ADVERTISEMENT

ಬೆಳಗಾವಿ: ಕೊರೊನಾ ಶಂಕಿತರು ದೂರುವ ವಿಡಿಯೊ ವೈರಲ್‌

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 10:59 IST
Last Updated 6 ಏಪ್ರಿಲ್ 2020, 10:59 IST
   

ಬೆಳಗಾವಿ: ಕೊರೊನಾ ಶಂಕಿತ ವ್ಯಕ್ತಿಯೊಬ್ಬ ತನಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲವೆಂದು ಆರೋಪಿಸಿ ಆಸ್ಪತ್ರೆಯೊಂದರಲ್ಲಿ ಕೂಗಾಡುತ್ತ ಓಡಾಡಿದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

‘ಆಸ್ಪತ್ರೆಯಲ್ಲಿ ಸೋಂಕಿತರನ್ನು ಪ್ರತ್ಯೇಕವಾಗಿ ಇಟ್ಟಿಲ್ಲ. ಸೋಂಕಿತರನ್ನು ಇತರ ರೋಗಿಗಳ ಜೊತೆ ಇಟ್ಟಿದ್ದಾರೆ. ನಮಗೆ ಯಾವುದೇ ರೀತಿಯ ಪರೀಕ್ಷೆ ಮಾಡಿಲ್ಲ. ಯಾವುದೇ ರೀತಿಯ ಚಿಕಿತ್ಸೆ ನೀಡುತ್ತಿಲ್ಲ’ ಎನ್ನುತ್ತ ವ್ಯಕ್ತಿಯೊಬ್ಬ ಓಡಿ ಹೋಗುವ ದೃಶ್ಯಗಳು ಇದರಲ್ಲಿವೆ.

ಇನ್ನೊಂದು ವಿಡಿಯೊದಲ್ಲಿ ವ್ಯಕ್ತಿಯೊಬ್ಬ, ವೃದ್ಧರೊಬ್ಬರನ್ನು ಮಾತನಾಡಿಸುವ ದೃಶ್ಯಗಳಿವೆ. ‘ಆಸ್ಪತ್ರೆಯಲ್ಲಿ ಅವ್ಯವಸ್ಥೆ ಇದೆ. ನಾವೆಲ್ಲ ಚೆನ್ನಾಗಿದ್ದೇವೆ. ಸುಮ್ಮನೇ ನಮ್ಮನ್ನು ಇಲ್ಲಿಗೆ ತಂದು ಹಾಕಿದ್ದಾರೆ’ ಎಂದು ಹೇಳಿಕೊಳ್ಳುತ್ತಾರೆ.

ADVERTISEMENT

ಆದರೆ, ಇವೆರಡೂ ದೃಶ್ಯಾವಳಿಗಳು ಯಾವ ಆಸ್ಪತ್ರೆಯದ್ದು ಎನ್ನುವುದು ತಿಳಿದು ಬಂದಿಲ್ಲ.

ಕ್ರಮಕೈಗೊಳ್ಳಲು ಎಸ್ಪಿಗೆ ಸೂಚನೆ: ‘ಸೋಂಕು ಪೀಡಿತರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿರುವುದು ಗಮನಕ್ಕೆ ಬಂದಿದೆ. ಇವರನ್ನು ಪತ್ತೆ ಹಚ್ಚಿ, ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರಿಗೆ ದೂರು ನೀಡಿದ್ದೇನೆ’ ಎಂದು ಜಿಲ್ಲಾಧಿಕಾರಿ ಡಾ.ಎಸ್‌.ಬಿ. ಬೊಮ್ಮನಹಳ್ಳಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.