ADVERTISEMENT

ಬೆಳಗಾವಿ–ದೆಹಲಿ: ಅಕ್ಟೋಬರ್‌ 1ರಿಂದ ಪ್ರತಿದಿನ ವಿಮಾನ ಸಂಚಾರ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2023, 16:34 IST
Last Updated 12 ಆಗಸ್ಟ್ 2023, 16:34 IST
ಇಂಡಿಗೋ ವಿಮಾನ ( ಸಾಂದರ್ಭಿಕ ಚಿತ್ರ)
ಇಂಡಿಗೋ ವಿಮಾನ ( ಸಾಂದರ್ಭಿಕ ಚಿತ್ರ)   

ಮೂಡಲಗಿ: ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯು ದೆಹಲಿ ಮತ್ತು ಬೆಳಗಾವಿ ನಡುವೆ ಅಕ್ಟೋಬರ್ 1ರಿಂದ ಪ್ರತಿದಿನ ವಿಮಾನಯಾನ ಸಂಚಾರ ಸೇವೆ ಪ್ರಾರಂಭಿಸಲು ಸಮ್ಮತಿಸಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಟ್ವಿಟ್‌ ಮೂಲಕ ತಿಳಿಸಿದ್ದಾರೆ.

ಅ.29ರಿಂದ ಸ್ಟಾರ್‌ ಏರ್‌ಲೈನ್ಸ್ ಸಂಸ್ಥೆಯು ಪುಣೆ–ಬೆಳಗಾವಿ ನಡುವೆ ಪ್ರತಿದಿನ, ಅ.31ರಿಂದ ಪುಣೆ–ಬೆಳಗಾವಿ ನಡುವೆ ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯು ವಾರದಲ್ಲಿ 3 ದಿನ (ಮಂಗಳವಾರ, ಗುರುವಾರ, ಶನಿವಾರ) ವಿಮಾನಯಾನ ಸಂಚಾರ ಸೇವೆ ನೀಡಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT