ADVERTISEMENT

₹12 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 13:56 IST
Last Updated 22 ಅಕ್ಟೋಬರ್ 2020, 13:56 IST
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಹಂಗರಗಾ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮುಖಂಡರೊಂದಿಗೆ ಗುರುವಾರ ಪೂಜೆ ನೆರವೇರಿಸಿದರು
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಹಂಗರಗಾ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮುಖಂಡರೊಂದಿಗೆ ಗುರುವಾರ ಪೂಜೆ ನೆರವೇರಿಸಿದರು   

ಬೆಳಗಾವಿ: ಗ್ರಾಮೀಣ ವಿಧಾನಸಭಾ ಕ್ಷೇತ್ರದ ಹಂಗರಗಾ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಗುರುವಾರ ಪೂಜೆ ನೆರವೇರಿಸಿದರು.

‘ಸಮಾಜ ಕಲ್ಯಾಣ ಇಲಾಖೆಯ ₹ 12 ಲಕ್ಷ ಅನುದಾನದಿಂದ ಭವನ ನಿರ್ಮಾಣವಾಗಲಿದೆ. ಪಂಚಾಯತ್‌ರಾಜ್ ಎಂಜಿನಿಯರಿಂಗ್ ಇಲಾಖೆಯು ನಿರ್ಮಾಣ ಕಾಮಗಾರಿ ನಡೆಸಲಿದೆ. ಗ್ರಾಮಸ್ಥರ ಬಹುಕಾಲದ ಬೇಡಿಕೆ ಈಡೇರಿಸುತ್ತಿರುವ ಖುಷಿ ನನಗಿದೆ. ಜನರ ಪ್ರೋತ್ಸಾಹ ಮತ್ತು ವಿಶ್ವಾಸದಿಂದಾಗಿ ನಾನು ಶಾಸಕಿಯಾಗಿ ಕರ್ತವ್ಯಗಳನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗುತ್ತಿದೆ’ ಎಂದರು.

ಗ್ರಾಮದ ಹಿರಿಯರು, ಮುಖಂಡರಾದ ಯುವರಾಜ ಕದಂ, ಮಹೇಶ ಕೋಲಕಾರ, ಗೋಪಾಲ ಕಾಂಬಳೆ, ಮಲ್ಲೇಶ ಚೌಗುಲೆ, ಬಾಲಕೃಷ್ಣ, ದಿಲೀಪ ಕಾಂಬಳೆ, ಕುರುಂಡಿ, ಗುಂಡು, ಬಾಳು ಪಾಟೀಲ, ಅರ್ಜುನ ಪಾಟೀಲ, ಬಸವಣ್ಣಿ, ರಾಮಚಂದ್ರ, ಕಲ್ಲಪ್ಪ, ಭೀಮಸೇನ, ಶಿವಾಂಗಿ ಹಾಗೂ ಕಾರ್ಯಕರ್ತರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.