ADVERTISEMENT

ಹೆಲಿಕಾಪ್ಟರ್‌ ಕಾರ್ಯಾಚರಣೆ: 30 ಮಂದಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 14:36 IST
Last Updated 11 ಆಗಸ್ಟ್ 2019, 14:36 IST
ಯಾದಗಿರಿ ಜಿಲ್ಲೆಯ ಉಳಿಪಿಗಡ್ಡಿಯಲ್ಲಿ ಕೃಷ್ಣಾ ನದಿ ನೀರಿನಲ್ಲಿ ಜಲಾವೃತವಾಗಿದ್ದ ಮನೆಯಲ್ಲಿದ್ದ ತಂದೆ ಹಾಗೂ 4 ಮಕ್ಕಳನ್ನು ವಾಯುಪಡೆಯ ಯೋಧರು ಹೆಲಿಕಾಪ್ಟರ್‌ನಲ್ಲಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ
ಯಾದಗಿರಿ ಜಿಲ್ಲೆಯ ಉಳಿಪಿಗಡ್ಡಿಯಲ್ಲಿ ಕೃಷ್ಣಾ ನದಿ ನೀರಿನಲ್ಲಿ ಜಲಾವೃತವಾಗಿದ್ದ ಮನೆಯಲ್ಲಿದ್ದ ತಂದೆ ಹಾಗೂ 4 ಮಕ್ಕಳನ್ನು ವಾಯುಪಡೆಯ ಯೋಧರು ಹೆಲಿಕಾಪ್ಟರ್‌ನಲ್ಲಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ   

ಬೆಳಗಾವಿ: ಪ್ರವಾಹದಿಂದಾಗಿ ನಡುಗಡ್ಡೆಯಲ್ಲಿ ಸಿಲುಕಿದ್ದವರ ರಕ್ಷಣೆಗೆ ಹೆಲಿಕಾಪ್ಟರ್ ಕಾರ್ಯಾಚರಣೆ 4ನೇ ದಿನವಾದ ಭಾನುವಾರವೂ ನಡೆಯಿತು. ಭಾರತೀಯ ವಾಯುಪಡೆಯ ಯೋಧರು 30 ಮಂದಿಯನ್ನು ರಕ್ಷಿಸಿದ್ದಾರೆ.

ಇಲ್ಲಿಂದ ಕಾರ್ಯಾಚರಣೆ ಆರಂಭಿಸಿದ ಅವರು, ಅಥಣಿ ತಾಲ್ಲೂಕಿನ ದರೂರದಲ್ಲಿದ್ದ 26 ಮಂದಿಯನ್ನು ಕರೆತಂದಿದ್ದಾರೆ. ಚಿಕ್ಕೋಡಿ ತಾಲ್ಲೂಕಿನ ಚಂದೂರು, ಚಂದೂರ ಟೇಕ ತೋಟ, ಯಡೂರವಾಡಿ ಭಾಗದಲ್ಲಿ 4,020 ಆಹಾರದ ಪೊಟ್ಟಣಗಳು, 2,380 ಕುಡಿಯುವ ನೀರಿನ ಬಾಟಲಿಗಳನ್ನು ಇಳಿಸಲಾಯಿತು.

ಯಾದಗಿರಿ ಜಿಲ್ಲೆಯ ಉಳಿಪಿಗಡ್ಡಿಯಲ್ಲಿ ಕೃಷ್ಣಾ ನದಿ ನೀರಿನಲ್ಲಿ ಜಲಾವೃತವಾಗಿದ್ದ ಮನೆಯಲ್ಲಿದ್ದ ತಂದೆ ಹಾಗೂ 4 ಮಕ್ಕಳನ್ನು ರಕ್ಷಿಸಲಾಗಿದೆ. ಅವರನ್ನು ಬೆಳಗಾವಿ ಜಿಲ್ಲಾಡಳಿತದ ಸುಪರ್ದಿಗೆ ವಹಿಸಲಾಗಿದೆ ಎಂದು ‍ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.