರಭಾವಿಗೆ ಶ್ರದ್ದಾಂಜಲಿ: ಇತ್ತೀಚೆಗೆ ಬೆಳಗಾವಿಯ ಸುವರ್ಣ ಸೌಧದ ಎದುರು ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡಬೇಕೆಂದು ಪ್ರತಿಭಟನೆ ನಡೆ ಸುತ್ತಿದ್ದ ವೇಳೆ ಆತ್ಮಹತ್ಯೆಗೆ ಶರಣಾದ ರೈತ ವಿಠ್ಠಲ ಅರಭಾವಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಭಗವಂತ ಕರುಣಿಸಲಿ ಎಂದು ಆಶಿಸಿ ಎರಡು ನಿಮಿಷಗಳ ಮೌನಾಚರಣೆ ಮಾಡಲಾಯಿತು.

ವಿಶೇಷ ಆಕರ್ಷಣೆಗಳು: ಉತ್ಸವದಲ್ಲಿ ಕೃಷಿ ಚಟುವಟಿಕೆಗಳಿಗೆ ಪೂರಕವಾ ಗಬಹುದಾದ ಸುಮಾರು 30 ವಸ್ತು ಪ್ರದರ್ಶನ ಮಳಿಗೆಗಳು, ರೈತರಿಂದ ರೈತರಿಗಾಗಿ ರೈತ ಸಂತೆ, ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವ ಸಲಹಾ ಕೇಂದ್ರಗಳು, ವಿವಿಧ ಸರ್ಕಾರಿ ಇಲಾಖೆಗಳಿಂದ ಸೌಲಭ್ಯಗಳ ಮಾಹಿತಿ, ದ್ವಿ–ಚಕ್ರ ವಾಹನ ಮತ್ತು ಟ್ರ್ಯಾಕ್ಟರ್ ಮೇಳ, ರೈತರಿಗೆ  ಸಲಹೆಗಳನ್ನು ನೀಡುವ ನಿರಂತರ ವ್ಯವಸ್ಥೆ, ಕಬ್ಬು ಬೆಳೆ, ಗೋವಿನ ಜೋಳ ಬೆಳೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುವ ಹೊಸ ಪರಂಪರೆ ಮೇಳದ ಇತರೆ ವೈಶಿಷ್ಠ್ಯಗಳಾಗಿದ್ದವು.

ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT