ADVERTISEMENT

ಎನ್‌ಸಿಸಿ ವಾಯುದಳ ಘಟಕಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 9:16 IST
Last Updated 4 ಮಾರ್ಚ್ 2020, 9:16 IST
ಬೆಳಗಾವಿಯ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಕಾಲೇಜಿನ ಎನ್‌ಸಿಸಿ ವಾಯುದಳ ಘಟಕಕ್ಕೆ ಎನ್‌ಸಿಸಿ ಉಪ ಮಹಾನಿರ್ದೇಶಕ ಏರ್ ಕಮೋಡೋರ್ ಲಲಿತಕುಮಾರ ಜೈನ್ ಪ್ರಶಸ್ತಿ ಪ್ರದಾನ ಮಾಡಿದರು. ಗ್ರೂಪ್‌ ಕಮಾಂಡರ್ ಕರ್ನಲ್ ಜೆ.ಜೆ. ಅಬ್ರಾಮ್, 8 ಕರ್ನಾಟಕ ವಾಯುದಳ ಕಮಾಂಡಿಂಗ್ ಆಫೀಸರ್‌ ವಿಂಗ್ ಕಮಾಂಡರ್ ಪಿ.ಆರ್. ಪೊನ್ನಪ್ಪ, ಕಾಲೇಜಿನ ಎನ್.ಸಿ.ಸಿ. ಅಧಿಕಾರಿಗಳಾದ ವಿ.ಸಿ. ಕಾಮಗೋಳ ಹಾಗೂ ಪ್ರೊ.ಎಸ್.ಡಿ. ಗೋರಿನಾಯಿಕ ಇದ್ದಾರೆ

ಬೆಳಗಾವಿ: ಇಲ್ಲಿನ ಕೆಎಲ್‌ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಕಾಲೇಜಿನ ಎನ್‌ಸಿಸಿ ವಾಯುದಳ ಘಟಕವು ಕರ್ನಾಟಕ ಮತ್ತು ಗೋವಾ ಎನ್.ಸಿ.ಸಿ. ನಿರ್ದೇಶನಾಲಯದ ಬೆಳಗಾವಿ ಗ್ರೂಪ್‌ನಲ್ಲಿ ಅತ್ಯುತ್ತಮ ಘಟಕ ಪ್ರಶಸ್ತಿಗೆ ಭಾಜನವಾಗಿದೆ.

ವಾಯುದಳದ ಎನ್.ಸಿ.ಸಿ. ಘಟಕದ ಕೆಡೆಟ್‌ಗಳ ಕಠಿಣ ಪರಿಶ್ರಮ ಮತ್ತು ನಿರಂತರ ಸಾಧನೆಯಿಂದ ಪ್ರಶಸ್ತಿ ದೊರೆತಿದೆ. ಈಚೆಗೆ ಬೆಂಗಳೂರಿನ ಕ್ರೈಸ್ಟ್‌ ವಿಶ್ವವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯ ಎನ್‌ಸಿಸಿ ಉಪ ಮಹಾನಿರ್ದೇಶಕ ಏರ್‌ಕಮೋಡೋರ್ ಲಲಿತಕುಮಾರ ಜೈನ್ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ಕೆಡೆಟ್‌ಗಳನ್ನು ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಆಡಳಿತ ಮಂಡಳಿ ನಿರ್ದೇಶಕರು, ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರು ಮತ್ತು ಸದಸ್ಯರು, ಪ್ರಾಚಾರ್ಯ ಡಾ.ವಿ.ಡಿ. ಯಳಮಲಿ, ಪಿಯು ಕಾಲೇಜು ಪ್ರಾಚಾರ್ಯ ಪ್ರೊ.ಎಸ್.ಜಿ. ನಂಜಪ್ಪನವರ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.