ಯಮಕನಮರಡಿ: ಹುಕ್ಕೇರಿ ತಾಲ್ಲೂಕಿನ ದಡ್ಡಿ ಗ್ರಾಮದ ಹೊರವಲಯದಲ್ಲಿ ನಡೆದ ಗಟಾರ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಗ್ರಾಮ ಪಂಚಾಯ್ತಿ ಸದಸ್ಯ ನಸೀಮಾ ಬುಡನವರ ಸೇರಿದಂತೆ ಅನೇಕ ಮಹಿಳೆಯರು ಪಿಡಿಒ ಶಶಕಾಂತ ಹೊಸಮನಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ರಸ್ತೆ ಮೇಲೆ ಬಿದ್ದ ಮಳೆ ನೀರು ಗಟಾರದಲ್ಲಿ ಸರಾಗವಾಗಿ ಹೋಗದ ಕಾರಣ ಸುತ್ತಲಿನ ಮನೆಗಳಿಗೆ ನುಗ್ಗಿ, ಹಾನಿಯುಂಟಾಗಿದೆ. ಈ ಕುರಿತು ಅನೇಕ ಬಾರಿ ಜಿಲ್ಲಾ ಪಂಚಾಯ್ತಿ ಎಂಜಿನಿಯರ್‌ಗೆ ತಿಳಿಸಿದರೂ ಕ್ರಮ ವಹಿಸಿಲ್ಲ ಎಂದು ಆರೋಪಿಸಿದರು.
ತ್ವರಿತವಾಗಿ ಸಮಸ್ಯೆ ನಿವಾರಣೆ ಮಾಡುವುದಾಗಿ ಪಿಡಿಒ ಭರವಸೆ ನೀಡಿದರು.
ಮುನ್ನಾ ಬುಡ್ಡಣ್ಣವರ, ನಸುದ್ದೀನ ಮಲಿಕ್, ರಾಜು ಶೇಖ್, ಬುರಾನ್ ಮುಲ್ಲಾ, ನವ್ವುದ್ದೀನ ಮುಲ್ಲಾ, ಮುಬಾರಕ ಕಂದಗಾವೆ, ಅಬ್ಬುಲ ಜಾಶಿ, ರಾಮಚಂದ್ರ ಪಾಮನಾಯಿಕ, ಅಮೀನ ಉದ್ದೀನ ಶೇಖ್ ಸೇರಿದಂತೆ ನಾಗರಿಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.