ADVERTISEMENT

ಪತ್ನಿ ಕಾಟದಿಂದ ತಪ್ಪಿಸಿಕೊಂಡು ಗೋವಾಗೆ ಹೊರಟಿದ್ದೇನೆ ಎಂದ ಗುತ್ತಿಗೆದಾರ!

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 14:12 IST
Last Updated 1 ಏಪ್ರಿಲ್ 2023, 14:12 IST
   

ಬೆಳಗಾವಿ: ನಗರದ ಹೊರವಲಯದ ಚೆಕ್‌ಪೋಸ್ಟ್‌ನಲ್ಲಿ ಶುಕ್ರವಾರ ತಡರಾತ್ರಿ, ಗುತ್ತಿಗೆದಾರರೊಬ್ಬರು ಕಾರಿನಲ್ಲಿ ಸಾಗಿಸುತ್ತಿದ್ದ ₹ 26 ಲಕ್ಷ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಹಾರಾಷ್ಟ್ರದ ಕೊಲ್ಹಾಪುರದ ಗುತ್ತಿಗೆದಾರ ಕಾರಿನಲ್ಲಿ ಗೋವಾ ಕಡೆಗೆ ಹೊರಟಿದ್ದರು. ತಡರಾತ್ರಿ ಬೆಳಗಾವಿ ನಗರ ಪ್ರವೇಶ ಮಾಡಿದಾಗ, ಪೊಲೀಸರು ತಪಾಸಣೆ ನಡೆಸಿದರು. ಡಿಕ್ಕಿಯಲ್ಲಿ ₹ 26 ಲಕ್ಷ ನಗದು ಇರುವುದು ಪತ್ತೆಯಾಯಿತು. ಹಣಕ್ಕೆ ಸೂಕ್ತ ದಾಖಲೆ ಇಲ್ಲದ ಕಾರಣ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಸುಪರ್ದಿಗೆ ವಹಿಸಲಾಗಿದೆ.

‘ಪತ್ನಿಯೊಂದಿಗೆ ಕಲಹ ಉಂಟಾಗಿದೆ. ನೆಮ್ಮದಿಗಾಗಿ ನಾನು ಗೋವಾಗೆ ಹೊರಟಿದ್ದೇನೆ. ನಾನು ಎಲ್ಲಿಯೇ ಆನ್‌ಲೈನ್‌ ಪೇಮೆಂಟ್‌ ಮಾಡಿದರೂ ನನ್ನ ಪತ್ನಿ ಪತ್ತೆ ಹಚ್ಚಿ ಬರುತ್ತಾಳೆ. ಹಾಗಾಗಿ, ಹಣ ವಿತ್‌ಡ್ರಾ ಮಾಡಿಕೊಂಡು ಹೊರಟಿದ್ದೇನೆ. ಗೂಗಲ್‌ ಮ್ಯಾಪ್‌ ಅನುರಿಸಿ ಗೋವಾಗೆ ಹೊರಟಿದ್ದೆ. ಚುನಾವಣೆಯ ಅರಿವಿದಲ್ಲದೇ ಬೆಳಗಾವಿ ನಗರದ ಪ್ರವೇಶಿಸಿದ್ದೇನೆ ಎಂಬ ಗುತ್ತಿಗೆದಾರ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ADVERTISEMENT

ಈ ಬಗ್ಗೆ ಮಾರ್ಕೆಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.