
ಪ್ರಜಾವಾಣಿ ವಾರ್ತೆ
ಅಥಣಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ತೀರ್ಥ ಗ್ರಾಮದಲ್ಲಿ ಗುರುವಾರ ದೀರ್ಘದಂಡ ನಮಸ್ಕಾರ ಹಾಕುವ ವೇಳೆ, ತಲೆಯ ಮೇಲೆ ಕಾರು ಹರಿದು ಯುವತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ತೀರ್ಥ ಗ್ರಾಮದ ಐಶ್ವರ್ಯ ನಾಯಿಕ (23) ಮೃತರು.
ಗ್ರಾಮದೇವ ಜಾತ್ರೆಯ ಅಂಗವಾಗಿ ಹರಕೆ ಹೊತ್ತಿದ್ದ ಅವರು ದೀರ್ಘದಂಡ ನಮಸ್ಕಾರ ಹಾಕುತ್ತಿದ್ದರು. ಕೃಷ್ಣಾ ನದಿಯಿಂದ ದೇವಸ್ಥಾನವರಿಗೆ ನಮಸ್ಕಾರ ಹಾಕುತ್ತ ಬರುವಾಗ ವೇಗವಾಗಿ ಬಂದ ಕಾರು ಯುವತಿಯ ತಲೆ ಮೇಲೆ ಹರಿಯಿತು. ಕಾರ್ ಚಾಲಕ ಪರಾರಿಯಾಗಿದ್ದಾನೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.