ADVERTISEMENT

ಪಿಯು ಪರೀಕ್ಷೆ:1,875 ವಿದ್ಯಾರ್ಥಿಗಳು ಗೈರು

​ಪ್ರಜಾವಾಣಿ ವಾರ್ತೆ
Published 12 ಮೇ 2022, 11:15 IST
Last Updated 12 ಮೇ 2022, 11:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ಜಿಲ್ಲೆಯಲ್ಲಿ ಗುರುವಾರ ನಡೆದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ 1,875 ವಿದ್ಯಾರ್ಥಿಗಳು ಗೈರುಹಾಜರಾದರು.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ರಾಜ್ಯಶಾಸ್ತ್ರ ಪರೀಕ್ಷೆಗೆ 9,835 ವಿದ್ಯಾರ್ಥಿಗಳು ನೋಂದಾಯಿಸಿದ್ದರು. ಈ ಪೈಕಿ 9,016 ವಿದ್ಯಾರ್ಥಿಗಳು ಹಾಜರಾದರು. 819 ವಿದ್ಯಾರ್ಥಿಗಳು ಬರಲಿಲ್ಲ.

ಸಂಖ್ಯಾಶಾಸ್ತ್ರ ವಿಷಯಕ್ಕೆ 1,636 ವಿದ್ಯಾರ್ಥಿಗಳ ಪೈಕಿ 1,579 ವಿದ್ಯಾರ್ಥಿಗಳು ಹಾಜರಾದರು. 57 ವಿದ್ಯಾರ್ಥಿಗಳು ಗೈರುಹಾಜರಾದರು.

ADVERTISEMENT

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ರಾಜ್ಯಶಾಸ್ತ್ರ ಪರೀಕ್ಷೆಗೆ ನೋಂದಾಯಿಸಿದ್ದ 13,918 ವಿದ್ಯಾರ್ಥಿಗಳ ಪೈಕಿ 12,922 ವಿದ್ಯಾರ್ಥಿಗಳು ಹಾಜರಾದರು. 996 ವಿದ್ಯಾರ್ಥಿಗಳು ಬರಲಿಲ್ಲ. ಸಂಖ್ಯಾಶಾಸ್ತ್ರಕ್ಕೆ 376 ವಿದ್ಯಾರ್ಥಿಗಳು ನೋಂದಾಯಿಸಿದ್ದರು. ಈ ಪೈಕಿ 373 ಮಂದಿ ಹಾಜರಾದರು. ಮೂವರು ವಿದ್ಯಾರ್ಥಿಗಳು ದೂರ ಉಳಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.