ADVERTISEMENT

ಬೆಳಗಾವಿ: 92 ಮಂದಿಗೆ ಸೋಂಕು ದೃಢ, ಮೂವರು ಸಾವು

15 ಮಂದಿ ಗುಣಮುಖ; ಆಸ್ಪತ್ರೆಯಿಂದ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 16:49 IST
Last Updated 16 ಜುಲೈ 2020, 16:49 IST

ಬೆಳಗಾವಿ: ಜಿಲ್ಲೆಯಲ್ಲಿ ಹೊಸದಾಗಿ 92 ಮಂದಿಗೆ ಕೋವಿಡ್–19 ಸೋಂಕು ದೃಢಪಟ್ಟಿದೆ. ಇದರೊಂದಿಗೆ ಇಲ್ಲಿನ ಸೋಂಕಿತರ ಸಂಖ್ಯೆ 696ಕ್ಕೆ ಏರಿಕೆಯಾಗಿದೆ.

ಮೂವರು ಸಾವಿಗೀಡಾಗಿದ್ದು, ಮೃತರ ಸಂಖ್ಯೆ 17ಕ್ಕೆ ಏರಿದೆ.

15 ಮಂದಿ ಗುಣಮುಖರಾಗಿದ್ದು, ಅವರನ್ನು ಬಿಮ್ಸ್‌ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ADVERTISEMENT

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರುವಾರ ವರದಿಯಾದ ಪ್ರಕರಣಗಳ ಮಾಹಿತಿ ನೀಡಿದೆ. ಸಾವಿಗೀಡಾದ ಮೂವರಿಗೂ ಜ್ವರ, ಕೆಮ್ಮು ಹಾಗೂ ತೀವ್ರ ಉಸಿರಾಟದ ತೊಂದರೆ ಇತ್ತು ಎಂದು ತಿಳಿಸಲಾಗಿದೆ. ರೋಗಿ ಸಂಖ್ಯೆ 42140 ಆಗಿರುವ 48 ವರ್ಷದ ಅಥಣಿ ತಾಲ್ಲೂಕಿನ ಮಹಿಳೆ ಜುಲೈ 9ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಜುಲೈ 12ರಂದು ಸಾವಿಗೀಡಾಗಿದ್ದಾರೆ. ರೋಗಿ ಸಂಖ್ಯೆ 42334 ಆಗಿರುವ 28 ವರ್ಷದ ರಾಯಬಾಗದ ವ್ಯಕ್ತಿ ಜುಲೈ 11ರಂದು ದಾಖಲಾಗಿದ್ದರು, 13ರಂದು ಮೃತಪಟ್ಟಿದ್ದಾರೆ. ರೋಗಿ ಸಂಖ್ಯೆ 42518 ಆಗಿರುವ 56 ವರ್ಷದ ರಾಮದುರ್ಗದ ವ್ಯಕ್ತಿ ಕೂಡ ಜುಲೈ 13ರಂದು ಸಾವಿಗೀಡಾಗಿದ್ದಾರೆ. ಇಲಾಖೆಯು ಅಧಿಕೃತ ಮಾಹಿತಿಯನ್ನು ಗುರುವಾರ ನೀಡಿದೆ.

ರೋಗಿ ಸಂಖ್ಯೆ-23129, 25549, 31558, 39196, 39219, 25554, 25566, 28984, 28346, 28342, 28341, 28333, 28334, 28335, 42372 ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ.

ಸೋಂಕಿತರಲ್ಲಿ ಬಹುತೇಕರ ‘ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ’ ಎಂದು ತಿಳಿಸಲಾಗಿದೆ. ಕೆಲವರು ಅಂತರ ಜಿಲ್ಲಾ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಬರೋಬ್ಬರಿ 38 ಮಂದಿ ಅಥಣಿ ತಾಲ್ಲೂಕಿನವರು. ಹುಕ್ಕೇರಿಯ ಮೂವರು, ಬೆಳಗಾವಿ ನಗರದ ವಿವಿಧ ಬಡಾವಣೆಯ 20 ಮಂದಿ, ಬೈಲಹೊಂಗಲದ ಮೂವರು, ಚಿಕ್ಕೋಡಿಯ 8, ರಾಯಬಾಗ ಪಟ್ಟಣ ಹಾಗೂ ತಾಲ್ಲೂಕಿನ 9, ರಾಮದುರ್ಗ ತಾಲ್ಲೂಕಿನ 7, ಖಾನಾಪುರ ಹಾಗೂ ಗೋಕಾಕದ ತಲಾ ಒಬ್ಬರು, ಸವದತ್ತಿಯ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 272ಕ್ಕೆ ಏರಿಕೆಯಾಗಿದೆ. ಎಲ್ಲರನ್ನೂ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.